ಸಾಲಿಗ್ರಾಮ: ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರ ಸಂಘಗಳು ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಸಹಕಾರಿಯಾಗಿದ್ದು, ಇಂತಹ ಸಂಸ್ಥೆಗಳ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸುವ ಮೂಲಕ ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಮುಂದಾಗಬೇಕು ಎಂದು ಜೆಡಿಎಸ್ ಮುಖಂಡ ಸಾ.ರಾ. ನಂದೀಶ್ ಮನವಿ ಮಾಡಿದರು.

ಪಟ್ಟಣದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಜೆಡಿಎಸ್ ಬೆಂಬಲಿತ ಮಹೇಂದ್ರ ಹಾಗೂ ಉಪಾಧ್ಯಕ್ಷ ಮಹೇಶ್ ಅವರನ್ನು ಅಭಿನಂದಿಸಿ ಮಾತನಾಡಿದರು. ಸಹಕಾರ ಕ್ಷೇತ್ರಗಳ ಸಂಪರ್ಕದಲ್ಲಿ ಇರುವ ಪ್ರತಿಯೊಂದು ಕುಟುಂಬ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವ ಜತಗೆ ನೆಮ್ಮದಿಯಾಗಿ ಬದುಕಬಹುದು ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಡೇರಿಗಳು ಪ್ರಾರಂಭವಾದ ಬಳಿಕ ಮಹಿಳೆಯರು ಸ್ವಾಭಿಮಾನದಿಂದ ಬದುಕುವುದು ಅಲ್ಲದೆ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಸಹಕಾರಿಯಾಗಿದೆ ಎಂದರು.

ದುಬಾರಿ ಬೆಲೆಯ ರಾಸುಗಳಿಗೆ ಜೀವ ವಿಮೆ ಮಾಡಿಸಲು ಸಂಘದ ಪದಾಧಿಕಾರಿಗಳು ರೈರತರನ್ನು ಪ್ರೇರೇಪಿಸಬೇಕು. ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಶು ವೈದ್ಯರಿಂದ ರಾಸುಗಳ ಮಾಲೀಕರಿಗೆ ಸಲಹೆ ಕೊಡಿಸಬೇಕು ಎಂದು ಹೇಳಿದರು.

ಸಾ.ರಾ.ನಂದೀಶ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ನಿರ್ದೇಶಕರಾದ ಅರುಣ್ ರಾಜ್, ಎಸ್.ಕೆ.ಮಧುಚಂದ್ರ, ಸೀತಣ್ಣ, ಎಸ್.ಆರ್.ಲೋಕೇಶ್, ಪಾಪಣ್ಣ, ಜಗದೀಶ್, ಶಶಿಕುಮಾರ್, ರಾಮನಾಯಕ, ರಾಣಿ ರಾಮೇಗೌಡ, ಅಶ್ವಿನಿ ಅಭಿಷೇಕ್ ಹಾಗೂ ಮುಖಂಡರಾದ ಸಾ.ರಾ.ಸತೀಶ್, ಎಸ್.ಕೆ.ರಾಮು, ಬಿಡಿಎಸ್ ಸುನೀಲ್, ಸತೀಶ್, ಪಾಪಣ್ಣ, ಅನಂತ್, ರಾಂಪುರ ಪುರುಷೋತ್ತಮ್, ದಡದಹಳ್ಳಿ ನಟರಾಜ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-38-1584086599

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.