ಪಿರಿಯಾಪಟ್ಟಣ: ಆಸ್ತಿಯಲ್ಲಿ ಪಾಲು ಕೇಳುತ್ತಿರುವ ತಂಗಿಯ ಮಗನ (ಸೋದರ ಅಳಿಯ) ಕೊಲೆಗೆ ಸುಪಾರಿ ಕೊಟ್ಟ ಆರೋಪದ ಮೇಲೆ ಮಾವ ರಾಜು ಹಾಗೂ ಆತನ ಅಳಿಯ ಸೇರಿದಂತೆ ನಾಲ್ವರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾದೆ.

ಪಟ್ಟಣದ ಬೆಟ್ಟದಪುರ ರಸ್ತೆಯಲ್ಲಿ ಟಿಂಬರ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವ ಪ್ರವೀಣ್ ಕುಮಾರ್ (33 ವರ್ಷ) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರವೀಣ್ ಕುಮಾರ್ ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬಿದರಹಳ್ಳಿ ಹುಂಡಿ ಗ್ರಾಮದವರಾಗಿದ್ದು, ಇವರ ತಾಯಿ ಜಯಮಣಿ ಅವರನ್ನು ಬಿದರಹಳ್ಳಿ ಹುಂಡಿ ಗ್ರಾಮದ ಬಸವಣ್ಣ ಎಂಬುವವರಿಗೆ ಮದುವೆ ಮಾಡಿಕೊಟ್ಟಿದ್ದರು.

ಜಯಮಣಿ ಪುತ್ರ ಪ್ರವೀಣ್ ಕುಮಾರ್ನೊಂದಿಗೆ ಪಿರಿಯಾಪಟ್ಟಣದಲ್ಲಿ ವಾಸವಿದ್ದರು.

‘ತಾಯಿ ಜಯಮಣಿ ತಂದೆ ಮನೆಯಿಂದ ಬರಬೇಕಾದ ಆಸ್ತಿಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಆಸ್ತಿ ನೀಡಲೇಬಾರದು ಎಂದು ಸೋದರ ಮಾವ ರಾಜು ಹಾಗೂ ಅವರ ಅಳಿಯ ಮಹಾಲಿಂಗ ಸ್ವಾಮಿ ಎಂಬುವವರು ನನ್ನನ್ನು ಕೊಲೆ ಮಾಡಿಸಲು ಸುಪಾರಿ ನೀಡಿದ್ದರು. ಏ.13ರ ರಾತ್ರಿ 7.30ರ ಸುಮಾರಿಗೆ ಟಿಂಬರ್ ಅಂಗಡಿ ಬಾಗಿಲು ಹಾಕಿ ಮನೆಗೆ ಹೋಗುತ್ತಿದ್ದಾಗ ಹೆಲ್ಮೆಟ್ ಧರಿಸಿ ಬಂದ ಇಬ್ಬರು ಅಪರಿಚಿತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೈ ಹಾಗೂ ದೇಹದ ಭಾಗಗಳಿಗೆ ಹೊಡೆದು ಪರಾರಿಯಾಗಿದ್ದಾರೆ’ ಎಂದು ಹಲ್ಲೆಗೊಳಗಾದ ವ್ಯಕ್ತಿ ಪ್ರವೀಣ್ ಕುಮಾರ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-40-664644918

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.