ಮೈಸೂರು: ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಆರ್ಎಸ್ಎಸ್ ಬಗ್ಗೆ ಲಘುವಾಗಿ ಮಾತನಾಡುವ ಮೂಲಕ, ದೇಶದಾದ್ಯಂತ ಕೋಮು ದಳ್ಳುರಿ ಸೃಷ್ಟಿಸಲು ಪ್ರಚೋದನೆ ನೀಡಿದ್ದಾರೆ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ದೂರಿದರು.

ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮಲ್ಲಿಕಾರ್ಜುನ ಖರ್ಗೆ 21ನೇ ಶತಮಾನದ ಮಹಮದ್ ಅಲಿ ಜಿನ್ನಾ. ಆ ಅವತಾರದಲ್ಲೇ ಅವರು ಮಾತನಾಡಿದ್ದಾರೆ. ಜಿನ್ನಾ ಆಗಿನ ಮುಸ್ಲಿಂ ಲೀಗ್ ಅಧ್ಯಕ್ಷ. ಈಗ ಖರ್ಗೆ’ ಎಂದು ಆರೋಪಿಸಿದರು.

‘ಮರಿ ಖರ್ಗೆಗೆ (ಸಚಿವ ಪ್ರಿಯಾಂಕ್ ಖರ್ಗೆ) ಆರ್ಎಸ್ಎಸ್ ಟೀಕಿಸುವ ಹುಚ್ಚು. ಮಗನಿಗೆ ಬಂದಿದ್ದ ಹುಚ್ಚು ಈಗ ಅಪ್ಪನಿಗೆ (ಮಲ್ಲಿಕಾರ್ಜುನ ಖರ್ಗೆ) ಬಂದಿದೆ. ಆರ್ಎಸ್ಎಸ್ ಬಗ್ಗೆ ಮಾತಾಡದಿದ್ದರೆ ಅಪ್ಪ - ಮಗನಿಗೆ ತಿಂದಿದ್ದು ಜೀರ್ಣವಾಗುವುದಿಲ್ಲ. ಎಐಸಿಸಿ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಮಲ್ಲಿಕಾರ್ಜುನ ಖರ್ಗೆ ಆ ರೀತಿ ಹೇಳಿರಬಹುದು’ ಎಂದು ವಾಗ್ದಾಳಿ ನಡೆಸಿದರು.

‘ಆರ್ಎಸ್ಎಸ್ ಅನ್ನು ಬೆಳೆಸಿರುವುದು ಹಿಂದೂಗಳು. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಹಿಂದುಗಳನ್ನೇ ವಿಷ ಸರ್ಪ ಎಂದಿದ್ದಾರೆ’ ಎಂದು ದೂರಿದರು.

‘ಮುಸ್ಲಿಮರು ಮಲ್ಲಿಕಾರ್ಜುನ ಖರ್ಗೆಯ ಇಡೀ ಕುಟುಂಬವನ್ನೇ ಸುಟ್ಟು ಹಾಕಿತ್ತು. ಮನೆಯಲ್ಲಿ ಇದ್ದಿದ್ದರೆ ಅವರೂ ಸುಟ್ಟು ಹೋಗುತ್ತಿದ್ದರು. ಅಂತಹ ಮುಸ್ಲಿಮರ ಪರವಾಗಿ ನಿಂತಿರುವುದು ಶೋಚನೀಯ. ಮುಸ್ಲಿಮರ ಓಲೈಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಂತ ಖರ್ಗೆ ಮುಂದಿದ್ದಾರೆ’ ಎಂದು ಆರೋಪಿಸಿದರು. ‘ಅವರ ಮೇಲೆ ಕಠಿಣ ಕ್ರಮ ಆಗಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.