ಹುಣಸೂರು: ಮಹಿಳೆಯನ್ನು ವೇದ ಪುರಾಣ ಕಾಲದಿಂದಲೂ ಗೌರವಿಸಿ ಉನ್ನತ ಸ್ಥಾನ ನೀಡುತ್ತಿದ್ದರು. ಇತ್ತೀಚಿನ ದಿನದಲ್ಲಿ ಪುರುಷ ಪ್ರದಾನ ಸಮಾಜದಲ್ಲಿ ಮಹಿಳೆಗೆ ಸೂಕ್ತ ಸ್ಥಾನಮಾನ ನೀಡದೆ ಕಡೆಗಣಿಸಿರುವುದು ವಿಷಾದನೀಯ ಎಂದು ಚಂದನವಾಹಿನಿ ನಿರೂಪಕಿ ರೇವತಿ ಶೆಟ್ಟಿ ಅಭಿಪ್ರಾಯಪಟ್ಟರು.

ನಗರದ ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ‘ವನಿತೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯನ್ನು ವಿವಿಧ ರೀತಿಯಲ್ಲಿ ಶೋಷಿಸುವ ಕೆಲಸ ನಡೆದಿದ್ದು, ಇದಕ್ಕೆ ದಿಟ್ಟವಾಗಿ ಮಹಿಳಾ ಸಂಘಟನೆಗಳು ಬೀದಿಗಿಳಿದು ವಿರೋಧಿಸುವ ಧೈರ್ಯವಂತಿಕೆ ಮಾಡಬೇಕಾಗಿದೆ. ಮಡಿವಂತಿಕೆಯಿಂದ ನಾಲ್ಕು ಗೋಡೆಗಳ ನಡುವೆ ಉಳಿಯುವುದರಿಂದ ಅನೇಕ ರೀತಿಯ ಶೋಷಣೆಗೆ ಮಹಿಳೆ ಗುರಿಯಾಗಬೇಕಾಗುತ್ತಿದ್ದಾರೆ. ಈ ಎಲ್ಲವನ್ನು ಧೈರ್ಯದಿಂದ ವಿರೋಧಿಸುವ ದೃಢ ಸಂಕಲ್ಪ ಕೈಗೊಳ್ಳಬೇಕಾದ ಅನಿವಾರ್ಯತೆ ನಮ್ಮೆಲ್ಲರ ಎದುರಿದೆ ಎಂದರು.

ಮಹಿಳೆ ಭವಿಷ್ಯದ ಗುರಿ ಇಟ್ಟುಕೊಂಡು ಮುನ್ನುಗುವ ಕೆಲಸ ಮಾಡಬೇಕಾಗಿದೆ. ನಾವು ಇಟ್ಟ ಗುರಿಯನ್ನು ಮುಟ್ಟುವಲ್ಲಿ ಸಫಲವಾದಲ್ಲಿ ಯಶಸ್ಸು ನಮ್ಮ ಹಿಂದೆ ಬರಲಿದೆ. ತೇಜಸ್ವಿ ಅನಂತಕುಮಾರ್ ಅವರಂತಹ ಸಾಧಕರು ನಮ್ಮೆಲ್ಲರ ಪ್ರೇರಣೆಯಾಗಬೇಕು. ಇವರ ಕಾರ್ಯಸಾಧನೆ ಅವಿಸ್ಮರಣೀಯ. ಸಾಧನೆ ನಮ್ಮನ್ನು ಮತ್ತಷ್ಟು ಸಾಧಿಸುವತ್ತ ಪ್ರೇರಣೆ ಆಗಬೇಕು. ಈ ಸಾಲಿನ ಮಹಿಳಾ ದಿನದ ಘೊಷಣೆ ‘ಗಿವ್ ಟು ಗೇನ್ʼ ಎನ್ನುವತ್ತ ಹೆಜ್ಜೆ ಹಾಕೋಣ ಎಂದರು.

ಇಂದಿರಾಗಾಂಧಿ ಮುಕ್ತ ವಿ.ವಿ ಉಪನಿರ್ದೇಶಕಿ ಎಚ್.ಸಿ.ಹೇಮಮಾಲಿನಿ ಮಾತನಾಡಿ, ಮಹಿಳೆ ಆತ್ಮಿವಿಶ್ವಾಸದಿಂದ ಸಬಲೀಕರಣದತ್ತ ಹೆಜ್ಜೆಹಾಕಬೇಕು, ದೃಢವಾದ ಹೋರಾಟ ನಡೆಸಿ ಸ್ವಾಭಿಮಾನದ ಜೀವನ ಕಟ್ಟಿಕೊಳ್ಳುವಂತಾಗಬೇಕು. ಮಹಿಳೆಯರು ವಿವಿಧ ಕಾರ್ಯಕ್ಷೇತ್ರದಲ್ಲಿ ನಡೆಸುತ್ತಿರುವ ಸಾಧನೆಯನ್ನು ಗುರುತಿಸಿ ಬೆನ್ನುತಟ್ಟುವ ಕೆಲಸ ಮಾಡಬೇಕಾಗಿದೆ. ಮಹಿಳೆ ಎಂದರೆ ಮೂಗು ಮುರಿಯುವ ಮನಸ್ಥಿತಿ ಇರುವವರಿಗೆ ನಮ್ಮ ಕಾರ್ಯವೈಖರಿ ಮೂಲಕ ತಕ್ಕ ಉತ್ತರ ನೀಡಿ ದೇಶದ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ತಿಳಿಹೇಳುವಂತಾಗಬೇಕು ಎಂದರು.

ಪ್ರಾಂಶುಪಾಲ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಶೋಭಾ ಮಾತನಾಡಿದರು. ಧರ್ಮಾಪುರ ನಾರಾಯಣ್, ಬಸವರಾಜ್ ಇದ್ದರು. ಎಚ್.ಎಲ್.ದಿವ್ಯ ನಿರೂಪಿಸಿ, ರಾಶಿ ಎಂ.ಆರ್.ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.