ಪಿರಿಯಾಪಟ್ಟಣ: ತಾಲ್ಲೂಕಿನಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿದ್ದರೂ ಸಚಿವ ಕೆ. ವೆಂಕಟೇಶ್ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ. ಪ್ರಸನ್ನ ಆರೋಪಿಸಿದರು.

ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ 4 ರಾಗಿ ಖರೀದಿ ಕೇಂದ್ರಗಳಲ್ಲೂ ತೂಕದ ಅಳತೆಯಲ್ಲಿ 4 ಕೆ.ಜಿ. ರಾಗಿಯನ್ನು ಕಳೆಯುತ್ತಾರೆ. ರೈತರಿಂದ ರಾಗಿ ಖರೀದಿಸಲು ಲಂಚ ನೀಡಬೇಕು ಎಂದು ರೈತರು ಸಂಕಷ್ಟ ತೋಡಿಕೊಳ್ಳುತ್ತಿದ್ದಾರೆ. ತಂಬಾಕಿಗೆ ಬೆಲೆ ಕುಸಿತದಿಂದ ರೈತ ಸಂಘಗಳು ತಂಬಾಕು ಮಂಡಳಿ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಿದೆ. ರೈತರೊಂದಿಗೆ ಕೈಜೋಡಿಸಬೇಕಾದ ಸಚಿವ ಕೆ. ವೆಂಕಟೇಶ್ ಮೌನವಹಿಸಿದ್ದಾರೆಎಂದು ದೂರಿದರು.

‘ಜಿಎಸ್ಟಿ ರೂಪದಲ್ಲಿ ತಂಬಾಕಿನಿಂದ ಬರುವ ಶೇ 40 ಆದಾಯವನ್ನು ರಾಜ್ಯ ಸರ್ಕಾರವು ಪಡೆಯುತ್ತಿದ್ದು, ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದಷ್ಟೇ ಜವಾಬ್ದಾರಿ ಇದೆ. ಕೇಂದ್ರದಷ್ಟೇ ಜವಾಬ್ದಾರಿ ಇರುವ ರಾಜ್ಯ ಸರ್ಕಾರ ರೈತರ ಕಣ್ಣೀರ ಮೇಲೆ ರಾಜಕೀಯ ಮಾಡುವುದನ್ನು ಬಿಟ್ಟು ರೈತರಿಗೆ ನ್ಯಾಯ ಕೊಡಿಸಬೇಕಾಗಿದೆ ಎಂದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಕ್ಸ್ ರೇ ಯಂತ್ರ ಕೆಟ್ಟಿದ್ದು, ಸಚಿವರು ಕ್ರಮಕೈಗೊಂಡಿಲ್ಲ. ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದ್ದು, ವೈದ್ಯರ ಕೊರತೆ, ರೋಗಿಗಳಿಗೆ ಸ್ಪಂದಿಸದ ವೈದ್ಯರಿದ್ದು, ಸಕಾಲದಲ್ಲಿ ಸೂಕ್ತಚಿಕಿತ್ಸೆ ದೊರಕದಾಗಿದೆ. ಕಗ್ಗುಂಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯ ಮೇಲೆ ಆರೋಪ ಮಾಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಪರೋಕ್ಷವಾಗಿ ನನ್ನ ಮೇಲೆ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಾ. ಪಂ. ಮಾಜಿ ಸದಸ್ಯ ಎಸ್.ರಾಮು ಮಾತನಾಡಿದರು.ತಾ. ಪಂ. ಮಾಜಿ ಸದಸ್ಯ ಎ.ಟಿ. ರಂಗಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಕೆ. ಮಹೇಶ್, ಮುಖಂಡರಾದ ಸಿ. ಎನ್. ರವಿ, ಕುಮಾರ್, ವಿದ್ಯಾಶಂಕರ್, ಪೆಪ್ಸಿ ಕುಮಾರ್, ಗಣೇಶ್, ಅಪೂರ್ವ ಮೋಹನ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-38-1794279117

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.