ಹುಣಸೂರು (ಮೈಸೂರು ಜಿಲ್ಲೆ): ಇಲ್ಲಿನ ಖರೀದಿ ಕೇಂದ್ರಕ್ಕೆ ರಾಗಿ ತರುವ ರೈತರು ದಿನಗಟ್ಟಲೆ ಕಾಯುತ್ತಿದ್ದಾರೆ. ರಾಗಿಯನ್ನು ಟ್ರ್ಯಾಕ್ಟರ್ನಲ್ಲೇ ಇರಿಸಲು ₹5ಸಾವಿರದಿಂದ ₹8 ಸಾವಿರದವರೆಗೂ ಹೆಚ್ಚುವರಿ ವೆಚ್ಚ ಅವರ ಮೇಲೆ ಬಿದ್ದಿದೆ. ಇದರೊಂದಿಗೆ, ‘ಗುಣಮಟ್ಟ ದೃಢೀಕರಿಸಲು ಸಿಬ್ಬಂದಿ ಲಂಚ ಕೇಳುತ್ತಿದ್ದಾರೆ’ ಎಂದು ರೈತರು ಆರೋಪಿಸಿದ್ದಾರೆ.

ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕೇಂದ್ರ ಆರಂಭವಾಗಿ ತಿಂಗಳು ಕಳೆದರೂ ಖರೀದಿ ಪ್ರಕ್ರಿಯೆ ಸಂಕೀರ್ಣವಾಗಿಯೇ ಉಳಿದಿದೆ. ಟೋಕನ್ ವ್ಯವಸ್ಥೆ ಇದ್ದರೂ ಕಾಯುವುದು ತಪ್ಪಿಲ್ಲ.

ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮಂಡಳಿಯು ಪ್ರತಿ ಕ್ವಿಂಟಲ್ ರಾಗಿಯನ್ನು ₹4,886ರಂತೆ ಖರೀದಿಸುತ್ತಿದೆ. ‘ನಿಯಮಗಳನ್ನು ಪಾಲಿಸಿದರೂ ಹೆಚ್ಚುವರಿ ಖರ್ಚು ಮಾಡಬೇಕಾಗಿದೆ’ ಎನ್ನುತ್ತಾರೆ ನಿಲುವಾಗಿಲು ಗ್ರಾಮದ ರಾಗಿ ಬೆಳೆಗಾರ ರಮೇಶ್.

‘ರಾಗಿ ಗುಣಮಟ್ಟ ಪರಿಶೀಲಿಸುವ ವಿಭಾಗದಲ್ಲಿ ಕನಿಷ್ಠ ₹1ಸಾವಿರದಿಂದ ₹2ಸಾವಿರದವರೆಗೂ ಸಿಬ್ಬಂದಿ ಲಂಚ ಕೇಳುತ್ತಾರೆ. ಯಂತ್ರದಿಂದ ಒಕ್ಕಣೆಯಾಗಿದ್ದರೂ ದೂಳು, ಮಣ್ಣು ಇದೆ ಎಂದು ತಕರಾರು ತೆಗೆಯುತ್ತಾರೆ’ ಎಂದು ಹೊನ್ನಿಕುಪ್ಪೆ ಗ್ರಾಮದ ವೇಣುಗೋಪಾಲ ಮತ್ತು ಬೀಜಿಗನಹಳ್ಳಿ ಮಹದೇವಪ್ಪ ಆರೋಪಿಸಿದ್ದಾರೆ.

‘50 ಟೋಕನ್ ಬದಲಿಗೆ ಸಿಬ್ಬಂದಿ 90 ಟೋಕನ್ ನೀಡಿ ರೈತರಿಂದ ಹಣ ಪಡೆಯುತ್ತಿದ್ದಾರೆ. ಟೋಕನ್ ಸಿಕ್ಕವರೆಲ್ಲರೂ ಬಾಡಿಗೆ ಟ್ರ್ಯಾಕ್ಟರ್ನಲ್ಲಿ ರಾಗಿಯನ್ನು ತರುತ್ತಿದ್ದಾರೆ. ಟ್ರ್ಯಾಕ್ಟರ್ ಬಾಡಿಗೆ, ವೈಯಕ್ತಿಕ ಖರ್ಚು, ಲೋಡರ್ಸ್ ವೆಚ್ಚ ಎಲ್ಲವೂ ಹೊರೆಯಾಗುತ್ತಿದೆ’ ಎಂಬುದು ಸಿಂಗರಮಾರನಹಳ್ಳಿಯ ರೈತ ನಾಗೇಂದ್ರ ಮತ್ತು ಗಿರೀಶ್ ಅವರ ಅಸಹಾಯಕತೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಗಿ ಖರೀದಿ ಕೇಂದ್ರದ ಅಧಿಕಾರಿ ಮೈಕೆಲ್ ಫರ್ನಾಂಡಿಸ್, ‘ದಿನಕ್ಕೆ 40ರಿಂದ 50 ಟೋಕನ್ ವಿತರಿಸುವ ವ್ಯವಸ್ಥೆ ಕ್ರಮಬದ್ಧವಾಗಿ ನಡೆದಿದೆ. ರಜಾ ದಿನಗಳಲ್ಲಿ ಹೆಚ್ಚು ರೈತರು ಬರುವುದರಿಂದ ಖರೀದಿ ವಿಳಂಬವಾಗುತ್ತದೆ. ಸರದಿ ಸಾಲಿನಲ್ಲಿ ಒಂದು ದಿನ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ. ವಿನಾಕಾರಣ ರೈತರಿಗೆ ತೊಂದರೆ ನೀಡುತ್ತಿಲ್ಲ’ ಎಂದು ತಿಳಿಸಿದರು.

ಲಂಚ ಕೇಳಬಾರದೆಂದು ಗುಣಮಟ್ಟ ವಿಭಾಗದ ಸಿಬ್ಬಂದಿಗೆ ಸೂಚಿಸಲಾಗಿದೆ. ಆದರೂ ಕೇಳಿದರೆ ರೈತರು ನೇರವಾಗಿ ದೂರು ನೀಡಬಹುದು.
ಮೈಕೆಲ್ ಫರ್ನಾಂಡೀಸ್ ರಾಗಿ ಖರೀದಿ ಕೇಂದ್ರದ ಅಧಿಕಾರಿ.

ತಂಬಾಕು ಮಾರುಕಟ್ಟೆ ರೀತಿ ಕ್ಲಸ್ಟರ್ ವ್ಯಾಪ್ತಿಯ ರೈತರಿಗೆ ದಿನ ನಿಗದಿಗೊಳಿಸಿ ಟೋಕನ್ ನೀಡಿದರೆ ಕಾಯುವುದನ್ನು ತಪ್ಪಿಸಬಹುದು
ವೆಂಕಟೇಶ್ ರಾಗಿ ಬೆಳೆಗಾರ ಬಿ.ಆರ್.ಕಾವಲ್ ಗ್ರಾಮ

33 ಸಾವಿರ ಕ್ವಿಂಟಲ್

ಒಂದು ತಿಂಗಳಲ್ಲಿ ದಿನವೂ ಸರಾಸರಿ 1,300 ಕ್ವಿಂಟಲ್ನಂತೆ ಈವರೆಗೆ 1,326 ರೈತರಿಂದ 33,873 ಕ್ವಿಂಟಲ್ ರಾಗಿ ಖರೀದಿಸಲಾಗಿದೆ’ ಎಂದು ಖರೀದಿ ಕೇಂದ್ರದ ಅಧಿಕಾರಿ ಮೈಕೆಲ್ ಫರ್ನಾಂಡಿಸ್ ತಿಳಿಸಿದರು. ‘ತಾಲ್ಲೂಕಿನಲ್ಲಿ ಒಟ್ಟು 5,742 ರೈತರು ನೋಂದಾಯಿಸಿದ್ದು 1,25,102 ಕ್ವಿಂಟಲ್ ರಾಗಿ ಖರೀದಿಸಬೇಕಾಗಿದೆ. ರತ್ನಾಪುರಿ ಎಪಿಎಂಸಿ ಮಾರುಕಟ್ಟೆಯಲ್ಲಿ 231 ರೈತರು 5,742 ಕ್ವಿಂಟಲ್ ರಾಗಿ ಮಾರಲು ಸಮ್ಮತಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

‘ರೈತರು ಧೂಳು ಮತ್ತು ಬಿಳಿ ಹೊಟ್ಟು ರಹಿತ ಸ್ವಚ್ಛ ರಾಗಿಯನ್ನಷ್ಟೇ ತರಬೇಕು. ಕೆಲವರು ಅಡ್ಡದಾರಿಯಲ್ಲಿ ಮಾರಲು ಯತ್ನಿಸುತ್ತಿದ್ದು ಕಡಿವಾಣ ಹಾಕಲಾಗಿದೆ. ಸಿಬ್ಬಂದಿ ಕೊರತೆ ಇಲ್ಲ. ರೈತರಿಗೆ ವಿಳಂಬವಾಗದೆ ನಿಗದಿತ ಸಮಯದಲ್ಲಿ ಖರೀದಿಸಲು ಕ್ರಮವಹಿಸಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.