ನಂಜನಗೂಡು: ‘ಪ್ರಸ್ತುತ ದಿನಮಾನದಲ್ಲಿ ಒತ್ತಡ ಹಾಗೂ ವೇಗದ ಜೀವನಶೈಲಿಗೆ ತಡೆಯೊಡ್ಡಿ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಪಡೆಯಲು ಯೋಗ ಸಹಕಾರಿಯಾಗಿದೆ’ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

ನಗರದ ಶ್ರೀಕಂಠೇಶ್ವಸ್ವಾಮಿ ದೇವಾಲಯ ಆವರಣದಲ್ಲಿ ಭಾನುವಾರ ಗರಳಪುರಿ ಉತ್ಸವದ ಅಂಗವಾಗಿ ನಡೆದ ಯೋಗ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದಿನ ಆಹಾರ ಪದ್ಧತಿಯೂ ಹದಗೆಟ್ಟಿದೆ, ವೇಗದ ಜೀವನಶೈಲಿಯಿಂದ ಒತ್ತಡಕ್ಕೆ ಸಿಲುಕುತ್ತಿದ್ದೇವೆ. ಎಲ್ಲಾ ವೇಗಗಳಿಗೆ ಕಡಿವಾಣ ಹಾಕಿ ಜೀವನವನ್ನು ಆರೋಗ್ಯಕರಗೊಳಿಸಲು ಯೋಗ, ಧ್ಯಾನ ಅತ್ಯಂತ ಸಹಕಾರಿಯಾಗಿದೆ. ಜೀವನದ ಪ್ರತಿಯೊಂದು ಏಳಿರಿಳಿತವನ್ನು ಅತ್ಯಂತ ತಾಳ್ಮೆ, ಸಹನೆಯಿಂದ ಎದುರಿಸುವ ಗುಣವನ್ನು ಮೈಗೂಡಿಸಿಕೊಳ್ಳಲು ಪ್ರತಿದಿನ ಯೋಗಾಭ್ಯಾಸದಲ್ಲಿ ನಿರತರಾಗಬೇಕು’ ಎಂದರು.

‘ಉತ್ಸವಕ್ಕೆ ಯೋಗದ ಮೂಲಕ ಚಾಲನೆ ನೀಡಿ ಒತ್ತಡ ಜೀವನಶೈಲಿಯಿಂದ ಹೊರಬಂದು ಸುಂದರ ಜೀವನ ರೂಪಿಸಿಕೊಳ್ಳಲು ಅರಿವು ಮೂಡಿಸಲಾಗಿದೆ. ಪ್ರತಿಯೊಬ್ಬರೂ ಯೋಗ ಮಾಡುವಂತಾಗಬೇಕು, ಯೋಗ ಮಹಾಮನೆಯ ಪ್ರಕಾಶ್ ಜಿ.ಉಡಿಗಾಲ ಅವರ ಆಶಯದಂತೆ ನಗರವನ್ನು ಯೋಗ ನಗರವನ್ನಾಗಿ ಮಾಡಲು ಅಗತ್ಯ ನೆರವು ನೀಡಲು ಸಿದ್ಧ’ ಎಂದರು.

ಮಲ್ಲನಮೂಲೆ ಗುರುಕಂಬಳೀಶ್ವರ ಮಠಾಧ್ಯಕ್ಷ ಇಮ್ಮಡಿ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ‘ಯೋಗ ಹೆಚ್ಚು ಪ್ರಚಲಿತಕ್ಕೆ ಬಂದಷ್ಟು ಸಮಾಜವನ್ನು ಸುಸ್ಥಿತಿಯಲ್ಲಿಡಲು ಸಾಧ್ಯ. ನಗರದ ಯೋಗ ಮಹಾಮನೆ ನಿರಂತರವಾಗಿ ಈ ಸೇವೆಯಲ್ಲಿ ತೊಡಗಿಸಿಕೊಂಡು ಸಮಾಜದ ಉನ್ನತಿಗೆ ಶ್ರಮಿಸುತ್ತಿದೆ, ಇವರ ಸೇವೆ ಹೀಗೆ ನಿರಂತರವಾಗಿ ಸಾಗಲಿ’ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ಯೋಗ ಶಿಕ್ಷಕ ಪ್ರಕಾಶ್ ಜಿ.ಉಡಿಗಾಲ, ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷ ಆರ್.ವಿ.ರೇವಣ್ಣ, ಎನ್.ಆರ್.ಗಣೇಶ್ಮೂರ್ತಿ, ಗಾಯತ್ರಿ, ಹಂಡುವಿನಹಳ್ಳಿ ಎಚ್.ಎಸ್.ರಾಜು, ಡಿಗ್ಗೇನಹಳ್ಳಿ ಪ್ರಕಾಶ್, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಸಿ.ಎಂ.ಶಂಕರ್, ಶ್ರೀಕಂಠಸ್ವಾಮಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-38-1155135525

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.