ಮೈಸೂರು: ‘ಪಕ್ಷದಿಂದ ನಡೆಸಿದ ‘ಜನರೊಂದಿಗೆ ಜನತಾದಳ’ ಕಾರ್ಯಕ್ರಮದ ಸಮಾರೋಪವನ್ನು ಭಾನುವಾರ (ಮೇ 17) ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರಣದಿಂದಾಗಿಯೇ ಶಾಸಕ ಜಿ.ಟಿ. ದೇವೇಗೌಡರು ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರನ್ನು ಭೇಟಿಯಾಗಿ, ಹುಟ್ಟುಹಬ್ಬದ ಶುಭಾಶಯಗಳನ್ನು ಬಹಳ ಮಂಚಿತವಾಗಿಯೇ ತಿಳಿಸಿದ್ದಾರೆ. ಈ ಎಲ್ಲಾ ತಂತ್ರಗಳೂ ನಮಗೆ ಅರ್ಥವಾಗುತ್ತವೆ’ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಟೀಕಿಸಿದರು.

ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಜಿಟಿಡಿ ಅವರು ಮಾಡಿದ ತಪ್ಪನ್ನು ತಿದ್ದಿಕೊಂಡು ಪಕ್ಷದಲ್ಲೇ ಉಳಿಯುವುದಾದರೆ ನಮ್ಮ ಅಭ್ಯಂತರವೇನೂ ಇಲ್ಲ. ಪಕ್ಷದ ವರಿಷ್ಠರಿಗೆ ಅವರ ಮೇಲೆ ನಂಬಿಕೆ ಬಂದು ಅವರನ್ನು ಉಳಿಸಿಕೊಳ್ಳುವುದಾದರೆ ಅದಕ್ಕೂ ನಮ್ಮ ಅಭ್ಯಂತರವಿಲ್ಲ’ ಎಂದರು.

‘ಜಿಟಿಡಿ ಅವರಿಂದ ನಮ್ಮ ಪಕ್ಷಕ್ಕೆ ಬಹಳ ದೊಡ್ಡ ನಷ್ಟವಾಗಿದೆ. ಅವರು ಒಂದೊಂದು ಚುನಾವಣೆಯಲ್ಲೂ ಒಂದೊಂದು ತೀರ್ಮಾನ ಮಾಡುತ್ತಾರೆ. ಅವರ ನಿರ್ಧಾರಗಳಿಂದ ನಮ್ಮ ಕಾರ್ಯಕರ್ತರಿಗೆ ಅಘಾತವಾಗಿದೆ’ ಎಂದು ದೂರಿದರು.

‘ಪಕ್ಷಕ್ಕಿಂತ ನಮಗೆ ದೊಡ್ಡವರ್ಯಾರೂ ಇಲ್ಲ. ನಿಷ್ಠಾವಂತ ಕಾರ್ಯಕರ್ತರ ಅನಿವಾರ್ಯತೆ ಇದೆಯೇ ಹೊರತು, ಇಂತಹ (ಜಿಟಿಡಿ) ನಾಯಕರ ಅನಿವಾರ್ಯತೆ ಏನಿಲ್ಲ. ಜಿ.ಟಿ. ದೇವೇಗೌಡರಿಗೆ ಎಲ್ಲಾ ಅಧಿಕಾರವನ್ನೂ ಪಕ್ಷ ಕೊಟ್ಟಿತ್ತು. ಆದರೆ, ಅವರು ಪಕ್ಷಕ್ಕೆ ಮೋಸ ಮಾಡಿದರು. ಈ ಕಾರಣದಿಂದಾಗಿಯೇ ಈ ಭಾಗದಲ್ಲಿ ಸಾಮೂಹಿಕ ನಾಯಕತ್ವವನ್ನು ನಾವು ಕಟ್ಟಿಕೊಂಡಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.