ಹುಣಸೂರು: ತಾಲ್ಲೂಕಿನ ಹನಗೋಡು ಭಾಗ ಸೇರಿದಂತೆ ರಾಷ್ಟ್ರೀಯ ಉದ್ಯಾನ ವೀರನಹೊಸಹಳ್ಳಿ ವ್ಯಾಪ್ತಿಯಲ್ಲಿ 30 ನಿಮಿಷ ಗುಡುಗು, ಸಿಡಿಲು ಆರ್ಭಟದೊಂದಿಗೆ ವರ್ಷದ ಮೊದಲ ಮಳೆ ಸುರಿಯಿತು.

ಗುಡುಗು ಸಿಡಿಲಿನ ಆರ್ಭಟ ಜನರಲ್ಲಿ ಆತಂಕ ಸೃಷ್ಟಿಸಿತ್ತಾರೂ ನಾಗರಹೊಳೆ ಮತ್ತು ಹನಗೋಡು ಹೋಬಳಿ ವ್ಯಾಪ್ತಿಗೆ ಮಳೆ ಸೀಮಿತಗೊಂಡಿತ್ತು. ಮಧ್ಯಾಹ್ನ 3.30ರಿಂದ 4ರವರೆಗೆ ಆರ್ಭಟ ಜೋರಾಗಿತ್ತು.

‘ರಾಷ್ಟ್ರೀಯ ಉದ್ಯಾನ ನಾಗರಹೊಳೆ ವೀರನಹೊಸಹಳ್ಳಿ ವಲಯದ ಬಹುತೇಕ ಭಾಗದಲ್ಲಿ ಮಳೆಯಾಗಿದ್ದು, ತಂಪೆರೆಯಿತು’ ಎಂದು ವಲಯ ಅರಣ್ಯಾಧಿಕಾರಿ ವಿನೋದ್ ಪ್ರಜಾವಾಣಿಗೆ ತಿಳಿಸಿದರು.

‘ಅರಣ್ಯದಲ್ಲಿ ಬೇಸಿಗೆ ಬಿಸಿಲ ಝಳ ಹೆಚ್ಚಾಗಿ ಬೆಂಕಿ ಬೀಳದಂತೆ ಇಲಾಖೆ ಸ್ಥಳಿಯರ ಸಹಕಾರದೊಂದಿಗೆ ಅರಣ್ಯದಂಚಿನಲ್ಲಿ ಹೆಚ್ಚಿನ ಪಹರೆ ಹಾಕಿ ಅರಣ್ಯಕ್ಕೆ ಎಚ್ಚರಿಕೆ ವಹಿಸಿತ್ತು. ಮಾರ್ಚ್ ಮಧ್ಯಭಾಗದಲ್ಲಿ ಮಳೆ ಬಿದ್ದಿರುವುದು ಹುಲ್ಲು ಚಿಗುರೊಡೆಯಲು ಪೂರಕವಾಗಿದೆ. ಮುಂದಿನ ಎರಡು ಮೂರು
ದಿನಗಳಲ್ಲಿ ಮಳೆ ಬಂದಲ್ಲಿ ಅರಣ್ಯ ಸುರಕ್ಷಿತವಾಗಿ ರಕ್ಷಿಸಿದಂತಾಗಲಿದೆ’ ಎಂದು ಹೇಳಿದರು.

ಆಲಿಕಲ್ಲು: ಹನಗೋಡು ಹೋಬಳಿ ಮುದಗನೂರು, ಕೋಣನಹೊಸಹಳ್ಳಿ, ನೇಗತ್ತೂರು, ದೊಡ್ಡಹೆಜ್ಜೂರು ನೇರಳಕುಪ್ಪೆ ಗ್ರಾಮದಲ್ಲಿ ಆಲಿಕಲ್ಲು ಮಳೆಯಾಗಿದೆ.

‘ವರ್ಷದ ಪ್ರಥಮ ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ಯುಗಾದಿ ಹಬ್ಬದ ಮುನ್ನಾ ಮಳೆ ಆಗಿರುವುದು ಈ ಸಾಲಿನಲ್ಲಿ ಉತ್ತಮ ಮಳೆಯಾಗುವ ಸಂಕೇತ’ ಎಂದು ಮುದಗನೂರು ಗ್ರಾಮದ ಪ್ರಗತಿಪರ ರೈತ ಸುಭಾಷ್ ತಿಳಿಸಿದರು.

‘ಯುಗಾದಿ ಹಬ್ಬದ ದಿವಸ ಸಾಂಪ್ರದಾಯಕವಾಗಿ ರೈತರು ಏರುಕಟ್ಟಿ ಹೊಲ ಉಳುಮೆ
ಮಾಡುವ ಕಾರ್ಯಕ್ಕೆ ಚಾಲನೆ ನೀಡುತ್ತಾರೆ. ಈ ಸಾಲಿನಲ್ಲಿ ಮಳೆ ಮುಂದುವರೆದಲ್ಲಿ ರೈತರು ಹೊಲ ಗದ್ದೆಗಳನ್ನು ಹಸನುಗೊಳಿಸಿ ಮುಂಗಾರು ಬೇಸಾಯಕ್ಕೆ ಅಣಿಯಾಗಲು ಸಹಕಾರವಾಗಲಿದೆ’ ಎಂದು ನೇಗತ್ತೂರು ಗ್ರಾಮದ ಪ್ರಗತಿಪರ ರೈತ ನಾಗೇಶ್ ತಿಳಿಸಿದರು.

ಗುಡುಗು ಸಿಡಿಲಿನ ಆರ್ಭಟ: ಉತ್ತಮ ಮಳೆ

ಹಂಪಾಪುರ: ಹೋಬಳಿ ಸೇರಿದಂತೆ ಎಚ್.ಡಿ. ಕೋಟೆ ತಾಲ್ಲೂಕಿನ ಬಹುಪಾಲು ಕಡೆ ಸೋಮವಾರ ಸಂಜೆ ಭಾರಿ ಸಿಡಿಲು- ಗುಡುಗುಸಹಿತ ಮಳೆಯಾಗಿದೆ. ಅಂತರಸಂತೆ ಹೋಬಳಿಯಲ್ಲೂ ಆಲಿಕಲ್ಲು ಸಹಿತ ಎರಡು ಗಂಟೆ ಮಳೆಯಾಗಿದೆ.

ವರ್ಷದ ಮೊದಲ ಮಳೆ ಇದಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ. ಸಂಜೆ ವೇಳೆ ಮಳೆ ಸುರಿದಿದ್ದರಿಂದ ಜಮೀನು, ಜಾನುವಾರು ಮೇಯಿಸಲು ತೆರಳಿದ್ದವರು ಮಳೆಯಲ್ಲೇ ನೆನೆದು ಮನೆಗಳಿಗೆ ಹಿಂದಿರುಗಿದರು. ಹಲವು ದಿನಗಳಿಂದ ಬಿಸಿನ ಬೇಗೆಗೆ ಬಸವಳಿದಿದ್ದ ಜನರು ಸೋಮವಾರ ಸುರಿದ ಮಳೆಯಿಂದಾಗಿ ಕೊಂಚ ನಿಟ್ಟಿಸಿರು ಬಿಟ್ಟಿದ್ದಾರೆ.

ಅರಣ್ಯದಲ್ಲೂ ಮಳೆ: ಬೇಸಿಗೆಯ ಬಿಸಿಲ ಝಳದಿಂದ ತತ್ತರಿಸಿದ ನಾಗರಹೊಳೆ ಅಭಯಾರಣ್ಯದಲ್ಲೂ ಮಳೆಯಾಗಿದ್ದು, ಅರಣ್ಯದಲ್ಲಿ ಕಾಳ್ಗಿಚ್ಚಿನ ಆತಂಕ ಕೆಲದಿನಗಳವರಗೆ ದೂರವಾಗಿದೆ. ಬೇಸಿಗೆ ಬಿಸಿಲು ಆರಂಭವಾಗುತ್ತಿದ್ದಂತೆ ಅರಣ್ಯದ ಹಳ್ಳಗಳಲ್ಲಿ ನೀರು ಬತ್ತಿದ್ದು, ಈ ಮಳೆಯಿಂದಾಗಿ ಮೇವು ಸಿಗಲಿದೆ.
ಮಳೆಯ ನಡುವೆಯೇ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಸೋಮವಾರ ಮಾರಮ್ಮನ ಹಬ್ಬ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.