ನಂಜನಗೂಡು: ‘ಮಾಜಿ ಸಂಸದ ದಿ.ಆರ್. ಧ್ರುವನಾರಾಯಣ್ ಅವರ 65ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಇಲ್ಲಿ ಮೇ 3ರಂದು ಸಂಜೆ 4ಕ್ಕೆ 41 ಜೊತೆ ನಾಡ ಕುಸ್ತಿ ಟೂರ್ನಿ ಹಮ್ಮಿಕೊಳ್ಳಲಾಗಿದೆ’ ಎಂದು ನಗರಸಭೆ ಮಾಜಿ ಅಧ್ಯಕ್ಷ ಶ್ರೀಕಂಠಸ್ವಾಮಿ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಧ್ರುವನಾರಾಯಣ್ ಕ್ರೀಡಾಪಟುವಾಗಿ ಕ್ರೀಡೆಗೆ ಸಾಕಷ್ಟು ಉತ್ತೇಜನ ನೀಡುತ್ತಿದ್ದರು. ಹತ್ತು ವರ್ಷ ಸಂಸದರಾಗಿ, ಶಾಸಕರಾಗಿ ಜನಪರ ಕಾರ್ಯಗಳಿಂದ ಈ ಭಾಗದ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ. ಅವರ ಸವಿನೆನಪಿನಲ್ಲಿ ಸ್ಥಳೀಯ ಕುಸ್ತಿಪಟುಗಳಿಗೆ ವೇದಿಕೆ ಕಲ್ಪಿಸಿ ಕುಸ್ತಿ ಕಲೆ ಉತ್ತೇಜಿಸುವ ಸಲುವಾಗಿ ಪಂದ್ಯ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಸಂಸದ ಸುನಿಲ್ ಬೋಸ್ ಮತ್ತು ಶಾಸಕ ದರ್ಶನ್ ಧ್ರುವನಾರಾಯಣ್ ಉದ್ಘಾಟಿಸುವರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮೊದಲಾದವರು ಭಾಗವಹಿಸುವರು’ ಎಂದರು.

ಪೈಲ್ವಾನ್ ಸಿದ್ದರಾಜು ಮಾತನಾಡಿ, ‘ಬೆಳಗಾವಿ ಪೈಲ್ವಾನ್ ಸಂಜು– ಮಹದೇವಪುರ ಪೈಲ್ವಾನ್ ವಿಕಾಸ್ ನಡುವೆ ಒಂದು ಗಂಟೆ ಮಾರ್ಫಿಟ್ ಕುಸ್ತಿ ಪಂದ್ಯ ನಡೆಯಲಿದೆ. ಗೆದ್ದವರಿಗೆ ‘ಭೀಮ ಕೇಸರಿ’ ಬಿರುದು, ಬೆಳ್ಳಿ ಗದೆ ನೀಡಲಾಗುವುದು. ಇತರ ಪಂದ್ಯಗಳಲ್ಲಿ ಗೆದ್ದವರಿಗೆ ‘ದರ್ಶನ್ ಧ್ರುವನಾರಾಯಣ ಕೇಸರಿ’ ‘ಪೈಲ್ವಾನ್ ರಂಗಯ್ಯ ಪ್ರಶಸ್ತಿ’ ಮತ್ತು ಬೆಳ್ಳಿ ಗದೆ ನೀಡಲಾಗುವುದು’ ಎಂದು ತಿಳಿಸಿದರು.

ಪೈಲ್ವಾನ್ ಸಿದ್ದರಾಜು, ನಟೇಶ್, ರಘು, ಚೇತನ್, ಶಿವು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-38-1651535508

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.