ಮೈಸೂರು: ನಗರದ ದೊಡ್ಡಕೆರೆ ಮೈದಾನದ ಡಿ. ದೇವರಾಜ ಅರಸು ಕ್ರೀಡಾಂಗಣದ ಕುಸ್ತಿ ಅಖಾಡದಲ್ಲಿ ಭಾನುವಾರ ಪೈಲಾನ್ವರು ನಾನಾ ಪಟ್ಟುಗಳ ಮೂಲಕ ಎದುರಾಳಿಗಳನ್ನು ಪುಡಿಗಟ್ಟಿದರು. ಮಣ್ಣು ಮುಕ್ಕದೆ, ಪುಟಿದೆದ್ದು ಪ್ರದರ್ಶನ ನೀಡಿದವರಿಗೂ ಪ್ರೇಕ್ಷಕರು ಚಪ್ಪಾಳೆ ಮೂಲಕ ಅಭಿನಂದನೆ ಸಲ್ಲಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮದಿನಾಚರಣೆ ಅಂಗವಾಗಿ ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಹಾಗೂ ಅಶೋಕಪುರಂ ಫ್ರೆಂಡ್ಸ್ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ನಾಡಕುಸ್ತಿಯಲ್ಲಿ ನಾಡಿನ ವಿವಿಧ ಭಾಗಗಳ 30 ಜೋಡಿಗಳು ಸೆಣೆಸಿದವು. ಮೈಸೂರಿನ ವಿವಿಧ ಗರಡಿಗಳ ಪೈಲ್ವಾನರ ಜೊತೆಗೆ ನೆರೆಯ ಜಿಲ್ಲೆಗಳ ಕುಸ್ತಿಪಟುಗಳೂ ಅಖಾಡದಲ್ಲಿ ಹೊರಳುತ್ತ ಜಿದ್ದಾಜಿದ್ದಿನ ಪ್ರದರ್ಶನ ತೋರಿದರು. ಹಿರಿಯ–ಕಿರಿಯ ಪೈಲ್ವಾನರ ಆಟಕ್ಕೆ ಪ್ರೇಕ್ಷಕರು ಶಿಳ್ಳೆ ಮೂಲಕ ಪ್ರೋತ್ಸಾಹಿಸಿದರು.

ಚಾಲನೆ: ಕುಸ್ತಿ ಟೂರ್ನಿಗೆ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಚಾಲನೆ ನೀಡಿದರು. ಕಾಂಗ್ರೆಸ್ ಮುಖಂಡ ಎಂ.ಕೆ. ಸೋಮಶೇಖರ್, ಮಾಜಿ ಮೇಯರ್ ಪುರುಷೋತ್ತಮ್, ಮುಖಂಡರಾದ ವಿ. ರಾಮಸ್ವಾಮಿ, ಬಿ. ಸಿದ್ದರಾಜು, ದಸಂಸ ರಾಜ್ಯ ಸಂಘಟನಾ ಸಂಚಾಲಕ ನಿಂಗರಾಜ್ ಮಲ್ಲಾಡಿ, ಕೆ. ನಂಜಪ್ಪ ಬಸವನಗುಡಿ, ನಗರ ಸಂಚಾಲಕ ಪೈಲ್ವಾನ್ ಕೃಷ್ಣ, ಎಸ್. ಮಹೇಶ್ ಕುಮಾರ್, ಅಭಿಷೇಕ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-37-1518564779

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.