ಮೈಸೂರು: ಇಲ್ಲಿನ ನಟನ ರಂಗಶಾಲೆಯಿಂದ ನೀಡಲಾಗುವ 2026ನೇ ಸಾಲಿನ ‘ನಟನ ಪುರಸ್ಕಾರ’ಕ್ಕೆ ಕಲಾವಿದೆ ರಾಮೇಶ್ವರಿ ವರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ.

ರಂಗಭೂಮಿಗೆ ಅರ್ಪಿಸಿಕೊಂಡು ಬದುಕನ್ನು ಸವೆಸಿದ ಸಾಧಕರನ್ನು ಗುರುತಿಸಿ, ಮುಂದಿನ ತಲೆಮಾರಿಗೆ ಪರಿಚಯಿಸಿ ಗೌರವಿಸುವ ನಿಟ್ಟಿನಲ್ಲಿ, ನಟನದ ಅಧ್ಯಕ್ಷರಾಗಿದ್ದ ಎನ್.ಸುಬ್ರಹ್ಮಣ್ಯಂ ಅವರ ಗೌರವಾರ್ಥ ನೀಡುವ ಪುರಸ್ಕಾರ ಇದಾಗಿದೆ.

‘ರಂಗಭೂಮಿಯಲ್ಲಿ ಬಹುಕಾಲ ಜೀವನ ಸವೆಸಿ ಸಿನಿಮಾ, ಕಿರುತೆರೆ ಕ್ಷೇತ್ರದಲ್ಲಿ ಬಹು ದೀರ್ಘವಾಗಿ ತೊಡಗಿಕೊಂಡಿರುವ ಕನ್ನಡ ರಂಗಭೂಮಿಯ ಕಲಾವಿದೆ ರಾಮೇಶ್ವರಿ ವರ್ಮಾ ಅವರಿಗೆ ಸಮರ್ಪಿಸಲಾಗುವುದು. ಪ್ರಶಸ್ತಿಯು ಸ್ಮರಣಿಕೆ, ಅಭಿನಂದನಾಪತ್ರ ಮತ್ತು ನಗದು ಒಳಗೊಂಡಿದೆ’ ಎಂದು ನಟನದ ಮಂಡ್ಯ ರಮೇಶ್ ತಿಳಿಸಿದ್ದಾರೆ.

‘ಏ.14ರಂದು ಕೃಷಮೂರ್ತಿಪುರಂನ ಬಿ.ಎಸ್.ಎಸ್. ವಿದ್ಯೋದಯ (ಭಗಿನಿ ಸೇವಾ ಸಮಾಜ) ಶಾಲೆಯ ಆವರಣದಲ್ಲಿ ನಡೆಯುವ ನಟನದ 24ನೇ ವರ್ಷದ ‘ರಜಾ-ಮಜಾ’ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

ಲಕ್ಷ್ಮೀಬಾಯಿ ಏಣಗಿ ಬಾಳಪ್ಪ, ರಂಗಭೂಮಿ ಕಲಾವಿದೆ ಎಂ.ಎನ್.ಲಕ್ಷ್ಮೀದೇವಿ, ಸುಭದ್ರಮ್ಮ ಮನ್ಸೂರ್, ಆರ್.ಟಿ.ರಮಾ, ಗುಬ್ಬಿ ಕಂಪನಿಯ ಕಲಾವಿದೆ ಶಾಂತಮ್ಮ, ಇಂದಿರಮ್ಮ, ಜಯಲಕ್ಷ್ಮೀ ಪಾಟೀಲ, ರಾಧಾ – ರುಕ್ಮಿಣಿ ಈ ಹಿಂದೆ ಈ ಪ್ರಶಸ್ತಿಗೆ ಭಾಜನವಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.