ಧರ್ಮಾಪುರ: ಸಮೀಪದ ರತ್ನಪುರಿಯಲ್ಲಿ ನಡೆಯುತ್ತಿದ್ದ 62ನೇ ವರ್ಷದ ಜಾನುವಾರು ಜಾತ್ರೆಗೆ ಸೋಮವಾರ ತೆರೆ ಬಿದ್ದಿತ್ತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಜಾತ್ರೆಗೆ ಆಗಮಿಸಿ ತಮಗೆ ಅವಶ್ಯಕವಾದ ಹಳ್ಳಿಕಾರ್ ಜೋಡೆತ್ತು ಖರೀದಿಸಿ ವಾಹನಗಳಲ್ಲಿ ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ಸೋಮವಾರ ಕಂಡುಬಂದಿತು.

ರೈತ ಸಮುದಾಯ ಬೇಸಾಯಕ್ಕೆ ಅಗತ್ಯವಿರುವ ಹಳ್ಳಿಕಾರ್ ರಾಸುಗಳ ಖರೀದಿಗೆ ಪ್ರತಿ ವರ್ಷ ರತ್ನಪುರಿ ಜಾತ್ರೆಯನ್ನು ಎದುರು ನೋಡುತ್ತಾರೆ. ಈ ವರ್ಷ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ತಮ್ಮ ರಾಸುಗಳನ್ನು ತಂದು ಜಾತ್ರೆಗೆ ಕಟ್ಟಿದರು. ಒಂದು ವಾರಗಳ ಕಾಲ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು.

ರತ್ನಪುರಿಯ ಹಳೆಯ ಸಂತೆ ಹಾಗೂ ಧರ್ಮಾಪುರ ರಸ್ತೆಯ ಬದಿಗಳಲ್ಲಿ ರಾಸುಗಳನ್ನು ಕಟ್ಟಲಾಗಿತ್ತು. ರೈತರು ತಮ್ಮ ರಾಸುಗಳನ್ನು ಕರೆತರುವಾಗ ವಿವಿಧ ರೀತಿಯಲ್ಲಿ ರಾಸುಗಳಿಗೆ ಸಿಂಗಾರ ಮಾಡಿಕೊಂಡು, ಕೆಲವೊಂದು ರೈತರು ವಾದ್ಯ ಸಮೇತ ಕರೆತಂದರು.

ಸಾವಿರಾರು ಸಂಖ್ಯೆಯಲ್ಲಿ ಕಟ್ಟಿದ್ದ ಹಳ್ಳಿಕಾರ್ ಜೋಡೆತ್ತುಗಳನ್ನು ಕೊಂಡುಕೊಳ್ಳಲು ಈ ಬಾರಿ ಕೊಡಗು, ಮಂಡ್ಯ, ಚಾಮರಾಜನಗರ, ಹಾಸನ, ರಾಮನಗರ ಮುಂತಾದ ಜಿಲ್ಲೆಗಳಿಂದ ರೈತರು ಆಗಮಿಸಿದ್ದರು. ಜರ್ಸಿ ಜೋಡೆತ್ತುಗಳು, ಹಾಲು ಹಲ್ಲಿನ ಕರುಗಳು, ಹಳ್ಳಿಕಾರ್ ಕರುಗಳು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದವು. ಹೆಚ್ಚಿನ ಸಂಖ್ಯೆ ರೈತರು ಹಳ್ಳಿಕಾರ್ನತ್ತ ಒಲವು ತೋರಿದರು.

ದುಬಾರಿ ಬೆಲೆ: ಈ ಬಾರಿ ಜಾತ್ರೆಯಲ್ಲಿ ಹಳ್ಳಿಕಾರ್ ಜೋಡೆತ್ತುಗಳಿಗೆ, ಹಾಲು ಹಲ್ಲಿನ ಕರುಗಳಿಗೆ ದುಬಾರಿ ಬೆಲೆ ಏರಿಕೆಯಾಗಿತ್ತು. ಕನಿಷ್ಠ ₹50 ಸಾವಿರದಿಂದ ₹3 ಲಕ್ಷದವರೆಗೂ ಬೆಲೆ ಕೇಳಿಬಂದವು.

ಅತಿ ಸಣ್ಣ ರೈತರು ಜಾತ್ರೆಯಲ್ಲಿ ಜಾನುವಾರುಗಳ ಖರೀದಿಗೆ ಆಗಮಿಸಿ ಬೆಲೆ ಅಧಿಕವಾದರಿಂದ ಖರೀದಿ ಮಾಡಲು ಸಾಧ್ಯವಾಗದೆ ವಾಪಸ್ ಹೋಗುತ್ತಿದ್ದ ದೃಶ್ಯ ಕಂಡು ಬಂದಿತು.

‘ಹಳ್ಳಿಕಾರ್ ಜೋಡೆತ್ತುಗಳು ವ್ಯವಸಾಯಕ್ಕೆ ಹಾಗೂ ಎತ್ತಿನಗಾಡಿ ಉಪಯೋಗಕ್ಕೆ ಸೂಕ್ತವಾದವು. ಆದ್ದರಿಂದ ಹಳ್ಳಿಕಾರ್ ಜೋಡೆತ್ತುಗಳನ್ನು ಪ್ರತಿವರ್ಷ ಖರೀದಿಸುತ್ತೇವೆ’ ಎಂದು ಧರ್ಮಾಪುರದ ರೈತ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಜಾತ್ರೆ ಕಣ್ತುಂಬಿಕೊಳ್ಳಲು ಧರ್ಮಾಪುರ, ಗದ್ದಿಗೆ, ಕರಿಮುದ್ದನಹಳ್ಳಿ, ಹುಂಡಿ ಮಾಳ, ಸಿಬಿಟಿ ಕಾಲೊನಿ, ವಿನೋಬ ಕಾಲೋನಿ, ಹಳ್ಳದ ಕೊಪ್ಪಲು, ತರಿಕಲ್, ಮಲ್ಲೇಗೌಡನ ಕೊಪ್ಪಲು, ಊಯಿಗೊಂಡನಹಳ್ಳಿ, ಬಿಳಿಕೆರೆ ಗ್ರಾಮಗಳಿಂದ ಲಕ್ಷಾಂತರ ಮಂದಿ ಬಂದಿದ್ದರು. ಅತ್ಯುತ್ತಮ ರಾಸುಗಳಿಗೆ ಎಪಿಎಂಸಿಯಿಂದ ಬಹುಮಾನ ನೀಡಲಾಯಿತು.

ಭಾನುವಾರ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿ ನಡೆಯಿತು.

ಶಾಸಕ ಜಿ.ಡಿ.ಹರೀಶ್ ಗೌಡ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಆಗಮಿಸಿ ಆಂಜನೇಯ ಸ್ವಾಮಿ ಪಲ್ಲಕ್ಕಿ ಉತ್ಸವ, ಜಮಾಲ್ ಬೀಬಿ ಅಮ್ಮನವರ ಗಂಧೋತ್ಸವದಲ್ಲಿ ಭಾಗಿಯಾಗಿ ಶುಭಾಶಯ ಕೋರಿದರು.

₹30 ಸಾವಿರಕ್ಕೆ ಜಾನುವಾರು ಖರೀದಿ ಮಾಡಲು ಜಾತ್ರೆಗೆ ಆಗಮಿಸಿದೆ ಆದರೆ ಈ ಜಾತ್ರೆಯಲ್ಲಿ ಬೆಲೆ ದುಪ್ಪಟ್ಟಾಗಿದೆ ಆದ್ದರಿಂದ ಖರೀದಿ ಮಾಡಲು ಸಾಧ್ಯವಾಗಲಿಲ್ಲ
-ಗೋವಿಂದ ನಾಯಕ, ರೈತ

ಹಳ್ಳಿಕಾರ್ ಜೋಡೆತ್ತು ಸಾಕಿ ಮಾರಾಟ ಮಾಡುವುದು ನಮ್ಮ ಕಸುಬಾಗಿದ್ದು ಜಾತ್ರೆಗಾಗಿ ಹಳ್ಳಿಕಾರ್ ಜೋಡಿಗಳನ್ನು ಸಾಕುತ್ತೇವೆ. ಸೂಕ್ತ ಲಾಭ ಬಂದರೆ ಮಾರಾಟ ಮಾಡುತ್ತೇವೆ
-ಚೇತನ್ ಕುಮಾರ್, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.