ಸಾಲಿಗ್ರಾಮ: ‘ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರಿಗಾಗಿಯೇ ಆಯೋಜನೆ ಮಾಡುತ್ತಿರುವ ಮಹಿಳಾ ವಿಶೇಷ ಗ್ರಾಮಸಭೆಗಳಿಗೆ ಭಾಗವಹಿಸುವ ಮೂಲಕ ತಮ್ಮ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಪಡೆದುಕೊಳ್ಳಬೇಕು’ ಎಂದು ಸಾಲಿಗ್ರಾಮ ತಾಲ್ಲೂಕು ಪಂಚಾಯಿತಿ ಇಒ ಎ.ಎನ್.ರವಿಕುಮಾರ್ ಮನವಿ ಮಾಡಿದರು.

ತಾಲ್ಲೂಕಿನ ಭೇರ್ಯ ಗ್ರಾಮ ಪಂಚಾಯಿತಿ ಆಯೋಜನೆ ಮಾಡಿದ್ದ ‘ಮಹಿಳಾ ವಿಶೇಷ ಗ್ರಾಮಸಭೆ’ಯಲ್ಲಿ ಮಾತನಾಡಿ, ‘ಸಭೆಗಳಿಗೆ ಭಾಗವಹಿಸಿದರೆ ಸರ್ಕಾರದ ಯೋಜನೆಗಳಿಂದ ಸಿಗುವ ಸವಲತ್ತುಗಳನ್ನು ತಿಳಿದು ಕೊಳ್ಳುವ ಜತೆಗೆ ನಿಮಗೆ ಆಗುತ್ತಿರುವ ತೊಂದರೆಗಳಿಗೂ ಪರಿಹಾರ ದೊರೆಯುತ್ತದೆ’ ಎಂದರು.

‘ಮಹಿಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಸರ್ಕಾರಗಳು ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸಭೆಯಲ್ಲೇ ಫಲಾನುಭವಿಗಳನ್ನು ಆಯ್ಕೆ ಮಾಡಿ ಕೊಳ್ಳಲಾಗುತ್ತದೆ’ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕಿ ರೋಜಾ ಮಹೇಶ್, ದೈಹಿಕ ಶಿಕ್ಷಣ ಶಿಕ್ಷಕಿ ಎ.ಪುಷ್ಪಲತಾ, ಆರೋಗ್ಯ ಇಲಾಖೆ ಸಿಬ್ಬಂದಿ ಡಿಸೋಜಾ, ಅಂಗನವಾಡಿ ಕಾರ್ಯಕರ್ತೆ ಹಸೀನಾ ಬೇಗಂ, ಆಶಾ ಕಾರ್ಯಕರ್ತೆ ಆಶಾ ಅವರುಗಳನ್ನು ಪಿಡಿಒ ಮಮತಾ ಗೌರವಿಸಿದರು.

ಸಭೆಯಲ್ಲಿ ಲೆಕ್ಕಾಧಿಕಾರಿ ಅಶ್ವಿನಿ ಸುನೈಯ್ಗೌಡ, ಆರೋಗ್ಯ ಇಲಾಖೆ ಸಿಬ್ಬಂದಿ ಹೇಮಲತಾ, ರೇಷ್ಮಾಬೇಗಂ, ಡಿಇಒ ಜಯಂತ್, ಗ್ರಾ.ಪಂ.ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ, ರೂಪಾಹರೀಶ್, ಸಿಬ್ಬಂದಿ ಕುಮಾರ್, ಯೋಗೇಶ್, ರಮೇಶ, ಸ್ವಾಮಿಗೌಡ, ಚಿನ್ನರಾಜ್, ಮಹದೇವ, ಹರೀಶ್, ಪೌರಕಾರ್ಮಿಕ ಚಿನ್ನ, ಚಾಲಕಿ ದಿವ್ಯಾ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-38-1048369736

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.