ಸರಗೂರು: ಇಲ್ಲಿನ ತಾಲ್ಲೂಕು ಕಚೇರಿಗೆ ಶುಕ್ರವಾರ ಬೆಳಿಗ್ಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದು ಕೆಲಕಾಲ ಆತಂಕ ಸೃಷ್ಟಿಯಾಯಿತು.

ರಿಮೋಟ್ ಕಂಟ್ರೋಲ್ ಹುಸಿ ಬಾಂಬ್ ಸ್ಫೋಟ ಮಾಡುವುದಾಗಿ ಇ– ಮೇಲ್ ಮೂಲಕ ಕಳುಹಿಸಿದ್ದ ಸಂದೇಶ ಕಂಡು ತಾಲ್ಲೂಕು ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಯಭೀತರಾದರು.

‘ತಹಶೀಲ್ದಾರ್ ಕಚೇರಿಯಲ್ಲಿ ಶೀಘ್ರದಲ್ಲಿ ರಿಮೋಟ್ ಕಂಟ್ರೋಲ್ ಬಾಂಬ್ ಸ್ಫೋಟ ಸಂಭವಿಸಲಿದೆ. ಎಲ್ಲರನ್ನೂ ತಕ್ಷಣ ತೆರವುಗೊಳಿಸಿ’ ಎಂದು ಕನ್ನಡದಲ್ಲಿ ಶೀರ್ಷಿಕೆ ಬರೆದಿದ್ದು, ‘ಬಾಗವತಾರ ಕುಂಡಿ @ ಔಟ್ಲುಕ್ ಡಾಟ್ ಕಾಂ. ತತ್ನಪುರ’ ಎಂಬ ಇ–ಮೇಲ್ ಐಡಿಯಿಂದ ಬೆಳಿಗ್ಗಿನ ಜಾವ 5ರ ಸುಮಾರಿಗೆ ದುಷ್ಕರ್ಮಿಯೊಬ್ಬ ಸಂದೇಶ ರವಾನಿಸಿದ್ದ.

ತಾಲ್ಲೂಕು ಕಚೇರಿ ಸಿಬ್ಬಂದಿ ಇ–ಮೇಲ್ ನೋಡಿದಾಗ ಕಚೇರಿಯಲ್ಲಿದ್ದ ಸಿಬ್ಬಂದಿ ಭಯಭೀತರಾಗಿ ಪ್ರಭಾರ ತಹಶೀಲ್ದಾರ್ ಶ್ರೀನಿವಾಸ್ ಅವರ ಗಮನಕ್ಕೆ ತಂದರು. ಕೂಡಲೇ ಅವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಸರಗೂರು ಪೊಲೀಸ್ ಠಾಣೆಯ ಪಿಎಸ್ಐ ಆರ್.ಕಿರಣ್ ಅವರ ತಂಡ ಭೇಟಿ ನೀಡಿ ಪರಿಶೀಲಿಸಿ ಕಚೇರಿಯಲ್ಲಿದ್ದ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಕಚೇರಿಯಿಂದ ಹೊರಕಳುಹಿಸಿದರು.

ಮೈಸೂರಿನಿಂದ ಬಂದ ಬಾಂಬ್ ನಿಷ್ಕ್ರಿಯ ತಂಡ ಹಾಗೂ ಶ್ವಾನ ದಳ ಕಚೇರಿ ಮತ್ತು ಸುತ್ತಮುತ್ತಲ ಪ್ರದೇಶವನ್ನು ಪರಿಶೀಲಿಸಿದವು. ತಹಶೀಲ್ದಾರ್ ಕಚೇರಿಯನ್ನು ಮಾತ್ರವಲ್ಲದೆ ಇಡೀ ಕಟ್ಟಡವನ್ನು ಸಂಪೂರ್ಣವಾಗಿ ಶೋಧಿಸಲಾಯಿತು. ಯಾವುದೇ ಬಾಂಬ್ ಹಾಗೂ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇದರಿಂದ ಇ–ಮೇಲ್ ನಕಲಿ ಎಂದು ಸಾಭೀತಾಯಿತು.

ಪ್ರಭಾರ ತಹಶೀಲ್ದಾರ್ ಶ್ರೀನಿವಾಸ್ ಮಾತನಾಡಿ, ‘ಕಚೇರಿಯ ಶಿರಸ್ತೇದಾರ್ ಮನೋಹರ್ ಅವರು ಎಂದಿನಂತೆ ಇ–ಮೇಲ್ ಅನ್ನು ನೋಡುವಾಗ ಇದು ಕಂಡು ಬಂದಿದೆ. ಸರಗೂರು ತಾಲ್ಲೂಕು ಇದ್ದುದರಿಂದ ನಾವು ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಯಿತು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ‘ಈಶಾ’ ಒಂದು ಗಂಟೆ ಪರಿಶೀಲಿಸಿವೆ. ಯಾವುದೇ ವಸ್ತು ಕಂಡು ಬಂದಿಲ್ಲದಿರುವುದರಿಂದ ಯಾರೂ ಆತಂಕಕ್ಕೆ ಒಳಗಾಗದೇ ಕೆಲಸಕ್ಕೆ ಬರಬಹುದು’ ಎಂದು ಮನವಿ ಮಾಡಿಕೊಂಡರು.

ಎಎಸ್ಐ ಶ್ರೀಕಂಠ ಸ್ವಾಮಿ, ಸಿಬ್ಬಂದಿ ಕೃಷ್ಣಯ್ಯ, ಸುನೀಲ್ ಕುಮಾರ್, ಜಗದೀಶ್ ಶೆಟ್ಟಿ, ಬಾಂಬ್ ನಿಷ್ಕ್ರಿಯ ಹಾಗೂ ಶ್ವಾನದಳ ಅಧಿಕಾರಿ ವೀರಭದ್ರಪ್ಪ, ಪುಟ್ಟರಾಜು, ಮೂರ್ತಿ, ಪುಟ್ಟರಾಜು ರಾಜೇಶ್, ಗ್ರೇಡ್– 2 ತಹಶೀಲ್ದಾರ್ ಪರಶಿವಮೂರ್ತಿ, ಉಪತಹಶೀಲ್ದಾರ್ ಸುನೀಲ್, ಆರ್ಐ ರವಿಚಂದ್ರನ್, ಮುಜೀಬ್, ಶ್ರೀನಿವಾಸ್ ಹಾಜರಿದ್ದರು.

ಸರಗೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-38-1709274839

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.