ಪಿರಿಯಾಪಟ್ಟಣ: ‘ಪಟ್ಟಣದ ಸ್ವಚ್ಛತೆ ಮತ್ತು ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಪೌರಕಾರ್ಮಿಕರ ಪಾತ್ರ ಮಹತ್ವದ್ದು’ ಎಂದು ಮುಖ್ಯಾಧಿಕಾರಿ ಎಚ್.ಪಿ.ಮಧು ತಿಳಿಸಿದರು.

ಪಿರಿಯಾಪಟ್ಟಣದ ಪುರಸಭೆ ವತಿಯಿಂದ ನಿವೃತ್ತಿಗೊಂಡ ಪೌರಕಾರ್ಮಿಕ ಮಹದೇವ್ ಅವರನ್ನು ಗುರುವಾರ ಸನ್ಮಾನಿಸಿ ಮಾತನಾಡಿದರು.

‘ಪುರಸಭೆಯ ನೀರು ಮತ್ತು ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ಎಲ್ಲಾ ಹಂತದಲ್ಲಿಯೂ ಪೌರಕಾರ್ಮಿಕರು ತಮ್ಮದೇ ಶ್ರಮವನ್ನು ಹಾಕುತ್ತಿದ್ದಾರೆ ಇದರಿಂದ ಪಟ್ಟಣದಲ್ಲಿ ಸ್ವಚ್ಛತೆ, ಸೌಂದರ್ಯ ಸೇರಿದಂತೆ ಸಮರ್ಪಕ ನೀರು ನಿರ್ವಹಣೆಯಂತಹ ಸೇವೆಗಳನ್ನು ಜನರಿಗೆ ಸೂಕ್ತ ಸಮಯದಲ್ಲಿ ತಲುಪಿಸಲು ಸಾಧ್ಯವಾಗುತ್ತಿವೆ’ ಎಂದರು.

‘ಪೌರಕಾರ್ಮಿಕರು ತಮ್ಮ ಸೇವೆಯ ಜೊತೆಗೆ ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕು, ಅಲ್ಲದೇ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು’ ಎಂದರು.

35 ವರ್ಷಗಳು ಪಿರಿಯಾಪಟ್ಟಣದ ಪುರಸಭೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರ ಮಹದೇವ್ ದಂಪತಿಯನ್ನು ಸನ್ಮಾನಿಸಲಾಯಿತು.

ಆರ್ಓ ಗಿರೀಶ್, ಸಮುದಾಯ ಸಂಘಟಕಿ ಶರ್ಮಿಳಾ, ಲೆಕ್ಕಾಧಿಕಾರಿ ಪ್ರದೀಪ್, ಆರ್ಐ ರಾಮಕೃಷ್ಣ, ಎಂಜಿನಿಯರ್ ವನಿತಾ, ವೈಶಾಲಿ, ಅರೋಗ್ಯ ನಿರೀಕ್ಷಕಾರದ ಮೋಹನ್, ಪ್ರದೀಪ್, ಸಿಬ್ಬಂದಿ ಚಂದನ್, ಶರಣಪ್ಪ, ವನಿತಾ, ನಿಶ್ಚಿತಾ, ಶ್ರೀನಿವಾಸ್, ಮಹೇಶ್, ಹರೀಶ್, ಚಿನ್ನೇಶ್, ಸ್ವಾಮಿ, ಗೀತಾ, ರಾಜು, ಮಂಜುನಾಥ್, ಆರ್ಮುಗಮ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-38-1169550137

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.