ಮೈಸೂರು: ಇಲ್ಲಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯು ‘ಹೊರಗಿನವರು - ನಮ್ಮೊಳಗಿನವರು’ ಎಂಬ ಹೊಸ ನಾಟಕವನ್ನು ರಂಗದ ಮೇಲೆ ತರಲು ಸಜ್ಜಾಗಿದೆ.

ಏ. 5ರಂದು ಸಂಜೆ 6.30ಕ್ಕೆ ರಂಗಶಾಲೆಯಲ್ಲಿ 2025–26ನೇ ಸಾಲಿನಲ್ಲಿ ತರಬೇತಿ ಪಡೆದ ರಂಗಭೂಮಿ ಡಿಪ್ಲೊಮಾ ವಿದ್ಯಾರ್ಥಿಗಳ 3ನೇ ಅಭ್ಯಾಸಿ ಪ್ರಯೋಗವಾಗಿ ಪ್ರದರ್ಶನಗೊಳ್ಳಲಿದೆ. ಶಶಿರಾಜ್ ರಾವ್ ಕಾವೂರು ಅವರ ನಾಟಕ ಇದಾಗಿದ್ದು, ಸಂಗೀತ ಸಾಂಗತ್ಯ ದಿಶಾ ರಮೇಶ್, ಚೇತನ್ ಸಿಂಗಾನಲ್ಲೂರು ಮತ್ತು ಸನತ್ ಆಚಾರ್ಯ ಅವರದ್ದು. ರಂಗ ವಿನ್ಯಾಸ ನಟನದ ಪ್ರಾಂಶುಪಾಲ ಮೇಘ ಸಮೀರ ಹಾಗೂ ನಿರ್ದೇಶನ ಮಂಡ್ಯ ರಮೇಶ್ ಅವರದು.

ನಾಟಕದ ಕುರಿತು: ‘ಹೊರಗಿನವರು - ನಮ್ಮೊಳಗಿನವರು’– ಇದು ತುಳುನಾಡಿನ ಕೊರಗ ಸಮುದಾಯದವರ ಕಥೆ. ತುಳುನಾಡಿನ ಎಲ್ಲಾ ಉನ್ನತ ಜಾತಿ ವರ್ಗದವರಿಗೂ ಈ ಕೊರಗರು ಒಂದಲ್ಲಾ ಒಂದು ಕಾರಣಕ್ಕೆ ಬೇಕು. ಊರಿನ ಜಾತ್ರೆ, ಕಂಬಳ, ಕೋಲ, ಮದುವೆ, ಮರಣ... ಇತ್ಯಾದಿ ಪ್ರತಿಯೊಂದು ಆಚರಣೆಗೂ ತುಳುನಾಡಿನಲ್ಲಿ ಕೊರಗರ ಪಾಲ್ಗೊಳ್ಳುವಿಕೆ ಅಗತ್ಯವಾಗಿತ್ತು. ಆದಾಗ್ಯೂ ಅವರನ್ನು ಉನ್ನತ ಕುಲದವರು ಶೋಷಿಸುತ್ತಿದ್ದ ಬಗ್ಗೆ ಇತಿಹಾಸವಿದೆ. ಆ ಬಗ್ಗೆ ಬೆಳಕು ಚೆಲ್ಲುವ ಕಿರು ಪ್ರಯತ್ನವನ್ನು ಈ ನಾಟಕದಲ್ಲಿ ಮಾಡಲಾಗಿದೆ. ಹಾಗೆಯೇ ಕರಾವಳಿ ಭಾಗದ ವಿಶಿಷ್ಟ ನಂಬಿಕೆ, ಆಚರಣೆ, ಮತ್ತು ಬದುಕು ಕೂಡ ಈ ನಾಟಕದ ಮುಖ್ಯ ವಸ್ತುವಾಗಿದೆ.

ಹೆಚ್ಚಿನ ಮಾಹಿತಿಗೆ ಮೊ.ಸಂ. 72595 37777 ಸಂಪರ್ಕಿಸಬಹುದು ಎಂದು ಮಂಡ್ಯ ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.