ಪಿರಿಯಾಪಟ್ಟಣ: ಎರಡು ದಿನಗಳಿಂದ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆ ಚುರುಕು ಪಡೆದಿದೆ.

ಭೂಮಿಯನ್ನು ಉಳುಮೆ ಮಾಡಿ ಹದ ಮಾಡಿಟ್ಟುಕೊಂಡಿದ್ದ ರೈತರು ಮಳೆಯಿಂದಾಗಿ ತಂಬಾಕು ಸಸಿಗಳ ನಾಟಿ ಮಾಡುತ್ತಿದ್ದಾರೆ. ಮಳೆ ಬೀಳಬಹುದೆಂಬ ನಿರೀಕ್ಷೆಯಿಂದ ಈಗಾಗಲೇ ಕೆಲವರು ತಂಬಾಕು ನಾಟಿ ಮಾಡಿದ್ದರು. ಸಕಾಲದಲ್ಲಿ ಬಿದ್ದ ಮಳೆಯಿಂದಾಗಿ ಉತ್ತಮ ಬೆಳವಣಿಗೆ ಕಾಣುವಂತಾಗಿದೆ.

‘ಈ ಬಾರಿ ಬಿಸಿಲಿನ ತೀವ್ರತೆಗೆ ಹಲವು ಕಡೆ ಕೆರೆ, ಕೊಳವೆಬಾವಿಗಳಲ್ಲಿ ನೀರು ಬರಿದಾಗಿತ್ತು. ಇದರಿಂದ ತೆಂಗು, ಅಡಿಕೆ, ಬಾಳೆ ಬೆಳೆಗಳು ಒಣಗುವ ಸ್ಥಿತಿ ನಿರ್ಮಾಣವಾಗಿತ್ತು. ಮಳೆಯಿಂದ 15 ದಿನಗಳು ತೊಂದರೆ ಇಲ್ಲ’ ಎನ್ನುತ್ತಾರೆ ಕೃಷಿಕ ಮಲ್ಲಿನಾಥಪುರ ಗಣೇಶ್.

ಶುಂಠಿ ಬೆಳೆಗೆ ಈ ಬಾರಿ ಉತ್ತಮ ದರ ದೊರಕಿರುವುದರಿಂದ ಶುಂಠಿ ನಾಟಿ ಮತ್ತು ಈಗಾಗಲೇ ನಾಟಿ ಮಾಡಿರುವ ಶುಂಠಿಗೆ ಉತ್ತಮ ಕೃಷಿ ಕೆಲಸ ಮಾಡಲು ಸಾಧ್ಯವಾಗುತ್ತಿದೆ. ಕೆಲವು ಭಾಗಗಳಲ್ಲಿ ಮುಸುಕಿನ ಜೋಳದ ಬಿತ್ತನೆ ಕಾರ್ಯ ಸಹ ಚುರುಕುಗೊಂಡಿದೆ.

ತಂಬಾಕು ಮಂಡಳಿ ಹರಾಜು ಮಾರುಕಟ್ಟೆಯಲ್ಲಿ ತಂಬಾಕಿಗೆ ಕಡಿಮೆ ಕೋಟಾ ನಿಗದಿಪಡಿಸಿರುವುದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಆದರೂ ಈ ಬಾರಿ ಹೆಚ್ಚಿನ ಪ್ರದೇಶದಲ್ಲಿ ನಾಟಿ ಕಾರ್ಯ ನಡೆಸುತ್ತಿರುವುದು ಬೆಲೆ ಕುಸಿತದ ಆತಂಕ ಕಾಡತೊಡಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-38-2063932346

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.