ಪಿರಿಯಾಪಟ್ಟಣ: ತಾಲ್ಲೂಕಿನ ದೊರೆಕೆರೆ ಗ್ರಾಮದ ಮನೆಯ ಒಪ್ಪಾರಿನಲ್ಲಿ ಕಟ್ಟಿ ಹಾಕಿದ್ದ ಉಳುಮೆ ಮಾಡುವ ಒಂದು ಜೊತೆ ಎತ್ತುಗಳನ್ನು ಗುರುವಾರ ರಾತ್ರಿ ಕಳವು ಮಾಡಲಾಗಿದೆ.

ತಾಲ್ಲೂಕಿನ ದೊರೆಕೆರೆ ಗ್ರಾಮದ ರಾಮೇಗೌಡ ಎತ್ತುಗಳನ್ನು ಕಳೆದುಕೊಂಡಿರುವ ರೈತ. ಗುರುವಾರ ಬೆಳಿಗ್ಗೆ ಎಂದಿನಂತೆ ತಮ್ಮ ಜಮೀನಿನಲ್ಲಿ ಉಳುಮೆ ಮಾಡಿ ಸಂಜೆ ಮನೆ ಮುಂದೆ ಒಪ್ಪಾರಿನಲ್ಲಿ ಎರಡು ಎತ್ತುಗಳಿಗೆ ಹುಲ್ಲು ಹಾಕಿ ಕಟ್ಟಲಾಗಿತ್ತು. ತಡ ರಾತ್ರಿ 1 ಗಂಟೆ ಸಮಯದಲ್ಲಿ ನೋಡಿದಾಗ ಎತ್ತುಗಳು ಇರಲಿಲ್ಲ.

ಸುಮಾರು ₹ 1.5 ಲಕ್ಷ ಮೌಲ್ಯದ ಎತ್ತುಗಳಾಗಿದ್ದು, ಹುಡುಕಿಕೊಡುವಂತೆ ರಾಮೇಗೌಡ ಅವರು ಪಿರಿಯಾಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಟ್ಟಣದ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-38-1551216935

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.