ಮೈಸೂರು: ‘ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು, ನಕಾರಾತ್ಮಕ ಆಲೋಚನೆಗಳನ್ನು ದೂರ ಮಾಡಿ ಧನಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು’ ಎಂದು ‘ಸಂಜೀವಿನಿ’– ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಕಾತ್ಯಾಯಿನಿದೇವಿ ಸಲಹೆ ನೀಡಿದರು.

ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠದ ಸಹಯೋಗದಲ್ಲಿ ಶಿಕ್ಷಕರಿಗೆ ಹಮ್ಮಿಕೊಂಡಿರುವ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಒತ್ತಡ ನಿವಾರಣೆಗೆ ಶಿಬಿರಗಳು ಪೂರಕವಾಗಲಿ’ ಎಂದು ಆಶಿಸಿದ ಅವರು, ‘ಒತ್ತಡದ ಬದುಕು ಸಮಾಜದ ಎಲ್ಲಾ ವರ್ಗದ ಜನರ ಮೇಲೆ ಪರಿಣಾಮ ಬೀರಿ ಅನೇಕ ರೋಗಗಳಿಗೆ ಮೂಲವಾಗುತ್ತಿದೆ. ಈ ಶಿಬಿರದಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳು ಒತ್ತಡ ನಿವಾರಣೆಗೆ ಪೂರಕವಾಗಿವೆ. ಶ್ರೀಮಠದ ದೈವಿಕ ಪರಿಸರದಲ್ಲಿ ಪಡೆಯುವ ಅನುಭವವೇ ಅನನ್ಯವಾದುದು’ ಎಂದರು.

ಪತ್ರಕರ್ತೆ ರಶ್ಮಿ ಕೋಟಿ ಮಾತನಾಡಿ, ‘ಶಿಕ್ಷಣ ಸಂಸ್ಥೆಯ ಗುಣಮಟ್ಟ ಅಳೆಯುವುದು ಅಲ್ಲಿನ ಶಿಕ್ಷಕರಿಂದ. ಶಿಕ್ಷಣ ಪರೀಕ್ಷೆಗೆ ಸೀಮಿತವಲ್ಲ. ಮಕ್ಕಳಿಗೆ ಬದುಕಿನ ಎಲ್ಲ ಸವಾಲುಗಳನ್ನು ಎದುರಿಸುವ, ಗೆಲುವು ಮತ್ತು ಸೋಲನ್ನು ಸಮಚಿತ್ತದಿಂದ ಸ್ವೀಕರಿಸುವ, ಆತ್ಮವಿಶ್ವಾಸ ತುಂಬುವ ಶಕ್ತಿಯಾಗಬೇಕು. ಇದರಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾದುದು’ ಎಂದು ಅಭಿಪ್ರಾಯಪಟ್ಟರು.

ಬಸವನಬಾಗೇವಾಡಿಯ ಅಕ್ಕನಾಗಮ್ಮ ಪ್ರೌಢಶಾಲೆಯ ಶಿಕ್ಷಕ ಅಶೋಕ ಹಂಚಲಿ ಮಾತನಾಡಿ, ‘ದೇಶದ ಭವಿಷ್ಯ ಶಾಲಾ ಕೊಠಡಿಗಳಲ್ಲಿ ನಿರ್ಮಾಣವಾಗುತ್ತದೆ. ಮಕ್ಕಳಲ್ಲಿ ದೇಶಭಕ್ತಿ, ಕರುಣೆ, ಅನುಕಂಪ, ಪ್ರೀತಿ ಮೊದಲಾದ ಮೌಲ್ಯಗಳನ್ನು ತುಂಬಬೇಕು. ಭಾರತದ ಸಂಸ್ಕೃತಿ ಶ್ರೇಷ್ಠವಾಗಿದ್ದು, ಅದನ್ನು ಅಳವಡಿಸಿಕೊಳ್ಳುವಂತೆ ಮಕ್ಕಳನ್ನು ಪ್ರೇರೇಪಿಸಬೇಕು’ ಎಂದರು.

ಜ್ಞಾನ ಬೆಳೆಸಿಕೊಳ್ಳಿ:

‘ವೇದ, ಉಪನಿಷತ್ತು, ವಚನ ಸಾಹಿತ್ಯದಲ್ಲಿ ಅಪಾರ ಜ್ಞಾನವಿದೆ. ಅದನ್ನು ಅಭ್ಯಾಸ ಮಾಡಬೇಕು. ಪ್ರಸ್ತುತ ಸಮಾಜದಲ್ಲಿ ಹೆಚ್ಚು ಬುದ್ಧಿವಂತ ಮಕ್ಕಳಿದ್ದಾರೆ. ಆದರೆ, ಹೃದಯವಂತರ ಸಂಖ್ಯೆ ಕಡಿಮೆಯಾಗಿದೆ. ಆ ನಿಟ್ಟಿನಲ್ಲಿ ಮಕ್ಕಳ ಹೃದಯದಲ್ಲಿ ಉತ್ತಮ ಅಂಶಗಳನ್ನು ಬಿತ್ತಿ ವಿಶಾಲ ಮನೋಭಾವ ಬೆಳೆಸಬೇಕು’ ಎಂದು ಹೇಳಿದರು.

‘ಭಾರತೀಯ ಸಂಸ್ಕೃತಿಯು ಆಧ್ಯಾತ್ಮಿಕ ನೆಲಗಟ್ಟಿನಲ್ಲಿ ಪ್ರಪಂಚಕ್ಕೆ ದಾರಿ ತೋರುವ ಬೆಳಕಾಗಿದೆ’ ಎಂದು ತಿಳಿಸಿದರು.

ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ರಮೇಶ ನರಸಯ್ಯ, ‘ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಗಳ ಮಾತೃ. ಮುಂದಿನ ಪೀಳಿಗೆಗೆ ಹಾಗೂ ಸಮಾಜಕ್ಕೆ ಮಾರ್ಗದರ್ಶಕವಾಗಿದೆ. ಶಿಕ್ಷಕರು ವೃತ್ತಿಗೆ ನ್ಯಾಯ ಒದಗಿಸಲು ಉಲ್ಲಾಸದಿಂದ ಇರಬೇಕು’ ಎಂದರು.

ಶಿಬಿರದಲ್ಲಿ 160 ಶಿಕ್ಷಕರು ಪಾಲ್ಗೊಂಡಿದ್ದಾರೆ.

ಪ್ರತಿಮಾ ಎಂ.ಆರ್. ಪ್ರಾರ್ಥಿಸಿದರು. ದೇವಿಕಾ ಎಂ. ಸ್ವಾಗತಿಸಿದರು. ಚೇತನ್ಕುಮಾರ್ ಎಸ್.ವಿ. ವಂದಿಸಿದರು. ಚೇತನ್ ಕುಮಾರ್ ಎಚ್.ಎಂ. ನಿರೂಪಿಸಿದರು.

ಪ್ರಾರ್ಥನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.