ಮೈಸೂರು: ಅಲ್ಲಿ ಕುಮಾರವ್ಯಾಸ ಕವಿಯ ಉತ್ಕಟ ಅಭಿಮಾನಿಗಳಿದ್ದರು. ಕರ್ಣಾಟ ಭಾರತ ಕಥಾಮಂಜರಿ ಮಹಾಕಾವ್ಯದ ಕುರಿತು ಪಾಠ ಮಾಡಿದ ವಿದ್ವಾಂಸರಿದ್ದರು. ಕಾವ್ಯ ವಾಚನವಿತ್ತು. ವಾಖ್ಯಾನಕಾರರಿದ್ದರು. ಸಾಹಿತ್ಯದ ವಿದ್ಯಾರ್ಥಿಗಳಿದ್ದರು. ಹಲವು ಊರುಗಳಿಂದ ಬಂದ ಕುತೂಹಲಿಗಳೂ ಇದ್ದರು. ಕುಮಾರವ್ಯಾಸ ಕವಿಯ ಕುರಿತು ಕವಿತೆ ಕಟ್ಟಿದವರಿದ್ದರು. ಕಥಾಮಂಜರಿ ಹೊಸ ಆವೃತ್ತಿಯನ್ನು ನೂಕುನುಗ್ಗಲಿನಲ್ಲಿ ನಿಂತು ಖರೀದಿಸಿದವರಿದ್ದರು. ಕೃತಿ ಸಿಗದೆ ನಿರಾಶರಾದವರೂ ಇದ್ದರು!

ನಗರದ ಮಾನಸಗಂಗೋತ್ರಿಯಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಆವರಣದಲ್ಲಿ ಗುರುವಾರ ಮಹಾಕವಿಯ ಕಥಾಮಂಜರಿಯ ಅಭಿಮಾನವು ಹೀಗೆ ವಿಶೇಷವಾಗಿ ಅನಾವರಣಗೊಂಡಿತು.

ಕುವೆಂಪು ಮತ್ತು ಮಾಸ್ತಿ ಸಂಪಾದಕತ್ವದಲ್ಲಿ 68 ವರ್ಷಗಳ ಹಿಂದೆ ಮೊದಲಿಗೆ ಪ್ರಸಾರಾಂಗವೇ ಪ್ರಕಟಿಸಿದ್ದ ಕುಮಾರವ್ಯಾಸ ಕವಿಯ ‘ಕರ್ಣಾಟ ಭಾರತ ಕಥಾಮಂಜರಿ’ಯ ನಾಲ್ಕನೇ ಮುದ್ರಣದ ಲೋಕಾರ್ಪಣೆ ಸಮಾರಂಭವದು.

ಕೃತಿಯನ್ನು ಲೋಕಾರ್ಪಣೆಗೊಳಿಸಿದ ಪ್ರೊ.ಸಿಪಿಕೆ, ‘ಪ್ರಾಚೀನ ಕಾವ್ಯಗಳ ಪುನರ್ ಮುದ್ರಣ ಅತ್ಯಗತ್ಯ. ಅದರಿಂದ ರಸಾನುಭವ ಮತ್ತು ವ್ಯಾವಹಾರಿಕ ಲಾಭಗಳಾಗುತ್ತವೆ. ಕನ್ನಡದಲ್ಲಿ ಪ್ರತಿ 500 ವರ್ಷಕ್ಕೊಮ್ಮೆ ಒಂದು ಮಹಾಕಾವ್ಯ ಹುಟ್ಟಿದೆ’ ಎಂದು ಹೇಳಿದರು. ‘ಕೃತಿಯನ್ನು ಮೊದಲು ಪ್ರಕಟಿಸುವಲ್ಲಿ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಪಾತ್ರವೂ ಮಹತ್ವದ್ದು’ ಎಂದು ಸ್ಮರಿಸಿದರು.

‘ಕುಮಾರವ್ಯಾಸನಲ್ಲಿ ಬಹಮುಖ್ಯವಾದ್ದು ಭಾವಾವೇಶ. ಪಂಪನಲ್ಲೂ ಅಷ್ಟಾಗಿ ಕಂಡುಬರುವುದಿಲ್ಲ. ಕನ್ನಡದ ಮಹಾಕಾವ್ಯಗಳಲ್ಲಿ ಕುಮಾರ ವ್ಯಾಸನ ಕಾವ್ಯ ಅತ್ಯುನ್ನತವಾದದ್ದು. ಮಹಾಕಾವ್ಯದ ಮೊದಲ ಆವೃತ್ತಿಯನ್ನು ಹೊರತರುವಲ್ಲಿ ಕುವೆಂಪು ಮತ್ತು ಮಾಸ್ತಿಯವರಿಗೆ ನೆರವಾಗಿದ್ದ ಪ್ರೊ.ಸುಜನಾ ಅವರನ್ನೂ ಈ ಸಂದರ್ಭದಲ್ಲಿ ಸ್ಮರಿಸಬೇಕು’ ಎಂದರು. ನಂತರ ಕುಮಾರವ್ಯಾಸನ ಕುರಿತ ತಮ್ಮ ಗಂಗಾತೀರ್ಥ ಶೀರ್ಷಿಕೆಯ ಸಾನೆಟ್ ಅನ್ನು ಓದಿ ವಿಶೇಷ ಗಮನ ಸೆಳೆದರು.

ಹೊಸ ಆವೃತ್ತಿಯ ಕರಡು ತಿದ್ದಿರುವ ಪ್ರೊ.ಕೃಷ್ಣಮೂರ್ತಿ ಹನೂರು, ‘ಈ ಕವಿಯ ಕುರಿತ ಕೆಲಸ ಶುರುವಾಗಿ 175 ವರ್ಷವಾಗಿದೆ. ಹರ್ಮನ್ ಮೊಗ್ಲಿಂಗ್ ಮೊದಲು ಕೃತಿ ಸಂಪಾದಿಸಿದ ವಿದ್ವಾಂಸರು. ನಂತರ ದೇಶೀಯ ವಿದ್ವಾಂಸರು ಈ ಕಾರ್ಯವನ್ನು ಮುಂದುವರಿಸಿದರು. ಓದುವ ಜನರಿದ್ದುದರಿಂದ ಕೃತಿಯ ಹೊಸ ಆವೃತ್ತಿಗಳು ಪ್ರಕಟವಾಗುತ್ತಿದ್ದವು’ ಎಂದರು.

‘ಪಂಪನಂಥ ಕವಿಯ ಎದುರು ನಿಂತು ಬರೆಯುವ ಧೈರ್ಯ ತೋರಿದ ಕುಮಾರ ವ್ಯಾಸ, ದೇವರಿಗಿಂತ ಮನುಷ್ಯನೇ ದೊಡ್ಡವನು ಎಂದ ಕವಿ. ನಂಬಿರುವ ದೈವವನ್ನು ಮಾತ್ರ ಪ್ರಾರ್ಥಿಸುವ ಕವಿಗಳು ಇರುವ ಪರಂಪರೆಗೆ ಸೇರಿದ ಕುಮಾರವ್ಯಾಸನು ಮಾತ್ರ ಎಲ್ಲ ದೇವರನ್ನೂ ಪ್ರಾರ್ಥಿಸುತ್ತಾನೆ. ಭ್ರಷ್ಟಾಚಾರ, ಯುದ್ಧಗಳ ಬಗ್ಗೆಯೂ ಪರಿಣಾಮಕಾರಿಯಾಗಿ ಬರೆದಿದ್ದಾನೆ’ ಎಂದು ಬಣ್ಣಿಸಿದರು.

ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು ಪ್ರಾಸ್ತಾವಿಕ ಮಾತನಾಡಿದರು. ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ ಪಾಲ್ಗೊಂಡರು.

ಕಾವ್ಯದ ಕೆಲವು ಭಾಗಗಳನ್ನು ಚಾರ್ವಿ ಸತೀಶ್ ವಾಚಿಸಿದರು. ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ಇದೇ ಸಂದರ್ಭದಲ್ಲಿ ಪ್ರಸಾರಾಂಗದ ಮಾರಾಟ ವಿಭಾಗದ ಗಣಕೀಕೃತ ಲೆಕ್ಕಪತ್ರ ನಿರ್ವಹಣಾ ವ್ಯವಸ್ಥೆಗೆ ಚಾಲನೆ ನೀಡಿದರು. ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ನಡೆಯಿತು.

‘ಸಂಶೋಧನಾ ಕೇಂದ್ರ ಅಗತ್ಯ’

ಮೈಸೂರು: ‘ಕನ್ನಡದ ಶೇಕ್ಸ್ಪಿಯರ್’ ಕುಮಾರವ್ಯಾಸನ ಸಾಹಿತ್ಯ ಕುರಿತ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ಅಗತ್ಯವಿದೆ’ ಎಂದು ನ್ಯೂಯಾರ್ಕ್ನ ಸ್ಟೋನಿಬ್ರೂಕ್ ವಿ.ವಿಯ ಭಾರತೀಯ ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ.ಎಸ್.ಎನ್. ಶ್ರೀಧರ್ ಪ್ರತಿಪಾದಿಸಿದರು. ‘ಶೇಕ್ಸ್ಪಿಯರ್ಗಿಂತ 50 ವರ್ಷ ಹಿರಿಯನಾದ ಕುಮಾರವ್ಯಾಸ ಭಾಷೆಯನ್ನು ಆತನಂತೆಯೇ ಬಳಸಿದ್ದಾನೆ. ವ್ಯಾಕರಣ ಸೂತ್ರವನ್ನು ಮುರಿದು ಛಂದಸ್ಸು ತಿರುಚಿ ಹೊಸ ಪದಗಳ ಸೃಷ್ಟಿಸಿದ ಕಲಾಕಾರ’ ಎಂದು ಬಣ್ಣಿಸಿದರು. ‘ಇಬ್ಬರೂ ಪ್ರಸಿದ್ಧವಾದ ಕತೆಗಳನ್ನು ಬದಲಿಸಿ ಮರುಮಂಡಿಸಿದ್ದಾರೆ. ಶೇಕ್ಸ್ಪಿಯರ್ನ ಕೃತಿಗಳು ಜಗತ್ತಿನ ಎಲ್ಲ ಭಾಷೆಗಳಿಗೆ ಅನುವಾದಗೊಂಡಿವೆ. ಆದರೆ ಕುಮಾರವ್ಯಾಸ ಕೃತಿ ಮರಾಠಿ ಮತ್ತು ಇಂಗ್ಲಿಷ್ಗಷ್ಟೇ ಅನುವಾದಗೊಂಡಿದೆ. ಕುಮಾರವ್ಯಾಸನ ಪಠ್ಯದೊಳಗೆ ಇತರರ ಪದ್ಯಗಳೂ ಸೇರಿಕೊಂಡಿವೆ. ಈ ಬಗ್ಗೆ ಸಂಶೋಧನೆ ನಡೆಯಬೇಕು’ ಎಂದರು.

ಕೆಲವೇ ನಿಮಿಷಗಳಲ್ಲಿ ಮಾರಾಟ!

ಮೈಸೂರು: ಲೋಕಾರ್ಪಣೆ ಕಾರ್ಯಕ್ರಮದ ಬಳಿಕ ಕೆಲವೇ ನಿಮಿಷಗಳಲ್ಲಿ ಹೊಸ ಆವೃತ್ತಿಯ ಎಲ್ಲ ಕೃತಿಗಳೂ ಮಾರಾಟವಾಗಿದ್ದು ವಿಶೇಷ. ಎಲ್ಲ ವಯೋಮಾನದವರೂ ಕೃತಿಗಾಗಿ ಕಾಯುತ್ತಾ ಕುಳಿತಿದ್ದರು. ಕೆಲವರು ಕಾರ್ಯಕ್ರಮ ಮುಗಿಯುವುದನ್ನೇ ಕಾಯುತ್ತಾ ಸಾಲುಗಟ್ಟಿ ನಿಂತಿದ್ದರು. ರಿಯಾಯಿತಿ ದರದಲ್ಲಿ ಮಾರಾಟವಿದ್ದುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.