ನಂಜನಗೂಡು: ನಿಗೂಢವಾಗಿ ನಾಪತ್ತೆಯಾಗಿದ್ದ ತಾಲೂಕಿನ ಕಸುವಿನಹಳ್ಳಿಯ ವೃದ್ಧೆ ಶಿವರುದ್ರಮ್ಮ (63) ಶವವಾಗಿ ಪತ್ತೆಯಾಗಿದ್ದು, ಜಮೀನೊಂದರ ಇಂಗು ಗುಂಡಿಯಲ್ಲಿ ಮೃತ ದೇಹ ಸಿಕ್ಕಿದೆ.

ಚಿನ್ನಾಭರಣಕ್ಕಾಗಿ ಸ್ಥಳೀಯನೋರ್ವ ಕೊಲೆ ಮಾಡಿದ್ದು, ಈ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಮಹದೇವಪ್ಪ ಎಂಬಾತ ಆರೋಪಿ ಬಂಧಿಸಿದ್ದಾರೆ.

ಶಿವರುದ್ರಮ್ಮ ನಾಲ್ಕು ದಿನಗಳ ಹಿಂದೆ ಮನೆಯಿಂದ ತೆರಳಿದ್ದವರು. ಬಳಿಕ ನಾಪತ್ತೆಯಾಗಿದ್ದರು. ಈ ಬಗ್ಗೆ ದೂರು ದಾಖಲಾಗಿತ್ತು. ಅನುಮನಾಸ್ಪದವಾಗಿದ್ದ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಪತ್ತೆ ಹಚ್ಚುವ ಕಾರ್ಯಾಚರಣೆ ಆರಂಭಿಸಿದ್ದರು.

ಮೃತ ವೃದ್ಧೆ ಮೈಮೇಲೆ 70 ಗ್ರಾಂ ಚಿನ್ನಾಭರಣ ಧರಿಸಿದ್ದರು ಎನ್ನಲಾಗಿದ್ದು, ಮಹಾಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಪೂಜೆ ಸಲ್ಲಿಸುವ ಉದ್ದೇಶದಿಂದ ಬಿಲ್ವಪತ್ರೆ ಕೀಳಲೆಂದು ದೇವಾಲಯದ ಸಮೀಪಕ್ಕೆ ಆಗಮಿಸಿದ್ದರು. ಈ ಸಂದರ್ಭ ಮಹದೇವಪ್ಪನನ್ನು ನೋಡಿ ಬಿಲ್ವಪತ್ರೆ ಕಿತ್ತುಕೊಡಲು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-38-263763364

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.