ಪಿರಿಯಾಪಟ್ಟಣ: ‘ಇರುವುದೊಂದೆ ಭೂಮಿ ಅದನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ, ಭೂಮಿಯನ್ನು ಉಳಿಸಿದರೆ ನಮ್ಮ ಭವಿಷ್ಯವನ್ನು ಉಳಿಸಿದಂತೆ’ ಎಂದು ಸಿವಿಲ್ ನ್ಯಾಯಾಧೀಶ ಎಂ.ರಾಜು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ಅರಣ್ಯ ಇಲಾಖೆ, ವಕೀಲರ ಸಂಘ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ವಿಶ್ವ ಭೂ ದಿನಾಚರಣೆಯಲ್ಲಿ ಮಾತನಾಡಿದರು.

‘ನಾವು ನವೀಕರಿಸಬಹುದಾದ ಇಂಧನನ್ನು ಬಳಸಿದರೆ ಭೂಮಿಯನ್ನು ರಕ್ಷಿಸಬಹುದು. ಪ್ರಾಣಿ, ಪಕ್ಷಿ, ಅರಣ್ಯ ಮತ್ತು ನೀರನ್ನು ನಾವು ಕಾಪಾಡಬೇಕು, ಹೆಚ್ಚು ಮರಗಳನ್ನು ನೆಟ್ಟರೆ ಭೂಮಿ ಹಸಿರಾಗುತ್ತದೆ, ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸಬೇಕು’ ಎಂದರು.

ಹೆಚ್ಚುವರಿ ನ್ಯಾಯಾಧೀಶರಾದ ಜೆ.ಶ್ವೇತಾ ಮಾತನಾಡಿ, ‘ಮಣ್ಣಿನ ರಕ್ಷಣೆ ಮಾಡಬೇಕಾದರೆ ನಾವು ಮರ ಗಿಡಗಳನ್ನು ನೆಡಬೇಕು, ಮರಗಳ ಕಡಿತವನ್ನು ತಪ್ಪಿಸಬೇಕು. ಪರಿಸರಸ್ನೇಹಿ ಉತ್ಪನ್ನಗಳನ್ನು ಬಳಸಬೇಕು’ ಎಂದರು.

ವಲಯ ಅರಣ್ಯಾಧಿಕಾರಿ ಪದ್ಮಶ್ರೀ ನಂಜಪ್ಪ ಮಾತನಾಡಿ, ‘ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆ ನಮ್ಮ ಮುಂದಿನ ಪೀಳಿಗೆಯ ಬದುಕನ್ನೇ ಅಪಾಯಕ್ಕೆ ದೂಡುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ವಕೀಲರ ಸಂಘದ ಕಾರ್ಯದರ್ಶಿ ಕೆ.ಶಂಕರ್, ಉಪಾಧ್ಯಕ್ಷ ಚಂದ್ರೇಗೌಡ, ಖಜಾಂಚಿ ಹರೀಶ್, ವಕೀಲ ಪಾಲಾಕ್ಷ, ಪಾರ್ವತಿ, ಸಂತೋಷ್, ವಿಲಾಸ್, ಆನಂದ್, ಶರಣಪ್ಪ, ರವಿ, ನಟರಾಜ್, ವೀರೇಶ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-38-1976113800

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.