ಪಿರಿಯಾಪಟ್ಟಣ: ‘ಪಾರ ಜ್ಞಾನ ಹೊಂದಿದ್ದ ಅಂಬೇಡ್ಕರ್ ಅಂತಃಕರಣವುಳ್ಳ ವ್ಯಕ್ತಿ ಸಹ ಆಗಿದ್ದ ಕಾರಣಕ್ಕೆ ಎಲ್ಲಾ ಸಮುದಾಯದವರು ಒಪ್ಪುವಂತಹ ಸಂವಿಧಾನ ನೀಡಿದ್ದಾರೆ’ ಎಂದು ಸಚಿವ ಕೆ.ವೆಂಕಟೇಶ್ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಅಂಬೇಡ್ಕರ್ ಸಂವಿಧಾನವನ್ನು ಭಾರತ ಮಾತ್ರವಲ್ಲ, ಇಡೀ ವಿಶ್ವವೇ ಮೆಚ್ಚುವಂತಿದೆ. ಅವರ ಸಂದೇಶ ಮತ್ತು ಮಾರ್ಗದರ್ಶನ ನಮಗೆಲ್ಲರಿಗೂ ಮಾದರಿಯಾಗಬೇಕಿದೆ’ ಎಂದರು.

‘ನಾನು ಯಾವುದೇ ಸಾಮಾನ್ಯ ಜನರಿಗೆ ತೊಂದರೆ ನೀಡುತ್ತಿಲ್ಲ, ಜನರಿಗೆ ತೊಂದರೆ ನೀಡಿದವರಿಗೆ ಮಾತ್ರ ತೊಂದರೆ ಕೊಡುತ್ತಿದ್ದೇನೆ. ಇದು ಸಹ ಕಾನೂನು ಪ್ರಕಾರ ಕೆಲಸ ಮಾಡುವಾಗ ಆಗುತ್ತಿರುವ ಪ್ರಕ್ರಿಯೆ ಅಷ್ಟೇ’ ಎಂದು ಸ್ಪಷ್ಟಪಡಿಸಿದರು.

‘ಅಂಬೇಡ್ಕರ್ ಭವನ ನವೀಕರಣಕ್ಕಾಗಿ ₹1 ಕೋಟಿ ಅನುದಾನ ನೀಡುತ್ತಿದ್ದು, ಬುದ್ಧವಿಹಾರ ನಿರ್ಮಿಸಲು ಭೂಮಿ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರಾಜ್ಯಮಟ್ಟದ ನಿಗಮ ಮಂಡಳಿಗಳಲ್ಲಿ ತಾಲ್ಲೂಕಿನ ಇಬ್ಬರು ದಲಿತ ಕಾಂಗ್ರೆಸ್ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಲು ಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

‘ಒಳಮೀಸಲಾತಿಯಲ್ಲಿ ಎಬಿಸಿ ಸೇರಿದಂತೆ ಎಲ್ಲಾ ಉಪಪಂಗಡಗಳಿಗೂ ಸಮಾನ ಅವಕಾಶ ಕಲ್ಪಿಸಿದ್ದು, ಈ ಬಗ್ಗೆ ಯಾವುದೇ ಗೊಂದಲ ಸೃಷ್ಟಿಸದೆ ಮೀಸಲಾತಿಯ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ಅಂಬೇಡ್ಕರ್ ಸರ್ವ ಜನಾಂಗವನ್ನು ಒಪ್ಪಿಕೊಂಡು ಅವರಿಗಾಗಿ ದುಡಿದವರು, ಅಂಬೇಡ್ಕರ್ ಎಂದರೆ ಭಾರತದ ಅಂತಃಕರಣ. ಅವರ ಜಯಂತಿ ಜ್ಞಾನ ವಿಜ್ಞಾನದ ಜಯಂತಿ ಎಂದಾಗಬೇಕು’ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಶಿವಕುಮಾರ್ ಮಾತನಾಡಿ, ‘150ಕ್ಕೂ ಹೆಚ್ಚು ದೇಶಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಿಸುತ್ತಿದ್ದು, ಅವರ ಜನ್ಮದಿನವನ್ನು ವಿಶ್ವಜ್ಞಾನ ದಿನವೆಂದು ಆಚರಿಸುವ ಮೂಲಕ ಅವರಿಗೆ ಅಪಾರ ಗೌರವ ಸಲ್ಲಿಸಲಾಗುತ್ತಿದೆ. ಅವರನ್ನು ಜಾತಿ, ಧರ್ಮ ಮೀರಿ ನೋಡಲಾಗುತ್ತಿದೆ. ಮಾನವೀಯತೆಯುಳ್ಳ ಪ್ರತಿಯೊಬ್ಬರಿಗೂ ಅವರ ಸಂವಿಧಾನ ಎಂದು ಅಗತ್ಯವಾಗಿದ್ದು, ರಾಜಾರಾಮ್ ಮೋಹನ್ರಾಯ್ ನಂತರ ಮಹಿಳೆಯರ ಬಗ್ಗೆ ಅಪಾರ ಕಾಳಜಿ ಇಟ್ಟು ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ನೀಡಲು ಯತ್ನಿಸಿದ್ದರು’ ಎಂದು ಸ್ಮರಿಸಿದರು.

ಬುದ್ಧ ಬಿಹಾರ ನಿರ್ಮಾಣಕ್ಕಾಗಿ ಶಾಸಕರ ನಿಧಿಯಿಂದ ₹15 ಲಕ್ಷ ಮತ್ತು ಅಂಬೇಡ್ಕರ್ ಭವನದಲ್ಲಿ ಡಿಜಿಟಲ್ ಲೈಬ್ರರಿ ತೆರೆಯಲು ₹10 ನೀಡುವುದಾಗಿ ಘೋಷಿಸಿದರು.

ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ‘ಅಂಬೇಡ್ಕರ್ ನಮ್ಮ ಮನ, ಮನೆಗಳಲ್ಲಿ ನೆಲೆಸಿದ್ದಾರೆ. ಅವರ ಜಯಂತಿಯನ್ನು ದಲಿತರು ಮಾತ್ರ ಆಚರಿಸುವುದಲ್ಲ ಮೇಲ್ವರ್ಗದ ಜಾತಿಯವರು ಸಹ ಆಚರಿಸುವಂತೆ ಆಗಬೇಕು’ ಎಂದು ಆಶಿಸಿದರು.

ಸಮಾರಂಭದಲ್ಲಿ ಮೈಲ್ಯಾಕ್ ಅಧ್ಯಕ್ಷ ಎಚ್.ಡಿ. ಗಣೇಶ್, ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಎಸ್.ರಾಮು, ಸಿ.ತಮ್ಮಣ್ಣಯ್ಯ, ಪಿ.ಮಹದೇವ್, ರಾಜಯ್ಯ, ಸೋಮಶೇಖರ್, ಹೇಮಂತ್, ಶೇಖರ್, ಟಿ.ಈರಯ್ಯ, ಧನರಾಜ್, ಬಿ.ಜೆ.ಬಸವರಾಜ್, ಪಿ.ಪಿ.ಮಹದೇವ್, ಆರ್ ಎಫ್ ಒ ಪದ್ಮಶ್ರೀ ನಂಜಪ್ಪ, ಡಾ. ಸೋಮಯ್ಯ ಸೇರಿದಂತೆ ಹಲವು ದಲಿತ ಮುಖಂಡರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-38-1234037817

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.