ಪಿರಿಯಾಪಟ್ಟಣ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದವರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ಶಿಕ್ಷಕರು ಪ್ರತಿಭಟನೆ ನಡೆಸಿದರು.

ಸೋಮವಾರ ನಾಮಪತ್ರಗಳ ಪರಿಶೀಲನೆ ಇತ್ತು, ಈ ವೇಳೆಗೆ ಚುನಾವಣಾಧಿಕಾರಿ ರಾಜೀನಾಮೆ ನೀಡಿದರು. ಬಿಲ್ ಕಲೆಕ್ಟರ್ ಒಬ್ಬರು ಚುನಾವಣಾಧಿಕಾರಿಯಾಗಿ ನೇಮಕವಾಗಿದ್ದೇನೆ ಎಂದು ಕಚೇರಿಗೆ ಹಾಜರಾದ ಸಂದರ್ಭದಲ್ಲಿ ಶಿಕ್ಷಕರು ಇದನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾದರು.

ಈ ಸಂದರ್ಭದಲ್ಲಿ ಪೊಲೀಸರು ಬಂದು ಪರಿಶೀಲಿಸಿ ತಹಶೀಲ್ದಾರ್ ನಿಸರ್ಗಪ್ರಿಯ ಮತ್ತು ಬಿಇಒ ರವಿಪ್ರಸನ್ನ ಅವರೊಂದಿಗೆ ಚರ್ಚಿಸಿ ಗೊಂದಲ ನಿವಾರಣೆಯಾಗಿ ಮುಂದಿನ ಆದೇಶ ಬರುವವರೆಗೆ ಸಂಘದ ಕಚೇರಿ ತೆರೆಯದಂತೆ ಸೂಚಿಸಿದರು.

‘ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಇದರಂತೆ ಶನಿವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿತ್ತು. ಇದರಲ್ಲಿ 13 ಮಂದಿ ಚುನಾವಣೆಗೆ ಆಕಾಂಕ್ಷಿಗಳಾದವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ’ ಎಂದು ಮಾಜಿ ಅಧ್ಯಕ್ಷ ಎಚ್.ಕೆ. ಶಿವಮೂರ್ತಿ ಆರೋಪಿಸಿದರು.

ಸಂಜೆ 6 ಗಂಟೆವರೆಗೂ ಪ್ರತಿಭಟನೆ ಮುಂದುವರಿಸಿದ್ದ ಶಿಕ್ಷಕರನ್ನು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಧ ಅಧ್ಯಕ್ಷ ಮಧುರೇಶ್ ಮತ್ತು ಕಾರ್ಯದರ್ಶಿ ಅನಿತಾ ಅವರು ಮನವೊಲಿಸಿ, ಶಿಕ್ಷಕರ ಪಟ್ಟಿ ಕೈಬಿಟ್ಟಿರುವವರನ್ನು ಮರುಸೇರಿಸುವಂತೆ ಮತ್ತು ಚುನಾವಣಾಧಿಕಾರಿ ನೇಮಕದ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ತಿಳಿಸಿದರು. ಚುನಾವಣೆಯನ್ನು ಮುಂದೂಡಲು ರಾಜ್ಯ ಸಂಘಕ್ಕೆ ಬಿಇಒ ಮೂಲಕ ಮನವಿ ನೀಡಿರುವುದಾಗಿ ತಿಳಿಸಿದರು. ಅಧ್ಯಕ್ಷರ ಮನವಿ ಮೇರೆಗೆ ಪ್ರತಿಭಟನೆ ಕೈಬಿಡಲಾಯಿತು.

‘ಚುನಾವಣಾಧಿಕಾರಿ ರಾಜೀನಾಮೆ ನೀಡಿರುವ ವಿಚಾರ ಗಮನಕ್ಕೆ ಬಂದಿಲ್ಲ, ನೂತನ ಚುನಾವಣಾಧಿಕಾರಿ ನೇಮಕ ಮಾಡಿರುವ ವಿಚಾರವನ್ನು ರಾಜ್ಯ ಸಂಘ ತಿಳಿಸಿಲ್ಲ. ಅಲ್ಲದೆ 13 ಮಂದಿ ಹೆಸರು ಕೈಬಿಟ್ಟಿರುವುದು ಸರಿಯಲ್ಲ. ಆದ್ದರಿಂದ ಈ ಚುನಾವಣೆಯನ್ನು ಮುಂದೂಡಿ ನ್ಯಾಯಸಮ್ಮತವಾಗಿ ಚುನಾವಣೆ ನಡೆಸುವಂತೆ ಕೋರಲಾಗಿದೆ’ ಎಂದು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಧುರೇಶ್ ತಿಳಿಸಿದರು.

ಸಂಘದ ಶ್ರೀಧರ್, ಈ.ಬಿ.ವೆಂಕಟೇಶ್, ರವಿಕುಮಾರ್, ಚಂದ್ರು, ಮಂಜುನಾಥ್ ಕೆ., ಮಲ್ಲಿಕಾರ್ಜುನ್, ಗಾಯಿತ್ರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-38-1559772990

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.