ಪಿರಿಯಾಪಟ್ಟಣ: ತಾಲ್ಲೂಕಿನ ಕಾಡಂಚಿನ ಆದಿವಾಸಿ ಗಿರಿಜನರು ಸಾಂಪ್ರದಾಯಿಕ ‘ಕುಂಡೆ ಹಬ್ಬ’ವನ್ನು ಸಂಭ್ರಮದಿಂದ ಆಚರಿಸಿದರು.

ಪಟ್ಟಣದಲ್ಲಿ ಬುಧವಾರ ಎಲ್ಲಿ ನೋಡಿದರೂ ಹಾಡಿ ಮಕ್ಕಳ ಹಾಡು, ಕುಣಿತ, ವಿಶೇಷ ವೇಷ ಭೂಷಣ ಗಮನ ಸೆಳೆದವು. 10ಕ್ಕೂ ಹೆಚ್ಚು ತಂಡಗಳಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವರನ್ನು ಅವಾಚ್ಯ ಶಬ್ದಗಳಿಂದ ಬಯ್ದು, ನಿಂದಿಸುವ ಮೂಲಕ ಸಾರ್ವಜನಿಕರಿಂದ ಕಾಣಿಕೆ ರೂಪದಲ್ಲಿ ಹಣ ಸಂಗ್ರಹಿಸಿದರು.

ಕೊಡಗಿನ ತಿತಿಮತಿ ಸಮೀಪ ಹೆಬ್ಬಾಲೆ ಅಯ್ಯಪ್ಪಸ್ವಾಮಿ ಹಾಗೂ ಭದ್ರಕಾಳಿ ದೇವಾಲಯದಲ್ಲಿ ‘ಕುದುರೆ ಹಬ್ಬ’ಅಥವಾ ‘ಕುಂಡೆ ಹಬ್ಬ’ ಜಾತ್ರೆಯು ಗುರುವಾರ ಜರುಗಲಿದ್ದು, ತಾಲ್ಲೂಕು ಸೇರಿದಂತೆ ನೆರೆಯ ಹುಣಸೂರು, ಎಚ್.ಡಿ.ಕೋಟೆ, ಕೊಡಗಿನ ವಿರಾಜಪೇಟೆ, ಪೊನ್ನಂಪೇಟೆ, ಕುಶಾಲನಗರ, ಸೋಮವಾರಪೇಟೆ ತಾಲ್ಲೂಕಿನ ಸಾವಿರಾರು ಗಿರಿಜನರು, ಕಾಲ್ನಡಿಗೆಯಲ್ಲೇ ಸುತ್ತಮುತ್ತಲ ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿ ಸಂಚರಿಸಿದರು.

ಅಯ್ಯಪ್ಪ ದೇವಾಲಯದಲ್ಲಿ ಒಂದಡೆ ಸೇರಿ ದೇವರಿಗೆ ತಾವು ತಂದ ಕೋಳಿಯನ್ನು ಹಾರಿಬಿಡುವ ಮೂಲಕ ದೇವರಿಗೆ ಹರಕೆ ಒಪ್ಪಿಸಿ ಆಶೀರ್ವಾದ ಪಡೆಯುವುದು ಸಂಪ್ರದಾಯವಾಗಿದೆ.

ಆಕ್ರೋಶ ಹೊರ ಹಾಕುವ ಗಿರಿಜನರು: ಈ ಹಿಂದೆ ಕೊಡಗಿನ ಜಮೀನ್ದಾರರು ಕೂಲಿ ಕೆಲಸಕ್ಕಾಗಿ ಗಿರಿಜನರನ್ನು ಕರೆದುಕೊಂಡು ವರ್ಷವಿಡೀ ದುಡಿಸಿಕೊಂಡು ನಿಂದಿಸಿ, ಶೋಷಣೆ ಮಾಡುತ್ತಿದ್ದರು. ಇದರ ಪ್ರತೀಕಾರವಾಗಿ ಅವರ ವಿರುದ್ಧ ಆಕ್ರೋಶ ಹೊರಹಾಕಲು ಗಿರಿಜನರು ಈ ‘ಕುಂಡೆ ಹಬ್ಬ’ ಆಚರಿಸಿಕೊಂಡು ಬರುತ್ತಿರುವುದು ವಾಡಿಕೆ.

ಕಾಡಿನ ದಾರಿಯಲ್ಲೇ ನಡೆದು ಸಾಗಿ, ಸಾರ್ವಜನಿಕರಿಂದ ವಸೂಲಿ ಮಾಡಿದ ಹಣ ಮತ್ತು ದವಸ-ಧಾನ್ಯಗಳನ್ನು ಗೋಣಿಕೊಪ್ಪ ರಸ್ತೆಯ ತಿತಿಮತಿ ಬಳಿ ಇರುವ ದೇವರಪುರದ ಭದ್ರಕಾಳಿ ಹಾಗೂ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಕೊಂಡೊಯ್ದು ದೇವರಿಗೆ ತಾವು ಸಂಗ್ರಹಿಸಿದೆಲ್ಲವನ್ನೂ ಸಮರ್ಪಸಿ ಕುದುರೆ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಹಬ್ಬದ ನೆಪದಲ್ಲಿ ತಾವಾಡಿದ ನಿಂದನಾತ್ಮಕ ಮಾತುಗಳಿಗಾಗಿ (ಮಾಡಿದ ತಪ್ಪಿಗಾಗಿ) ದೇವರ ಮುಂದೆ ಮಂಡಿಯೂರಿ ಕ್ಷಮೆಯಾಚಿಸಿ, ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-38-418163467

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.