ಸರಗೂರು: ‘ಉಪ್ಪಾರ ಸಮುದಾಯ ಸಮಾಜಕ್ಕೆ ಪವಿತ್ರ ಗಂಗೆಯನ್ನು ನೀಡಿದೆ. ಒಗ್ಗಟ್ಟಿನಿಂದ ಬಾಳಿದಾಗ ಸಮುದಾಯಕ್ಕೆ ಶಕ್ತಿ ಬರುತ್ತದೆ’ ಸಮಾಜದ ಮುಖಂಡ ಎಸ್.ಎಂ. ಮಲ್ಲೇಶ್ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ತಾಲ್ಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಉದ್ಘಾಟಿಸಿ ಮಾತನಾಡಿದರು.

‘ಕಳೆದ ವರ್ಷದಿಂದ ಜಯಂತಿ ಮಾಡುವ ಸಮಯದಲ್ಲಿ ತಹಶೀಲ್ದಾರ್ ಮೋಹನಕುಮಾರಿ ಅವರು ಕಾರ್ಯಕ್ರಮಕ್ಕೆ ಬರದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದು ಸರಿಯಲ್ಲ, ಹೀಗೇ ಮುಂದುವರಿದರೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎಂ. ಸೋಮಶೇಖರ, ‘ತಾಲ್ಲೂಕಿನ ಎಲ್ಲಾ ಸಮುದಾಯದ ಹಾಗೂ ಸಂಘ –ಸಂಸ್ಥೆಗಳ ಸಮುದಾಯದ ಭವನಕ್ಕೆ ನಿವೇಶನ ನೀಡಲಾಗುತ್ತಿದೆ. ಆದರೆ ನಮ್ಮ ಸಮುದಾಯ ಭವನಕ್ಕೆ ನೀಡುತ್ತಿಲ್ಲ. ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಪ್ರಕ್ರಿಯಿಸಿದ ಕಂದಾಯ ಇಲಾಖೆ ಶಿರಸ್ತೇದಾರ್, ‘ಭವನಕ್ಕೆ ನಿವೇಶನ ಜಾಗವನ್ನು ಗುರುತಿಸಿ ಮನವಿ ಸಲ್ಲಿಸಿ, ಈ ಬಗ್ಗೆ ತಹಶೀಲ್ದಾರ್ ಗಮನಕ್ಕೆ ತರಲಾಗಿದ್ದು, ಶಾಸಕರ ಗಮನಕ್ಕೂ ತನ್ನಿ’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿಕ್ಕರಾಜಶಟ್ಟಿ, ಕಸಾಪದ ಕೆಂಡಗ್ಗಣಸ್ವಾಮಿ, ಮುಖಂಡರಾದ ಎಸ್. ರವಿ, ನಾಗರಾಜು, ಮಂಜು, ಪಶು ಸಂಗೋಪನಾ ಇಲಾಖೆ ಅಧಿಕಾರಿ ಪಾಟೀಲ್, ಕಬಿನಿ ನೀರಾವರಿ ಉಪವಿಭಾಗದ ಸಿಬ್ಬಂದಿ ಮಂಜುಳಾ, ಆರ್ಐ ಮುಜೀಬ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-38-1101203564

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.