ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್‌ಗೆ ‍ಪರಿಪೂರ್ಣ ಅವಕಾಶ ಸಿಗಲಿ: ಪೇಜಾವರ ಶ್ರೀ

Last Updated 21 ಮಾರ್ಚ್ 2023, 4:30 IST
ಅಕ್ಷರ ಗಾತ್ರ

ಮೈಸೂರು: ‘ಎಚ್‌.ವಿ.ರಾಜೀವ್ ಅವರಿಗೆ ಪರಿಪೂರ್ಣ ಅವಕಾಶಗಳು ಸಿಗಬೇಕು’ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಬಿಜೆಪಿ ಮುಖಂಡ ಎಚ್‌.ವಿ.ರಾಜೀವ್ ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿದ್ದ ವೇಳೆ ಅವರು ಮಾತನಾಡಿದರು.

‘ಸಮಾಜಮುಖಿ ಚಿಂತನೆಗಳನ್ನು ಸಾಕಾರ ಮಾಡುವ ಮನಸ್ಸನ್ನು ಅವರು ಹೊಂದಿದ್ದಾರೆ. ಅಂತಹ ಕಾರ್ಯ ಮಾಡಿ ತಮ್ಮ ಸಾಮರ್ಥ್ಯವನ್ನು ಈಗಾಗಲೇ ತೋರಿದ್ದಾರೆ. ಭಗವಂತನ ಕೃಪೆಯಿಂದ ಅಂತಹ ಅವಕಾಶಗಳು ಕೂಡಿ ಬರಲಿ’ ಎಂದರು.

‘ರಾಜೀವ್‌ಗೆ ಅವಕಾಶ ಸಿಗಬೇಕು. ಆದರೆ, ಅದಕ್ಕಾಗಿ ಮತ್ತೊಬ್ಬರನ್ನು ದೂರ ಮಾಡಬೇಕು ಎನ್ನುವುದು ನಮ್ಮ ಆಶಯ ಅಲ್ಲ. ಅವರೂ ಆಗಲಿ; ಇವರಿಗೂ ಅಂತಹ ಸ್ಥಾನ ಸಿಗಲಿ. ಸಮುದಾಯದವರು ನಮ್ಮ ಬಳಿ ಹೇಳಿಕೊಂಡಿದ್ದಾರೆ. ಆದರೆ, ನಾವು ಒಳಗಿಳಿದು ಮೂಲ ವಿಮರ್ಶೆ ಮಾಡಿಲ್ಲ. ಸಮಾಜಕ್ಕೆ ಹಾನಿಯಾಗದಂತೆ ಎಲ್ಲರಿಗೂ ಒಳ್ಳೆಯದಾಗಬೇಕು. ಯಾರ ವಿರುದ್ಧವೂ ನಾವು ಬಂದಿಲ್ಲ. ರಾಜೀವ್‌ಗೆ ಶ್ರೇಯಸ್ಸು ಹುಡುಕಿ ನಾವು ಬಂದಿದ್ದೇವೆ’ ಎಂದು ಹೇಳಿದರು.

‘ಒಂದು ವರ್ಷದಲ್ಲಿ ರಾಮ ಮಂದಿರ ನಿರ್ಮಾಣ ಪೂರ್ಣಗೊಳ್ಳಬೇಕು. ಮಂದಿರ ನಿರ್ಮಾಣ ಪೂರ್ಣವಾದರೆ ನಮ್ಮ ಕಾರ್ಯ ಮುಗಿಯುವುದಿಲ್ಲ. ರಾಮ ರಾಜ್ಯದ ಕನಸು ನನಸಾಗಬೇಕು. ಪ್ರಜಾರಾಜ್ಯದಲ್ಲಿ ಪ್ರಜೆಗಳೇ ರಾಜರು. ರಾಮ ರಾಜ್ಯದ ಕನಸು ನನಸಾಗಬೇಕಾದರೆ ಪ್ರಜೆಗಳು ರಾಮರಾಗಬೇಕು. ಸದ್ಗುಣ, ದೇಶ ಭಕ್ತಿ ಬೆಳೆಸಿಕೊಳ್ಳಬೇಕು. ರಾಮಭಕ್ತಿ‌ ಬೇರೆಯಲ್ಲ, ದೇಶಭಕ್ತಿ ಬೇರೆಯಲ್ಲ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT