ಮೈಸೂರು: ಇಲ್ಲಿನ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಭಾನುವಾರ ಕುಸ್ತಿ ರಂಗೇರಿತ್ತು. ಜಟ್ಟಿಗಳ ಸೆಣೆಸಾಟಕ್ಕೆ ಪ್ರೇಕ್ಷಕರು ಚಿತ್ ಆದರು.

ರಾಜ್ಯ ರೈತ ಸಂಘ ರೈತ ಪರ್ವ ಸಂಘಟನೆಯು 6ನೇ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಹಾಗೂ ಅಂತರರಾಜ್ಯ ಮಟ್ಟದ ನಾಡಕುಸ್ತಿಯಲ್ಲಿ ನಾಡಿನ ವಿವಿಧ ಜಿಲ್ಲೆಗಳ ಜೊತೆಗೆ ಹೊರರಾಜ್ಯಗಳ ಪೈಲ್ವಾನರೂ ಪಟ್ಟು ಪ್ರದರ್ಶಿಸಿದರು. 40 ಜೋಡಿಗಳು ಅಂಕಣದ ಆವೆ ಮಣ್ಣಿನಲ್ಲಿ ದೂಳೆಬ್ಬಿಸುತ್ತ ಸೆಣೆಸಿದವು. ಮಟ್ಟಿಯ ಮೇಲೆ ಎದುರಾಳಿಯನ್ನು ಕೆಡವಿದಾಗ ಪ್ರೇಕ್ಷಕರು ಶಿಳ್ಳೆ–ಚಪ್ಪಾಳೆ ಹೊಡೆಯುತ್ತ ಪ್ರೋತ್ಸಾಹ ತುಂಬಿದರು.

ದೇಶದ ಪ್ರಮುಖ ಕುಸ್ತಿಪಟುಗಳಲ್ಲಿ ಒಬ್ಬರಾದ ಮಹೇಂದ್ರ ಗಾಯಕ್ವಾಡ್, ನೇಪಾಳದ ದೇವದೂತ ಸೇರಿದಂತೆ ಅನೇಕ ಖ್ಯಾತನಾಮ ಪೈಲ್ವಾನರೂ ಪಾಲ್ಗೊಳ್ಳುವ ಮೂಲಕ ರಂಗೇರಿಸಿದರು. ಮಕ್ಕಳೂ ಸೇರಿದಂತೆ ವಿವಿಧ ವಯೋಮಾನದ ಜೋಡಿಗಳ ನಡುವೆ ಹಣಾಹಣಿ ನಡೆಯಿತು. ವಿಜೇತರಿಗೆ ಟ್ರೋಫಿ ವಿತರಿಸಲಾಯಿತು.

ಚಾಲನೆ: ಪುರಭವನದ ಬಳಿ ಮಧ್ಯಾಹ್ನ ಕ್ರೀಡಾಜ್ಯೋತಿ ಸ್ವೀಕರಿಸುವ ಮೂಲಕ ಮುಖಂಡ ವಿಶ್ವನಾಥ್, ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಕುಸ್ತಿ ಟೂರ್ನಿಗೆ ಚಾಲನೆ ನೀಡಿದರು.

ಸಂಘದ ಅಧ್ಯಕ್ಷ ಅರುಣ್ಕುಮಾರ್, ರಾಜ್ಯ ಕಾರ್ಯದರ್ಶಿ ಚಾಮರಾಜು ಮಂಡಕಳ್ಳಿ, ಕಾರ್ಯಾಧ್ಯಕ್ಷ ಶ್ರೀಧರನಾಯಕ್, ರಾಜ್ಯ ಸಂಚಾಲಕ ಮಂಚನಾಯಕ, ಪೈಲ್ವಾನರಾದ ರಾಜಣ್ಣ, ವೆಂಕಟೇಶ್, ಗಿರೀಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-39-2113477865

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.