ಸರಗೂರು: ‘ಆರೋಗ್ಯ ಶಿಬಿರಗಳ ಮೂಲಕ ಸಮುದಾಯ ಮತ್ತು ಅರಣ್ಯ ಇಲಾಖೆ ಸಂಬಂಧ ಗಟ್ಟಿಗೊಳ್ಳಲಿದೆ’ ಎಂದು ಎಚ್.ಡಿ.ಕೋಟೆ ಉಪವಿಭಾಗದ ವಲಯ ಅರಣ್ಯ ಅಧಿಕಾರಿ ರವಿಕುಮಾರ್ ತಿಳಿಸಿದರು.

ತಾಲ್ಲೂಕಿನ ಇಟ್ನ ಗ್ರಾಮದ ಬಸ್ ನಿಲ್ದಾಣ ಮುಂಭಾಗದಲ್ಲಿ ಅರಣ್ಯ ಇಲಾಖೆ ಪ್ರಾದೇಶಿಕ ಪ್ರಾದೇಶಿಕ ವಿಭಾಗ, ಹಾರ್ಟ್ ಸಂಸ್ಥೆ ಮೈಸೂರು ವತಿಯಿಂದ ನಡೆದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಜಾಸ್ತಿಯಾಗುತ್ತಿದ್ದು, ಇದರಿಂದ ಅರಣ್ಯ ಅಧಿಕಾರಿಗಳು ಮತ್ತು ಸಮುದಾಯದ ನಡುವೆ ಕೋಪ ತಾಪಗಳು ಉಂಟಾಗುತ್ತಿದೆ. ಇದನ್ನು ತಡೆಯಲು ಸಮಾಜಮುಖಿ ಕಾರ್ಯಕ್ರಮ ಆಯೋಜಿಸಲಾಗಿದೆ.’ ಎಂದರು.

ಹಾಲುಗಡ ಚಿಕ್ಕದೇವಮ್ಮ ಜಾತ್ರಾ ಸಮಿತಿಯ ಅಧ್ಯಕ್ಷ ದೊಡ್ಡವೀರನಾಯಕ,ಹಾರ್ಟ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ ಮಾತನಾಡಿದರು.

ಜಾನುವಾರುಗಳ ಶಿಬಿರದಲ್ಲಿ 310 ರಾಸುಗಳಿಗೆ ಚುಚ್ಚುಮದ್ದು ನೀಡಿ 45 ರಾಸುಗಳನ್ನು ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು. 97 ಜನರಿಗೆ ಬಿಪಿ, ಶುಗರ್, 110 ಜನರಿಗೆ ಸಾಮಾನ್ಯ ರೋಗ ತಪಾಸಣೆ, ಇಬ್ಬರಿಗೆ ಇಸಿಜಿ ಮಾಡಲಾಯಿತು. 65 ಜನರಿಗೆ ಕಣ್ಣಿನ ಪರೀಕ್ಷೆ, 11 ಜನರನ್ನು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ರವಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಬೆಟ್ಟನಾಯಕ, ನಿಂಗನಾಯಕ, ಕಾಳಿಂಗ ನಾಯಕ, ಬಸವರಾಜು, ನಾಗೇಂದ್ರ, ಪಿಡಿಒ ಚಿನ್ನಸ್ವಾಮಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-38-1876568871

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.