ಹುಣಸೂರು: ತಂಬಾಕು ಬೆಳೆಯನ್ನು ರೋಗ ಮುಕ್ತವಾಗಿಸಲು, ಇಳುವರಿ ಮತ್ತು ಮಣ್ಣಿನ ಫಲವತ್ತತೆ ವೃದ್ಧಿಗೆ ‘ನ್ಯಾನೊ ಬಯೊ ಕ್ಯಾಪ್ಸುಲ್’ ಅನ್ನು ರಾಷ್ಟ್ರೀಯ ವಾಣಿಜ್ಯ ಕೃಷಿ ಸಂಶೋಧನಾ ಕೇಂದ್ರ ಆವಿಷ್ಕರಿಸಿದೆ.

ಭಾರತೀಯ ಕೃಷಿ ಸಂಶೋಧನಾ ಮಂಡಳಿ ಹಾಗೂ ಭಾರತೀಯ ಮಸಾಲೆ ಬೆಳೆಗಳ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ನಡೆಸಿದ ಆವಿಷ್ಕಾರವು ಪ್ರಾಯೋಗಿಕವಾಗಿ ಯಶಸ್ವಿಗೊಂಡಿದೆ.

ಮೈಸೂರು ಜಿಲ್ಲೆಯ ಸುಮಾರು 200ಕ್ಕೂ ಹೆಚ್ಚು ತಂಬಾಕು ಬೆಳೆಗಾರರಿಗೆ ಈ ಕ್ಯಾಪ್ಸುಲ್ ಅನ್ನು ನೀಡಲಾಗಿದೆ. ಮುಂದಿನ ವರ್ಷದಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಲು ಕೇಂದ್ರವು ನಿರ್ಧರಿಸಿದೆ.

‘ಸಂಶೊಧನಾ ಕೇಂದ್ರದ ಎರಡು ಎಕರೆ ಪ್ರದೇಶದಲ್ಲಿ ಈ ತಂತ್ರಜ್ಞಾನ ಬಳಸಿ ಬೆಳೆ ತೆಗೆಯಲಾಗಿದ್ದು, ಪ್ರಯೋಗವು ಕಳೆದ ಮೂರು ವರ್ಷದಲ್ಲಿ ಹಂತ ಹಂತವಾಗಿ ನಡೆದಿದೆ. ಕ್ಯಾಪ್ಸುಲ್ ಬಳಸಿ ಬೆಳೆಸಿದ ತಂಬಾಕು ಗಿಡದ ಎಲೆಗಳು ಹೆಚ್ಚು ಅಗಲ ಹಾಗೂ ರೋಗಮುಕ್ತವಾಗಿವೆ. ಉತ್ತಮ ಇಳುವರಿ ಕೊಟ್ಟಿರುವ ಇದು, ರೈತರ ಉತ್ಪಾದನಾ ವೆಚ್ಚವನ್ನೂ ತಗ್ಗಿಸಲಿದೆ’ ಎನ್ನುತ್ತಾರೆ ಕೇಂದ್ರದ ವಿಜ್ಞಾನಿ ಡಾ.ರಾಮಕೃಷ್ಣನ್.

‘ಕ್ಯಾಪ್ಸುಲ್ನಲ್ಲಿರುವ ರಂಜಕ, ಪೊಟ್ಯಾಷಿಯಂ, ಸಾರಜನಕ ಸೇರಿ ಅಗತ್ಯ ಪೋಷಕಾಂಶಗಳು ನೇರವಾಗಿ ಸಸಿಗಳಿಗೆ ಸಿಗುವುದರಿಂದ ಇಳುವರಿ ಉತ್ಕೃಷ್ಟವಾಗಿರಲಿದೆ’ ಎಂದು ‘ಪ್ರಜಾವಾಣಿ’ಗೆ ವಿವರಿಸಿದರು.

‘ಕ್ಯಾಪ್ಸುಲ್ ಮಣ್ಣಿಗೆ ಉಪಯುಕ್ತವಾಗುವ ಸೂಕ್ಷ್ಮ ಜೀವಿಗಳನ್ನು ಅಪಾರವಾಗಿ ಹೊಂದಿದೆ. ಅಝೇಸ್ಪಿರಿಲಮ್, ಬ್ಯಾಸಿಲಸ್, ಫ್ರಟೂರಿಯಾ ಎಂಬ ಸೂಕ್ಷ್ಮಜೀವಿಗಳನ್ನು ಒಟ್ಟಿಗೆ ಸೇರಿಸಿ ಕ್ಯಾಪ್ಸುಲ್ ಸಿದ್ದಪಡಿಸಲಾಗಿದೆ. ಸೂಕ್ಷ್ಮಜೀವಿಗಳನ್ನು ಒಟ್ಟಿಗೆ ಸೇರಿಸುವುದು ಸುಲಭವಲ್ಲ’ ಎಂದು ಹೇಳಿದರು.

‘ಉತ್ಪಾದನಾ ವೆಚ್ಚ ಕಡಿತ’

‘ತಂಬಾಕು ಸಸಿ ಮಡಿಯು ಕರಿಕಡ್ಡಿ ಸೊರಗು ಕೊಳೆ ರೋಗಕ್ಕೆ ತುತ್ತಾಗುವುದು ಸಾಮಾನ್ಯ ನ್ಯಾನೊ ಬಯೋ ಕ್ಯಾಪ್ಸುಲ್ ಬಳಸಿ ಬೆಳೆಸಿದ ತಂಬಾಕು ಸಸಿಯು ರೋಗ ಮುಕ್ತವಾಗಿದೆ. ಶೇ 75ರಷ್ಟು ಉತ್ಪಾದನಾ ವೆಚ್ಚ ಕಡಿಮೆಯಾಗಿದೆ’ ಎಂದು ಪಿರಿಯಾಪಟ್ಟಣ ತಾಲ್ಲೂಕಿನ ಕೆಗ್ಗುಂಡಿಯ ಪ್ರಗತಿಪರ ರೈತ ರಾಜು ಹೇಳಿದರು.

ಕ್ಯಾಪ್ಸುಲ್ ಬಳಕೆ ಹೇಗೆ?

200 ಲೀಟರ್ ನೀರಿನಲ್ಲಿ 10 ಕ್ಯಾಪ್ಸುಲ್ಗಳನ್ನು ಕರಗಿಸಿ 10-15 ನಿಮಿಷದ ನಂತರ ಒಂದು ಎಕರೆ ಪ್ರದೇಶದ ಗಿಡದ ಬುಡಗಳಿಗೆ ಸುರಿಯಬೇಕು. ಇಲ್ಲವೇ ಬ್ಯಾಟರಿ ಚಾಲಿತ ಪಂಪ್ನಲ್ಲಿ ಎಕರೆಗೆ 10 ಕ್ಯಾನ್ನಷ್ಟು ದ್ರಾವಣ ಸಿದ್ಧಪಡಿಸಿ ಸಿಂಪಡಿಸಬಹುದು’ ಎಂದು ವಿಜ್ಞಾನಿ ಡಾ.ರಾಮಕೃಷ್ಣನ್ ತಿಳಿಸಿದರು. ‘ದ್ರಾವಣವನ್ನು ಮರಳು ಅಥವಾ ಮಣ್ಣಿನೊಂದಿಗೆ ಮಿಶ್ರಣ ಮಾಡಿ ಸಸಿಗಳ ಬುಡಕ್ಕೆ ಹಾಕುವುದರಿಂದ ರಂಜಕ ಪೊಟ್ಯಾಶಿಯಂ ಸಾರಜನಕ ನೈಟ್ರೋಜನ್ ಸೇರಿ ಗಿಡದ ಆರೋಗ್ಯ ಮತ್ತು ಫಲವತ್ತತೆ ಹೆಚ್ಚಲಿದೆ. ಬೇರು ಗಂಟು ಮತ್ತು ಸೊರಗು ರೋಗವನ್ನು ನಿಯಂತ್ರಿಸಬಹುದು. ದ್ರಾವಣ ಸಿಂಪರಣೆ ನಂತರದ 24 ಗಂಟೆಯಲ್ಲಿ ಯಾವುದೇ ರಾಸಾಯನಿಕ ಗೊಬ್ಬರ ನೀಡಬಾರದು. ಇದಲ್ಲದೆ ಕೀಟ ನಾಶಕವನ್ನೂ ಬಳಸಬಾರದು’ ಎಂದರು.

ನ್ಯಾನೋ ಕ್ಯಾಪ್ಸುಲ್ ನೀಡಿದ ತಂಬಾಕಿನ ಇಳುವರಿ ಶೇ 15ರಿಂದ 20ರಷ್ಟು ಹೆಚ್ಚಿರುವುದು ದೃಢಪಟ್ಟಿದೆ. ಆಯ್ದ ರೈತರ ಜಮೀನಿನಲ್ಲಿ ಪ್ರಯೋಗ ನಡೆಸಲಾಗಿದೆ.
-ಡಾ.ರಾಮಕೃಷ್ಣನ್, ಮುಖ್ಯಸ್ಥರು ಎನ್ಐಆರ್ಸಿಎ ಕೇಂದ್ರ ಹುಣಸೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.