ನಂಜನಗೂಡು: ‘ಕರ್ತವ್ಯ ನಿರ್ವಹಣೆಯಲ್ಲಿ ಸಮರ್ಪಣಾ ಭಾವ ಅತಿ ಮುಖ್ಯ’ ಎಂದು ಮೈಸೂರಿನ ರಕ್ಷಣಾ ತಂತ್ರಜ್ಞಾನ ಸಂಸ್ಥೆಯ ಜೈವಿಕ ರಕ್ಷಣಾ ವಿಭಾಗದ ಮುಖ್ಯಸ್ಥ ಆರ್.ಕುಮಾರ್ ಹೇಳಿದರು.

ತಾಲ್ಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠದ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ಫಾರ್ಮಸಿ ಮತ್ತು ಲೈಫ್ಸೈನ್ಸ್ ವಿದ್ಯಾರ್ಥಿಗಳ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶಿ ಹಾಗೂ ವಿದೇಶಿ ಭಾಷೆಗಳನ್ನು ಕಲಿಯುವುದರಿಂದ ಲೋಕಜ್ಞಾನದ ಜೊತೆಗೆ ಸಂವಹನ ಸುಲಭವಾಗುತ್ತದೆ. ವೃತ್ತಿ ಮಿತ್ರರೊಂದಿಗೆ ಗೌರವ ಹಾಗೂ ಸಹಕಾರದಿಂದ ವರ್ತಿಸುವುದನ್ನು ಕಲಿಯಬೇಕು’ ಎಂದು ಸಲಹೆ ನೀಡಿದರು.

‘ಫಾರ್ಮಸಿ ಹಾಗೂ ಲೈಫ್ಸೈನ್ಸ್ ವಿದ್ಯಾರ್ಥಿಗಳಿಗೆ ಭಾರತೀಯ ರಕ್ಷಣಾ ಕ್ಷೇತ್ರದಲ್ಲೂ ಅನೇಕ ಅವಕಾಶಗಳಿವೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದರು.

ಭಾರತೀಯ ಫಾರ್ಮಸಿ ಮಂಡಳಿಯ ಕಾರ್ಯಕಾರಿ ಸಮಿತಿಯ ಸದಸ್ಯ ಡಾ.ಸಲೀಂಉಲ್ಲಾ ಖಾನ್, ‘ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳಬೇಕು. ತಲೆಯಲ್ಲಿ ಅನಗತ್ಯ ವಿಚಾರಗಳನ್ನು ಇಟ್ಟುಕೊಂಡಿಲ್ಲದಿದ್ದರೆ ಹೊಸ ವಿಷಯಗಳ ಕಲಿಕೆಗೆ ಸಹಾಯವಾಗುತ್ತದೆ’ ಎಂದು ತಿಳಿಸಿದರು.

ಪ್ರೊ.ಜಿ.ಆರ್. ಸ್ಮಿತಾ ಮಾತನಾಡಿ, ‘ಭಾರತೀಯ ಸಂಸ್ಕೃತಿಯು ವೈಜ್ಞಾನಿಕ ನೆಲೆಗಟ್ಟಿನಿಂದ ಕೂಡಿದೆ. ವಿಜ್ಞಾನ ಹಾಗೂ ಖಗೋಳವಿಜ್ಞಾನದೊಂದಿಗೆ ಸಂಬಂಧ ಹೊಂದಿದ್ದು, ದೇವಾಲಯಗಳ ನಿರ್ಮಾಣದಲ್ಲಿ ಬಳಸಿಕೊಂಡಿರುವುದನ್ನು ನೋಡಬಹುದು’ ಎಂದರು.

ಗ್ರೂಪ್ ಫಾರ್ಮಾಸ್ಯುಟಿಕಲ್ಸ್ ಉಪಾಧ್ಯಕ್ಷ ಸುನೀಲ್ ಚಿಪ್ಲುಂಕರ್ ಮಾತನಾಡಿ, ‘ಮಾನವೀಯ ಸಂಬಂಧಗಳಲ್ಲಿ ಸಾಮರಸ್ಯವಿರಬೇಕು. ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಸಮಾಜದ ಇತರ ವ್ಯಕ್ತಿಗಳೊಂದಿಗಿನ ಸಂಬಂಧಗಳು ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತವೆ’ ಎಂದು ತಿಳಿಸಿದರು.

ಆರ್.ಎಸ್. ಹರೀಶ್ ಪ್ರಾರ್ಥಿಸಿದರು. ಡಾ.ಆನಂದ್ಕುಮಾರ್ ಟೆಂಗ್ಲಿ ಸ್ವಾಗತಿಸಿದರು. ಡಾ.ಕೆ.ಎಲ್. ಕೃಷ್ಣಾ ವಂದಿಸಿದರು. ಡಾ.ಎಚ್.ಎನ್. ವಿಶ್ವಾಸ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-38-530725757

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.