ಪಿರಿಯಾಪಟ್ಟಣ: ‘ಬುದ್ಧ, ಬಸವ, ಅಂಬೇಡ್ಕರ್ ಅವರಂತಹ ಮಹನೀಯರ ಜಯಂತಿಗಳನ್ನು ನಾವು ಸಂಭ್ರಮದಿಂದ ಆಚರಿಸಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ರಾಜು ತಿಳಿಸಿದರು.

ಪಟ್ಟಣದ ವಕೀಲರ ಭವನದಲ್ಲಿ ವಕೀಲರ ಸಂಘದಿಂದ ಸೋಮವಾರ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹನೀಯರ ಸಂದೇಶ ಪಾಲಿಸಬೇಕು ಎಂದರು.

ಸಮಾನತೆ ಪ್ರತಿಪಾದಿಸಿ, ಸಂವಿಧಾನದಲ್ಲಿ ಅಳವಡಿಸುವ ಮೂಲಕ ಬದ್ಧತೆ ತೋರಿದ ಅಂಬೇಡ್ಕರ್ ಅವರು, ನಂತರ ರಚನೆಯಾದ ಎಲ್ಲಾ ಕಾನೂನುಗಳಲ್ಲಿ ಸಮಾಜಕ್ಕೆ ಬೇಕಾದ ಹಕ್ಕು, ಸೌಲಭ್ಯ, ಮೂಢನಂಬಿಕೆ ನಿಷೇಧ ಮತ್ತಿತರ ಅಂಶಗಳನ್ನು ಸೇರಿಸಿದ್ದರು ಎಂದು ಸ್ಮರಿಸಿದರು.

ಯಾವುದೇ ಸುಧಾರಣೆಯು ಒಮ್ಮೆಲೇ ಸಂಭವಿಸುವುದಿಲ್ಲ. ಕಾಲ ಕಾಲಕ್ಕೆ ಆಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನ ರಚಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಆರ್.ಯೋಗೀಶ್ ಮಾತನಾಡಿ, ಸಂವಿಧಾನದ ಶಕ್ತಿ ಏನು ಎಂಬುದನ್ನು ಅರಿಯಬೇಕಾದರೆ ಸಾಮಾನ್ಯ ರೈತನ ಮಗ, ಟೀ ಮಾರುತ್ತಿದ್ದವರು ಈ ದೇಶದ ಪ್ರಧಾನಿಯಾಗಿದ್ದಾರೆ. ಇದು ಸಂವಿಧಾನದಿಂದಲೇ ಸಾಧ್ಯ ಎಂದರು.

ಅಹಿಂಸಾ ಮಾರ್ಗ ಎಂದರೆ ತೊಂದರೆ ಕೊಡುವುದನ್ನು ತಡೆಯುವುದು. ಮಹನೀಯರ ಸಂದೇಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ನ್ಯಾಯಾಧೀಶರಾದ ಜೆ.ಶ್ವೇತಾ ಮಾತನಾಡಿ, ಹೆಣ್ಣು ಮಕ್ಕಳು ಪ್ರತಿದಿನ ಅಂಬೇಡ್ಕರ್ ಅವರನ್ನು ನೆನೆಯಬೇಕಿದೆ. ಸಂವಿಧಾನದಲ್ಲಿ ಹೆಣ್ಣಿಗೆ ಹಲವು ಸಮಾನ ಹಕ್ಕುಗಳನ್ನು ನೀಡುವ ಜೊತೆಗೆ, ಕಾನೂನಿನ ಬಲ ನೀಡಲಾಗಿದೆ ಎಂದರು.

ವಕೀಲ ಮಹದೇವಯ್ಯ ಮಾತನಾಡಿ, ಅಂಬೇಡ್ಕರ್ ಬಾಲ್ಯದಲ್ಲಿ ಅನುಭವಿಸಿದ ಅವಮಾನಗಳನ್ನು ಸವಾಲಾಗಿ ಸ್ವೀಕರಿಸಿ 32 ಪದವಿ ಪಡೆದಿದ್ದರು. ದಮನಿತರ ವರ್ಗಕ್ಕೆ ಹೋರಾಟದ ಹಾದಿಯಿಂದ ಪಡೆದ ಅನುಭವವನ್ನು ಮೂಲವಾಗಿಟ್ಟುಕೊಂಡು ಉತ್ತಮ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಧನಪಾಲ್, ಖಜಾಂಚಿ ಹರೀಶ್, ಉಪಾಧ್ಯಕ್ಷ ಚಂದ್ರೇಗೌಡ, ಎಪಿಪಿ ಶಿವಶಂಕರ್ ಗಾವಂಕರ್, ಲೋಕೇಶ್ ಮತ್ತು ಸುಭಾಷ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-38-497423975

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.