ತಿ.ನರಸೀಪುರ: ಒಳಮೀಸಲಾತಿ ಇಲ್ಲದೇ ನೇಮಕಾತಿ ಮಾಡಿರುವ ಆದೇಶವನ್ನು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿ ತಾಲ್ಲೂಕು ಮಾದಿಗ ಸಂಘಟನೆಗಳ ಒಕ್ಕೂಟದ ಸದಸ್ಯರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಬೈರಾಪುರ ಗ್ರಾಮದ ಬಾಬು ಜಗಜೀವನರಾಂ ಪ್ರತಿಮೆ ಮುಂಭಾಗದಲ್ಲಿ ಸೇರಿದ್ದ ಮಾದಿಗ ಸಮುದಾಯದ ಮುಖಂಡರು ಮೆರವಣಿಗೆ ಮೂಲಕ ತಾಲ್ಲೂಕು ಆಡಳಿತ ಕಚೇರಿಗೆ ತೆರಳಿ ಧರಣಿ ನಡೆಸಿದರು.

ತಾಲ್ಲೂಕು ಮಾದರ ಮಹಾಸಭಾ ಅಧ್ಯಕ್ಷ ಮೂಗೂರು ಬಲ್ಲಯ್ಯ ಮಾತನಾಡಿ, ‘ಸಾಮಾಜಿಕ ನ್ಯಾಯದ ಪರಿಶಿಷ್ಟ ಜಾತಿ ಒಳಮೀಸಲಾತಿಯಂತೆ ಹುದ್ದೆಗಳನ್ನು ಭರ್ತಿ ಮಾಡಲೆಂದೇ 2024ರ ಅ.28ರಿಂದ ತಡೆ ಹಿಡಿಯಲಾದ ಹುದ್ದೆಗಳಿಗೆ ಒಳ ಮೀಸಲಾತಿ ತಪ್ಪಿಸಿ, ನಮ್ಮ ಸಮುದಾಯದ ಕೆ.ಎಚ್.ಮುನಿಯಪ್ಪ ಅವರ ತೀವ್ರ ವಿರೋಧದ ನಡುವೆಯೇ ರಜೆ ಇದ್ದ ವೇಳೆಯೇ ಮೀಸಲಾತಿ ತಪ್ಪಿಸಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಫೆ.27ರಂದು ಹೊರಡಿಸಿರುವ ಆದೇಶ ಕೂಡಲೇ ಹಿಂಪಡೆಯಬೇಕು’ಎಂದು ಅವರು ಆಗ್ರಹಿಸಿದರು.

‘ಪರಿಶಿಷ್ಟ ಜಾತಿ, ಸಮುದಾಯಗಳ ಹಿತ ಕಾಪಾಡುವುದಾಗಿ ಬಲಗೈ ಸಮಾಜದ ಪ್ರತಿನಿಧಿಯಂತೆ ವರ್ತಿಸುತ್ತಿರುವ ಸಂವಿಧಾನ ವಿರೋಧಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಅವರ ರಾಜೀನಾಮೆಗೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಗೂ ಡಿಪಿಎಆರ್ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ತಹಶೀಲ್ದಾರ್ ಸುರೇಶಾಚಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮಾದಿಗ ಸಂಘಟನೆಯ ರಾಜ್ಯ ಹೋರಾಟಗಾರ ರಾಚಪ್ಪ ಹುಣಸೂರು, ಮರಡೀಪುರ ರವಿಕುಮಾರ್, ಜಿಲ್ಲಾ ಡಿಎಸ್ಎಸ್ ಜಿಲ್ಲಾ ಸಂಚಾಲಕ ಹಲಗಯ್ಯನಹುಂಡಿ ಶಂಕರ್, ತಾಲ್ಲೂಕು ಅರುಂಧತಿ ಸಹಕಾರ ಸಂಘದ ತಾಲ್ಲೂಕು ಅಧ್ಯಕ್ಷ ಕೆಂಚಪ್ಪ, ಮಾಜಿ ಅಧ್ಯಕ್ಷ ಹುಣಸೂರು ಪುಟ್ಟಯ್ಯ, ವಾಟಾಳು ಪುಟ್ಟಸ್ವಾಮಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ರಂಗಚಾರಿಹುಂಡಿ ಸುನೀಲ್, ಹೊಸಹಳ್ಳಿ ಚಿನ್ನಸ್ವಾಮಿ, ಗೋಪಾಲಪುರ ಮಂಜುನಾಥ್, ಸಿದ್ದನಹುಂಡಿ ಗೋಪಿ, ಆನಂದ್, ಕೆಬ್ಬೆ ಭಾಸ್ಕರ್, ಜವರಪ್ಪ, ಎಚ್.ಡಿ. ಕೋಟೆ ರಾಜು, ಕೆಆರ್ಎಸ್ ಪಕ್ಷದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗುರುಸಿದ್ದಯ್ಯ ವಿಜಾಪುರ ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.