ಮೈಸೂರು: ಮುಸ್ಲಿಂ ಸಮುದಾಯದಲ್ಲಿ ಪವಿತ್ರ ರಂಜಾನ್ ಮಾಸದ ಸಂಭ್ರಮ ಗರಿಗೆದರಿದ್ದು, ಉಪವಾಸ ವ್ರತಾಚರಣೆ ನಡುವೆಯೇ ‘ಈದ್ ಉಲ್ ಫಿತ್ರ್’ ಆಚರಣೆಗೆ ಖರೀದಿ ಭರಾಟೆಯೂ ಜೋರಾಗಿದೆ.

ಇಲ್ಲಿನ ಮಂಡಿ ಮೊಹಲ್ಲಾದ ಸಾಡೇ ರಸ್ತೆಯ ಪ್ರಖ್ಯಾತ ‘ಮೀನಾ ಬಜಾರ್’ ಹಬ್ಬದ ವ್ಯಾಪಾರದಿಂದ ಕಂಗೊಳಿಸುತ್ತಿದ್ದು, ರಂಜಾನ್ ಹಾಗೂ ಯುಗಾದಿಗೆ ಶುಭಕೋರುವ ದೀಪಾಲಂಕಾರದಲ್ಲಿ ಗಮನ ಸೆಳೆಯುತ್ತಿದೆ. ಸಂಜೆಯ ಇಫ್ತಾರ್ ಪ್ರಾರ್ಥನೆ ಬಳಿಕವಂತೂ ರಸ್ತೆಯ ಅಂಗಡಿಗಳು ಜನ ಜಂಗುಳಿಯಲ್ಲಿ ಮಿಂದೇಳುತ್ತಿವೆ.

ಬಾಂಬೆ ಡಿಸೈನ್, ಶಾರ್ಜಾ ಸೆಂಟರ್, ಗುಲ್ಶನ್ ಗೋಲ್ಡ್ ಆ್ಯಂಡ್ ಫ್ಯಾನ್ಸಿ, ಕ್ವೀನ್ಸ್ ಬಜಾರ್, ಬಿಸ್ಮಿಲ್ಲಾ ಕುರ್ತಾ, ದುಬೈ ಫ್ಯಾಷನ್, ಡೆಲ್ಲಿ ಬಜಾರ್ ಮುಂತಾದ ಅಂಗಡಿಗಳು ಜಾಹೀರಾತು ಫಲಕವನ್ನು ಕಟ್ಟಿ ಶುಭ ಕೋರುತ್ತಿವೆ. ದೇಶದ ವಿವಿಧ ಭಾಗಗಳಿಂದ ಹಬ್ಬಕ್ಕಾಗಿ ತಂದಿರುವ ವಿನೂತನ ಫ್ಯಾಶನ್ನ ಬಟ್ಟೆಗಳ ಪ್ರದರ್ಶನ, ಮಾರಾಟ ನಡೆಯುತ್ತಿದೆ.

ಮಹಿಳೆಯರ ಬಟ್ಟೆಗಳು, ಬಗೆಬಗೆಯ ಫ್ಯಾಷನ್ ಉತ್ಪನ್ನಗಳು, ದೇಶ ವಿದೇಶದ ಸುಗಂಧ ದ್ರವ್ಯಗಳು, ಚಪ್ಪಲಿಗಳು, ಫ್ಯಾನ್ಸಿ ಆಭರಣಗಳು, ಗೃಹೋಪಯೋಗಿ ವಸ್ತುಗಳು, ಮಕ್ಕಳ ಆಟಿಕೆಗಳು, ಸಿಹಿ ತಿಂಡಿಗಳ ಅಂಗಡಿಗಳಿಂದ ಜಗಮಗಿಸುತ್ತಿದೆ. ಚಾಮರಾಜನಗರ, ಮಂಡ್ಯ, ಹಾಸನ, ಕೊಡಗಿನಿಂದಲೂ ಬರುವ ಮುಸ್ಲಿಮರು ಮನೆಮಂದಿಗೆಲ್ಲ ಬಟ್ಟೆ, ಪ್ರೀತಿಪಾತ್ರರಿಗೆ ಉಡುಗೊರೆ ಕೊಳ್ಳಲು ಶುರು ಮಾಡಿದ್ದಾರೆ.

ಪಾಕಿಸ್ತಾನಿ ಟೋಪಿಗೆ ಬೇಡಿಕೆ:

ಬರ್ಕತಿ, ಅಫ್ಗಾನಿ, ತುರ್ಕಿ, ಸ್ಟೋನ್ ಟೋಪಿ, ಇರ್ತುಗುಲ, ಹೈದರಾಬಾದಿ, ಕಾಶ್ಮೀರಿ ಟೋಪಿ, ಅಜ್ಮೇರ್ ಕೆ ಖ್ವಾಜ ಗರಿಬುನ್ ನವಾಜ್ ಹಾಗೂ ಹೈದರಾಬಾದ್ ನವಾಬಿ ಟೋಪಿಗಳು ಗಮನಸೆಳೆಯುತ್ತಿವೆ. ‘ಅದ್ವಾನಿ, ನವಾಬ್ ಟೋಪಿ, ಫರ್ಕಿ ಟೋಪಿ, ರುಮಾಲಿ ಟೋಪಿಗಳ ನಡುವೆ ಪಾಕಿಸ್ತಾನಿ ಟೋಪಿಗೆ ಹೆಚ್ಚು ಬೇಡಿಕೆಯಿದೆ. ₹50ರಿಂದ ₹500ರವರೆಗಿನ ಟೋಪಿಗಳು ಲಭ್ಯ ಇವೆ’ ಎಂದು ಟೋಪಿ ಮಾರಾಟಗಾರರು ತಿಳಿಸಿದರು.

‘ಸುಗಂಧ’ ಅಚ್ಚುಮೆಚ್ಚು:

ಹಬ್ಬವು ಸುಗಂಧ ದ್ರವ್ಯದ ಮಾರಾಟವನ್ನು ಚುರುಕುಗೊಳಿಸಿದೆ. ‘ಜನ್ನತ್ ಉಲ್ ಫಿರ್ದೋಸ್’ ಸುಗಂಧವು ಜನರಿಗೆ ಅಚ್ಚುಮೆಚ್ಚು ಎನ್ನುವ ಅಲ್ ಮದೀನಾ ಅತ್ತರ್ಸ್ ಅಂಡ್ ಫರ್ಫ್ಯೂಮ್ ಅಂಗಡಿ ಮಾಲೀಕ ರುಮಾಲ್, ‘ವೈಟ್ ವೂದ್, ಅರೇಬಿಯನ್ ವೂದ್, ರಾಶಿಕಾ, ಮಾರ್ವಾ, ಬ್ಲ್ಯಾಕ್ ವೂದ್, ಕೂಲ್ ವಾಟರ್, ಐಸ್ ಬರ್ಗ್, ಅಲೀಮಾ ಪರಿಮಳಗಳಿಗೂ ಹೆಚ್ಚು ಬೇಡಿಕೆಯಿದ್ದು, 10 ಮಿ.ಲೀಗೆ ₹100ರಿಂದ ₹2 ಸಾವಿರ ಮೊತ್ತದ ಉತ್ಪನ್ನಗಳು ನಮ್ಮಲ್ಲಿವೆ’ ಎಂದರು.ಜುಬೇರ್ ಎಂ.ಡಿ. ಚಾಮರಾಜನಗರ

ಪ್ರತಿ ವರ್ಷ ಹಬ್ಬದ ಖರೀದಿಗೆ ಇಲ್ಲಿಗೆ ಆಗಮಿಸುತ್ತೇವೆ. ಬಟ್ಟೆ ಸಿಹಿ ಇತರ ವಸ್ತುಗಳನ್ನು ಖರೀದಿಸಿ ತೆರಳುತ್ತೇವೆ
ಜುಬೇರ್ ಎಂ.ಡಿ. ಚಾಮರಾಜನಗರ

‘ಒಣ ಹಣ್ಣು ಕೊರತೆ ಇಲ್ಲ’ ‘ಕೊಲ್ಲಿ ರಾಷ್ಟ್ರದಲ್ಲಿ ನಡಯುತ್ತಿರುವ ಯುದ್ಧ ಹಿನ್ನೆಲೆಯಲ್ಲಿ ಒಣ ಹಣ್ಣುಗಳ ಬೆಲೆ ಹೆಚ್ಚಳವಾಗುವ ಆತಂಕವಿದ್ದರೂ ಸದ್ಯಕ್ಕೆ ಅಂತಹ ಪರಿಣಾಮವೇನೂ ಕಂಡುಬಂದಿಲ್ಲ’ ಎಂದು ಎಂ.ಕಮಾಲ್ ಪನ್ಸಾರಿ ಅಂಗಡಿ ಮಾಲೀಕ ಸಗೀರ್ ಅಹ್ಮದ್ ಹೇಳಿದರು. ‘ಇರಾನ್ನಿಂದ ಪಿಸ್ತಾ ಹೆಚ್ಚು ಆಮದಾಗುವುದರಿಂದ ಅದರ ಮೇಲೆ ಪರಿಣಾಮ ಬೀರಬಹುದು. ಎಲ್ಲ ಒಣ ಹಣ್ಣುಗಳ ಬೆಲೆಯಲ್ಲಿ ಸರಾಸರಿ ₹50ರ ಆಸುಪಾಸು ಏರಿಕೆಯಾಗಿದೆ. ಇದನ್ನು ಯುದ್ಧದ ಪ್ರಭಾವ ಎನ್ನಲಾಗದು. ಹಬ್ಬಗಳಿಗೆ ಯಾವುದೇ ಕೊರತೆಯಾಗುವುದಿಲ್ಲ’ ಎಂದರು.

ಉಪವಾಸ ತಣಿಸುವ ಖಾದ್ಯ ಲೋಕ ಇಲ್ಲಿನ ಅಶೋಕ ರಸ್ತೆಯ ಆಜಮ್ ಮಸೀದಿಯಲ್ಲಿ ಸಂಜೆ ಪ್ರಾರ್ಥನೆಯನ್ನು ಸಾಮೂಹಿಕವಾಗಿ ಮಾಡುವ ಜನರು ಬಳಿಕ ಗುಂಪಾಗಿ ಕುಳಿತು ಇಫ್ತಾರ್ಗೆ ಸಜ್ಜಾಗುತ್ತಾರೆ. ಖರ್ಜೂರ ಸೇವಿಸಿ ಪಾನೀಯಗಳನ್ನು ಕುಡಿದು ಉಪವಾಸ ಕೈಬಿಟ್ಟು ಸಂಭ್ರಮಿಸುವರು. ಸಾಡೇ ರಸ್ತೆ ಆಸುಪಾಸಿನ ಹೋಟೆಲ್ಗಳು ಬಿಸಿ ಬಾದಾಮಿ ಹಾಲಿನ ಗಾಡಿಗಳು ಲಸ್ಸಿ ಅಂಗಡಿಗಳು ಜ್ಯೂಸ್ ಸೆಂಟರ್ ಕತ್ತರಿಸಿದ ಹಣ್ಣುಗಳ ಮಾರಾಟಗಾರರು ಸಸ್ಯಾಹಾರ ಮಾಂಸಾಹಾರದ ಚಾಟ್ಸ್ ಅಂಗಡಿಗಳು ಜನರಿಂದ ಕಿಕ್ಕಿರಿದು ತುಂಬುತ್ತಿವೆ. ಬೇಸಿಗೆ ಧಗೆಯ ಕಾರಣಕ್ಕೆ ಕಾಜೂ ಗುಲ್ಕನ್ ಪಿಸ್ತಾ ವೆನಿಲ್ಲಾ ರಸ್ಮಲಾಯ್ ಫಲೂದಾ ಕಲ್ಲಂಗಡಿ ಶರಬತ್ ಮುಂತಾದ ತಂಪು ಪಾನೀಯಗಳತ್ತ ಹಲವರು ಆಕರ್ಷಿತರಾಗುತ್ತಿದ್ದಾರೆ. ಕಬಾಬ್ ಚಿಕನ್ ಲಾಲಿಪಾಪ್ ಹೈದರಾಬಾದಿ ಹಲೀಂ ಶವರ್ಮಾ ಕಟ್ಲೆಟ್ ಖೀಮಾ ಮೋಮೊಸ್ ಚಿಕನ್ ರೋಲ್ ಖಾದ್ಯಗಳು ಬಿರಿಯಾನಿಗಳೂ ಮಾರಾಟವಾಗುತ್ತಿವೆ ಎನ್ನುತ್ತಾರೆ ವ್ಯಾಪಾರಿ ಸಯ್ಯದ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.