ಮೈಸೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ, ಮೈಸೂರಿನವರಾದ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಕಂತಿನಲ್ಲಿ ‘ಹೊಸಮುಖ’ಕ್ಕೆ ಅವಕಾಶ ದೊರೆತಿದೆ.

ಒಮ್ಮೆ ಶಾಸಕ, ಹಾಲಿ ಎಂಎಲ್ಸಿ ಆಗಿರುವ ಅವರಿಗೆ ಸಚಿವ ಗಾದಿ ಒಲಿದುಬಂದಿದೆ.

ಮೈಸೂರಿನವರೇ ಆದ, ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಂತ್ರಿ ಮಂಡಲದಲ್ಲಿ ಸ್ಥಾನ ಪಡೆದಿದ್ದ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಕೆ.ವೆಂಕಟೇಶ್ ಅವರನ್ನು ಹೊಸ ಸಂಪುಟದಲ್ಲಿ ಸೇರಿಸಿಕೊಂಡಿಲ್ಲ. ಮುಂದಿನ ವಿಸ್ತರಣೆಯ ಸಂದರ್ಭದಲ್ಲಿ ಅವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಪ್ರಬಲ ಆಕಾಂಕ್ಷಿಯಾಗಿರುವ, ಮಾಜಿ ಸಚಿವರೂ ಆದ ನರಸಿಂಹರಾಜ ಕ್ಷೇತ್ರದ ತನ್ವೀರ್ ಸೇಠ್ ಅವರಿಗೂ ಸದ್ಯಕ್ಕೆ ಅವಕಾಶ ಸಿಕ್ಕಿಲ್ಲ.

ಈ ಬಾರಿ ಜಿಲ್ಲೆಯ ಕೇವಲ ಒಬ್ಬರಿಗೆ ಮಾತ್ರವೇ ‘ಮಣೆ’ ಹಾಕಲಾಗಿದೆ. ಇದರೊಂದಿಗೆ ಸದ್ಯದ ಮಟ್ಟಿಗೆ ಜಿಲ್ಲೆಯ ‘ಪ್ರಾತಿನಿಧ್ಯ’ 3ರಿಂದ 1ಕ್ಕೆ ಇಳಿದಿದೆ (ಮುಖ್ಯಮಂತ್ರಿ ಸ್ಥಾನವೇ ಮೈಸೂರು ಪಾಲಾಗಿತ್ತು).

ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು, 2023ರ ಚುನಾವಣೆಯಲ್ಲಿ ಕಾಂಗ್ರೆಸ್ನ 8 ಮಂದಿ ಆಯ್ಕೆಯಾಗಿದ್ದಾರೆ.

ವೈದ್ಯ ವೃತ್ತಿಯಲ್ಲಿದ್ದವರು: ತಂದೆ ಸಿದ್ದರಾಮಯ್ಯ ಅವರು ರಾಜಕೀಯದಲ್ಲಿ ಸಕ್ರಿಯವಾಗಿ, ಹಲವು ಅಧಿಕಾರ ಅನುಭವಿಸಿ ಉತ್ತುಂಗದಲ್ಲಿದ್ದರೂ ವೈದ್ಯನಾಗಿ ತಮ್ಮ ಪಾಡಿಗೆ ತಮ್ಮ ಕೆಲಸದಲ್ಲಿ ತೊಡಗಿದ್ದವರು ಡಾ.ಯತೀಂದ್ರ. ವೈದ್ಯಕೀಯ ಪದವೀಧರರಾದ ಅವರು ಆ ವೃತ್ತಿಯಲ್ಲಿ ನಿರತರಾಗಿದ್ದರು. ಆದರೆ, ರಾಜಕೀಯವಾಗಿ ಸಕ್ರಿಯವಾಗಿದ್ದ ಅಣ್ಣ ರಾಕೇಶ್ ಅವರ ಅಕಾಲಿಕ ನಿಧನದ ನಂತರದಲ್ಲಿ ಯತೀಂದ್ರ ಅವರು ರಾಜಕೀಯ ಜೀವನಕ್ಕೆ ಪ್ರವೇಶಿಸಿದರು. ತಂದೆಯ ಉತ್ತರಾಧಿಕಾರಿಯಾಗಿ ಗುರುತಿಸಿಕೊಳ್ಳಲು ಶುರು ಮಾಡಿದರು. ಅಲ್ಲಿಯವರೆಗೂ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೇ ಅಪರೂಪ ಆಗಿತ್ತು.

2016ರ ಜುಲೈ 30ರಂದು ರಾಕೇಶ್ ಬೆಲ್ಜಿಯಂ ಪ್ರವಾಸದಲ್ಲಿದ್ದ ವೇಳೆ ಅನಾರೋಗ್ಯದಿಂದ ಮೃತಪಟ್ಟರು. ಅದಾದ ನಂತರ, ಅಪ್ಪನಿಗೆ ನೆರವಾಗಲೆಂದು ರಾಜಕೀಯಕ್ಕೆ ಧುಮುಕಿದ ಯತೀಂದ್ರ ಅವರು ಬಳಿಕ ರಾಜಕಾರಣದಲ್ಲಿ ಸಕ್ರಿಯವಾಗಿದ್ದಾರೆ. ಮೊದಲ ಪ್ರಯತ್ನದಲ್ಲೇ ವಿಧಾನಸಭೆ ಪ್ರವೇಶಿಸಿದ ಹೆಗ್ಗಳಿಕೆ ಅವರದು. ಅಲ್ಲಿಯವರೆಗೆ ಅವರು ಚುನಾವಣಾ ರಾಜಕಾರಣದಲ್ಲಿ ಸ್ಪರ್ಧೆಗೆ ಬಂದಿದ್ದವರೇ ಅಲ್ಲ.

ಮೈಸೂರಿನ ವರುಣ ವಿಧಾನಸಭಾ ಕ್ಷೇತ್ರದಿಂದ ಒಮ್ಮೆ ಶಾಸಕರಾಗಿದ್ದ ಅವರು, ಹಾಲಿ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ತಂದೆ ನಂಬಿರುವ ಸಮಾಜವಾದಿ, ಸಮಾನತೆಯ ಸಿದ್ಧಾಂತದ ಹಾದಿಯಲ್ಲೇ ಸಾಗುತ್ತಾ ಗಮನಸೆಳೆದಿದ್ದಾರೆ.

ಮಗನಿಗೆ ಬಿಟ್ಟು: ವರುಣ 2008ರಲ್ಲಿ ಅಸ್ತಿತ್ವಕ್ಕೆ ಬಂದ ಕ್ಷೇತ್ರ. ಸಿದ್ದರಾಮಯ್ಯ ಅವರು 2008ರಲ್ಲಿ ಬಿಜೆಪಿಯ ಎಲ್.ರೇವಣ್ಣಸಿದ್ದಯ್ಯ ಹಾಗೂ 2013ರಲ್ಲಿ ಬಿ.ಎಸ್. ಯಡಿಯೂರಪ್ಪ ಆಪ್ತ, ಕೆಜೆಪಿಯ ಕಾ.ಪು. ಸಿದ್ದಲಿಂಗಸ್ವಾಮಿ ಅವರನ್ನು ಸೋಲಿಸಿದ್ದರು. ಆಗ ಬಿಜೆಪಿಯಿಂದ ಎಸ್.ಡಿ.ಮಹೇಂದ್ರ ಕಣದಲ್ಲಿದ್ದರು. 2018ರ ಚುನಾವಣೆಯಲ್ಲಿ ಕ್ಷೇತ್ರವನ್ನು ಪುತ್ರ ಡಾ.ಯತೀಂದ್ರ ಅವರಿಗೆ ಬಿಟ್ಟು ಕೊಟ್ಟ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಹಾಗೂ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದರು. ಚಾಮುಂಡೇಶ್ವರಿಯಲ್ಲಿ ಗೆಲುವು ಸಿಗಲಿಲ್ಲ. ಬಾದಾಮಿ ಜನರು ಸಿದ್ದರಾಮಯ್ಯ ಅವರ ಕೈಹಿಡಿದಿದ್ದರು.

2018ರಲ್ಲಿ ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ.ಯತೀಂದ್ರ ಅವರು ಮೊದಲ ಪ್ರಯತ್ನದಲ್ಲೇ ಬಿಜೆಪಿಯ ತೋಟದಪ್ಪ ಬಸವರಾಜು ಅವರನ್ನು ಸೋಲಿಸಿದ್ದರು. 2023ರ ಚುನಾವಣೆಯಲ್ಲಿ ಯತೀಂದ್ರ ಅವರು ತಂದೆಗೆ ಕ್ಷೇತ್ರ ಬಿಟ್ಟು ಕೊಟ್ಟು, ಅವರ ಪರವಾಗಿ ಪ್ರಚಾರ ಮಾಡಿದರು. ಸಿದ್ದರಾಮಯ್ಯ ಅವರು ಗೆಲುವು ಸಾಧಿಸಿ 2ನೇ ಬಾರಿಗೆ ಮುಖ್ಯಮಂತ್ರಿಯೂ ಆದರು.

ಅಧಿಕಾರ ಸಿಗಲೆಂದು...

ತನಗೆ ಕ್ಷೇತ್ರವನ್ನು ಬಿಟ್ಟುಕೊಟ್ಟ ಮಗ ಯತೀಂದ್ರ ಕ್ಷೇತ್ರದಲ್ಲಿ ಅಧಿಕಾರಯುತವಾಗಿ ಪ್ರವಾಸ ಕೈಗೊಳ್ಳಲು ಅನುಕೂಲ ಆಗಲೆಂದು, ಸಿದ್ದರಾಮಯ್ಯ ಅವರು ಯತೀಂದ್ರ ಅವರನ್ನು ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಹಾಗೂ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸದಸ್ಯರನ್ನಾಗಿ ಮಾಡಿ ಅವರಿಗೆ ಅಧಿಕಾರ ಸಿಗುವಂತೆ ನೋಡಿಕೊಂಡಿದ್ದರು.

ಬಳಿಕ, ಯತೀಂದ್ರ ಅವರನ್ನು ವಿಧಾನಸಭೆಯಿಂದ ನಡೆದ ಚುನಾವಣೆಯಲ್ಲಿ ಮೇಲ್ಮನೆಗೆ (ವಿಧಾನಪರಿಷತ್) ಕಳುಹಿಸುವಲ್ಲಿ ಯಶಸ್ವಿಯೂ ಆದರು. ಈಗ, ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿರುವ ಸಿದ್ದರಾಮಯ್ಯ ಅವರು ಮಗ ಯತೀಂದ್ರ ಅವರ ರಾಜಕೀಯ ಭವಿಷ್ಯವನ್ನು ಮತ್ತಷ್ಟು ಉಜ್ವಲಗೊಳಿಸಲು ಸಚಿವ ಸ್ಥಾನ ದೊರೆಯುವಂತೆ ನೋಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.