ಬೆಟ್ಟದಪುರ: ಹಸುವಿಗೆ ಹುಲ್ಲು ಹಾಕಲು ಮೆದೆಯಿಂದ ಹುಲ್ಲು ತೆಗೆಯುತ್ತಿದ್ದ ಬಾಲಕನಿಗೆ ಹಾವು ಕಚ್ಚಿ ಶನಿವಾರ ಮೃತಪಟ್ಟಿದ್ದಾನೆ.

ಕಂಪಲಾಪುರ ಗ್ರಾಮದ ಕೋಡಿ ಬಸವೇಶ್ವರ ದೇವಾಲಯ ಸಮೀಪದ ನಿವಾಸಿಗಳಾದ ಶಶಿಕಲಾ–ಮಂಜುನಾಥ್ ದಂಪತಿಯ ಪುತ್ರ ವೆಂಕಟೇಶ್ (14) ಮೃತ ಬಾಲಕ.

ತಾಯಿಯೊಂದಿಗೆ ಚಿಕ್ಕನೇರಳೆ ಸಮೀಪದ ಕೆಸುವಿನಕೆರೆ ಗ್ರಾಮದಲ್ಲಿರುವ ದೊಡ್ಡಮ್ಮನ ಮನೆ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ಆತ, ಮದುವೆ ಬಳಿಕವೂ ಅಲ್ಲಿಯೇ ಉಳಿದುಕೊಂಡಿದ್ದ. ಹುಲ್ಲು ತೆಗೆದುಕೊಳ್ಳುವಾಗ ಬಲಗೈ ಬೆರಳಿಗೆ ಹಾವು ಕಚ್ಚಿದ್ದು, ಈ ವಿಚಾರವನ್ನು ಮನೆಯವರಿಗೆ ತಿಳಿಸದೇ ಅಂಗಡಿಯಿಂದ ಪ್ಲಾಸ್ಟರ್ ತಂದು ಬೆರಳಿಗೆ ಸುತ್ತಿಕೊಂಡು ಊಟ ಮಾಡಿದ್ದಾನೆ. ಕೆಲವೇ ಸಮಯದಲ್ಲಿ ಅಸ್ವಸ್ಥಗೊಂಡ ಆತನನ್ನು ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಮೃತಪಟ್ಟಿದ್ದಾನೆ.

ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-51-1678176810

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.