ಮೈಸೂರು: ‘ಇಲ್ಲಿನ ಶಿವರಾತ್ರೀಶ್ವರ ನಗರದ ಜೆಎಸ್ಎಸ್ ಫಾರ್ಮಸಿ ಕಾಲೇಜಿನ ರಾಜೇಂದ್ರ ಸಭಾಂಗಣದಲ್ಲಿ ಮಾರ್ಚ್ 12ರಿಂದ 18ರವರೆಗೆ ‘ರಾಷ್ಟ್ರೀಯ ಏಕೀಕರಣ ಶಿಬಿರ’ (ಎನ್ಐಸಿ 4.0) ಆಯೋಜಿಸಲಾಗಿದೆ’ ಎಂದು ಪ್ರಾಂಶುಪಾಲ ಡಾ.ಟಿ.ಎಂ. ಪ್ರಮೋದ್ಕುಮಾರ್ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಯುವ ಸಬಲೀಕರಣ ಇಲಾಖೆ, ಜೆಎಸ್ಎಸ್ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ (ಜೆಎಸ್ಎಸ್–ಎಎಚ್ಇಆರ್) ಹಾಗೂ ಎನ್ಎಸ್ಎಸ್ (ರಾಷ್ಟ್ರೀಯ ಸೇವಾ ಯೋಜನೆ) ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ನವದೆಹಲಿ, ರಾಜಸ್ಥಾನ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ 150ಕ್ಕೂ ಹೆಚ್ಚು ಎನ್ಎಸ್ಎಸ್ ಸ್ವಯಂಸೇವಕರು, ಕಾರ್ಯಕ್ರಮ ಅಧಿಕಾರಿಗಳು, 25ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘12ರಂದು ಮಧ್ಯಾಹ್ನ 3ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ‘ಪದ್ಮಶ್ರೀ’ಗೆ ಆಯ್ಕೆಯಾಗಿರುವ ಅಂಕೇಗೌಡ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಜೆಎಸ್ಎಸ್–ಎಎಚ್ಇಆರ್ ಕುಲಪತಿ ಡಾ.ಎಚ್.ಬಸವನಗೌಡಪ್ಪ ಅಧ್ಯಕ್ಷತೆ ವಹಿಸುವರು. ಕುಲಸಚಿವ ಡಾ.ಬಿ. ಮಂಜುನಾಥ್, ರಾಜ್ಯ ಎನ್ಎಸ್ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ ಭಾಗವಹಿಸುವರು’ ಎಂದು ಹೇಳಿದರು.

‘18ರಂದು ಬೆಳಿಗ್ಗೆ 10.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೇಂದ್ರ ಕ್ರೀಡಾ ಸಚಿವಾಲಯದ ಪ್ರಾದೇಶಿಕ ನಿರ್ದೇಶಕ ಡಾ.ಗಿರಿಧರ್ ಉಪಾಧ್ಯಾಯ ಸಮಾರೋಪ ಭಾಷಣ ಮಾಡುವರು. ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಅತ್ಯುತ್ತಮ ಸ್ವಯಂಸೇವಕ, ಸ್ವಯಂಸೇವಕಿಯರಿಗೆ ಪ್ರಶಸ್ತಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು’ ಎಂದು ತಿಳಿಸಿದರು.

‘ಕ್ಯಾನ್ಸರ್ ಜಾಗೃತಿ, ಸೈಬರ್ ಅಪರಾಧ, ಆಹಾರ ಕಲಬೆರಕೆ ಕುರಿತು ಜಾಗೃತಿ ಮೂಡಿಸಲಾಗುವುದು. ಮನಸ್ಸಿನ ನಿರ್ವಹಣೆ ಬಗ್ಗೆ ಮಾರ್ಗದರ್ಶನ ನೀಡಲಾಗುವುದು. ಸಿರಿಧಾನ್ಯಗಳ ಮಹತ್ವವನ್ನು ತಿಳಿಸಿಕೊಡಲಾಗುವುದು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಖಾದರ್ವಲ್ಲಿ ದಡೇಕುಲ, ಡಾ.ಮಂಜಪ್ಪ ಎಂ., ಹರೀಶ್ ಮಾಚಿಯಾ ಕೊಂಡನ್ರೇರ, ಭವಾನಿ ಶಂಕರ್, ಕಿಶೋರ್ ಎಂ., ಮಮತಾ ಸಿ.ಕೆ. ಹಾಗೂ ಸುರೇಖಾ ಎಸ್.ಪೋಯೆದ್ ಉಪನ್ಯಾಸ ನೀಡುವರು’ ಎಂದರು.

‘ನಿತ್ಯವೂ ಬೆಳಿಗ್ಗೆ 6ರಿಂದಲೇ ಶಿಬಿರಾರ್ಥಿಗಳಿಗೆ ವಿವಿಧ ಚಟುವಟಿಕೆಗಳು ನಡೆಯಲಿವೆ. ಸಂಜೆ 6ರಿಂದ 9ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.