ನಂಜನಗೂಡು: ದಲ್ಲಾಳಿಗಳ ಹಾವಳಿಯಿಲ್ಲದೆ ರೈತರು ಬೆಳೆದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ತಲುಪುವಂತೆ ಮಾರುಕಟ್ಟೆ ಕಲ್ಪಿಸುವ ಸಲುವಾಗಿ ‘ಶುಕ್ರವಾರದ ಸಂತೆ’ಯನ್ನು ಪುನರಾರಂಭಿಸಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

ನಗರದ ಎಪಿಎಂಸಿ ಆವರಣದಲ್ಲಿ ಶುಕ್ರವಾರದ ಚಾಲನೆ ನೀಡಿ ಮಾತನಾಡಿ, ‘ಈ ಹಿಂದೆ ನಡೆಯುತ್ತಿದ್ದ ಶುಕ್ರವಾರದ ಸಂತೆ ಜಿಲ್ಲೆಯಲ್ಲಿ ದೊಡ್ಡ ಸಂತೆ ಎಂಬ ಮಾನ್ಯತೆ ಪಡೆದಿತ್ತು, 2019ರಲ್ಲಿ ಕೋವಿಡ್ ಸಂಕ್ರಾಮಿಕದಿಂದಾಗಿ ಸಂತೆಯನ್ನು ರದ್ದುಪಡಿಸಲಾಗಿತ್ತು. ರೈತರ ಒತ್ತಾಯದ ಮೇರೆಗೆ ಸುಸಜ್ಜಿತ ಸೌಲಭ್ಯಗಳೊಂದಿಗೆ ಮತ್ತೆ ಆರಂಭಿಸಲಾಗಿದೆ’ ಎಂದರು.

‘ಸಾರ್ವಜನಿಕರಿಗೆ ಬೇಕಾದ ದವಸ, ಧಾನ್ಯ ತರಕಾರಿ ಸೊಪ್ಪುಗಳಿಂದ ಹಿಡಿದು, ರೈತರ ವ್ಯವಸಾಯಕ್ಕೆ ಬೇಕಾದ ಹಗ್ಗ, ಮೂಗುದಾರ, ಗುದ್ದಲಿ, ಕೊಡಲಿ ಸೇರಿದಂತೆ ಅಗತ್ಯ ವಸ್ತುಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದ್ದು, ಸಾರ್ವಜನಿಕರು ಸಂತೆಯಲ್ಲಿ ಖರೀದಿ ಮಾಡುವ ಮೂಲಕ ರೈತರನ್ನು ಪ್ರೋತ್ಸಾಹಿಸಬೇಕು’ ಎಂದರು.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ‘ಸಾವಯವ ತರಕಾರಿ, ಹಣ್ಣಿನ ಬೆಳೆಗಳಿಗೆ ಪ್ರತ್ಯೇಕ ಮಾರುಕಟ್ಟೆಯನ್ನು ಕಲ್ಪಿಸಬೇಕು, ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ ಮಾರುಕಟ್ಟೆ ಆರಂಭಿಸಲು ರೈತ ಸಂಘ ಹಲವು ಹೋರಾಟಗಳನ್ನು ನಡೆಸಿದೆ. ದರ್ಶನ್ ಧ್ರುವನಾರಾಯಣ ಅವರು ಸಂತೆಯನ್ನು ಪುನಶ್ಚೇತನಗೊಳಿಸುವಲ್ಲಿ ಉತ್ತಮ ಪ್ರಯತ್ನ ಮಾಡಿದ್ದಾರೆ’ ಎಂದು ಹೇಳಿದರು.

ಕಮ್ಮಾರ ಮತ್ತು ಗೆಜ್ಜಗಾರ ಸಮುದಾಯದ ರಾಜ್ಯಾಧ್ಯಕ್ಷ ರಂಗಸ್ವಾಮಿ ಮಾತನಾಡಿ, ಕಮ್ಮಾರ ವೃತ್ತಿಯನ್ನು ಅವಲಂಬಿಸಿರುವ ಸಮುದಾಯದವರಿಗೆ ತಮ್ಮ ವೃತ್ತಿಗೆ ಬೇಕಾದ ಮೂಲ ಸಾಮಗ್ರಿಗಳನ್ನು ಖರೀದಿಸಲು ಸರ್ಕಾರದಿಂದ ಅನುದಾನ ನೀಡಿ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಹಶೀಲ್ದಾರ್ ಸ್ಮಿತಾ ರಾಮು, ರೈತ ಸಂಘದ ಜಿಲ್ಲಾಧ್ಯಕ್ಷ ಸತೀಶ್ ರಾವ್, ದಸಂಸ ಸಂಚಾಲಕ ಮಲ್ಲಹಳ್ಳಿ ನಾರಾಯಣ, ಸುರೇಶ್, ಮುಖಂಡರಾದ ಕೆಂಡಗಣ್ಣಪ್ಪ, ವಿಜಯ್ ಕುಮಾರ್, ಗೋವಿಂದರಾಜು, ಸುರೇಶ್, ಎನ್.ಎಂ.ಮಂಜುನಾಥ್, ಎಪಿಎಂಸಿ ಉಪನಿರ್ದೇಶಕಿ ಸಂಗೀತ, ಎಪಿಎಂಸಿ ಕಾರ್ಯದರ್ಶಿ ಸೋಮಣ್ಣ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-38-1950404759

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.