ಮೈಸೂರು: ನಗರದ ಪೀಪಲ್ಸ್ ಪಾರ್ಕ್ಸ್ನ ಕೇಂದ್ರ ಗ್ರಂಥಾಲಯದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬಾಲ್ಯ ಫೌಂಡೇಷನ್ ಆಶ್ರಯದಲ್ಲಿ ವಿಶ್ವ ಪುಸ್ತಕ ಹಾಗೂ ಕೃತಿ ಸ್ವಾಮ್ಯ ದಿನಾಚರಣೆ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಏ.23ರಂದು ಮಧ್ಯಾಹ್ನ 12.30ಕ್ಕೆ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ನೋಟ್ ಬುಕ್ಗಳ ಬಳಕೆಯಾಗದ ಹಾಳೆಗಳ ಮರುಬಳಕೆ ಅಭಿಯಾನಕ್ಕೆ ಚಾಲನೆ, ಗ್ರಂಥಾಲಯಗಳಲ್ಲಿ ಪರಾಮರ್ಶಿಸಿ ಸರ್ಕಾರಿ ಹುದ್ದೆ ಪಡೆದವರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ.

ನಗರ ಗ್ರಂಥಾಲಯ ಪ್ರಾಧಿಕಾರದ ನಿವೃತ್ತ ಉಪ ಆಯುಕ್ತ ರಮೇಶ್ ನರಸಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಪಾಲಿಕೆಯ ಆಡಳಿತಾಧಿಕಾರಿ ನಿತೀನ್ ಪಾಟೀಲ್ ಉದ್ಘಾಟಿಸುವರು. ಬಾಲ್ಯ ಫೌಂಡೇಷನ್ನ ಸಂಸ್ಥಾಪಕ ಅನಿಲ್ ಕೆ.ಎಸ್., ಸಹ ಸಂಸ್ಥಾಪಕಿ ಉಮಾ ಅನಿಲ್ ಭಾಗವಹಿಸಲಿದ್ದಾರೆ.

ಸಮಯ ಬದಲಾವಣೆ: ಅಂದು ನಗರದ ಎಲ್ಲಾ ಶಾಖೆ, ಸೇವಾ ಕೇಂದ್ರ ಗ್ರಂಥಾಲಯಗಳಲ್ಲಿ ಪುಸ್ತಕ ಪ್ರದರ್ಶನ ಏರ್ಪಡಿಸಲಾಗುತ್ತಿದ್ದು, ಗ್ರಂಥಾಲಯಗಳು ಬೆಳಿಗ್ಗೆ 8ರಿಂದ 11.30 ಮತ್ತು ಸಂಜೆ 4ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸಲಿವೆ ಎಂದು ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕ ಮಂಜುನಾಥ್ ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-39-2103365515

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.