ಮೈಸೂರು: ‘ಕವಿಗಳು ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಬೇಕು’ ಎಂದು ಸಾಹಿತಿ ಸಿದ್ದಣ್ಣ ಬಾಡಗಿ ಆಶಿಸಿದರು.

ಇಲ್ಲಿನ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಸುವರ್ಣ ಕರ್ನಾಟಕ ಪ್ರೆಸ್ ಅಸೋಸಿಯೇಷನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ‘ಮೈಸೂರು ಸಾಹಿತ್ಯ ಸಂಭ್ರಮ-2’ ಕಾರ್ಯಕ್ರಮದ ಸರ್ವಾಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.

‘ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಹೀಗಾಗಿ ತಾಯಿ ಮನಸ್ಸು ಮಾಡಿದರೆ ಕನ್ನಡ ಸಂಸ್ಕಾರವನ್ನು ಚಿಕ್ಕಂದಿನಿಂದಲೇ ಬೆಳೆಸಬಹುದು’ ಎಂದರು.

‘ಪ್ರಸ್ತುತ ಕನ್ನಡವನ್ನು ಬೆಳೆಸಿ ಎನ್ನುವ ಬದಲು ಉಳಿಸಿಕೊಂಡು ಹೋಗಿ ಎನ್ನಬೇಕಾದ ಪರಿಸ್ಥಿತಿ ಇದೆ’ ಎಂದು ಹೇಳಿದರು.

‘ಹುಟ್ಟೂರು, ಸಮಾಜ ಹಾಗೂ ಭಾಷೆಯ ಋಣವನ್ನು ಎಂದಿಗೂ ಮರೆಯಬಾರದು. ಬೇರೆ ಭಾಷೆ ವಿರೋಧಿಸದೆ, ನಮ್ಮ ಕನ್ನಡದ ಬಗ್ಗೆ ಪ್ರೀತಿ ಇರಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ‘ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದರೆ ಮುಂದಿನ ಪೀಳಿಗೆಗೆ ಸಾಹಿತ್ಯವನ್ನು ತಲುಪಿಸುವುದೇ ಸವಾಲಿನ ಕೆಲಸ’ ಎಂದರು.

ಜಿಲ್ಲಾ ಕಸಾಪ ಉಪಾಧ್ಯಕ್ಷ ಟಿ. ತ್ಯಾಗರಾಜು, ಕಲಾವಿದ ರವಿ ಸಂತು ಮಾತನಾಡಿದರು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿದರು. ನೆಲೆ ಟ್ರಸ್ಟ್ ಖಜಾಂಚಿ ಎಂ. ಶಿಲ್ಪಾ, ವಾತ್ಸಲ್ಯ ಸೇವಾ ಫೌಂಡೇಷನ್ ಅಧ್ಯಕ್ಷ ಎ.ಸಿ. ರವಿಕುಮಾರ್, ಸಮರ್ಪಣಾ ಸೇವಾ ಟ್ರಸ್ಟ್ ಅಧ್ಯಕ್ಷ ಕುಮಾರ್, ಬೆಂಗಳೂರಿನ ಪರಿಸರ ಪ್ರೇಮಿ ಧನಲಕ್ಷ್ಮಿ, ಪ್ರಗತಿಪರ ರೈತ ರಾಜೇಗೌಡ ಮುಖ್ಯ ಅತಿಥಿಗಳಾಗಿದ್ದರು. ಶಿವಕುಮಾರ್, ಮಹಾಂತೇಶ್ ಚಿನ್ನ ಪಾಲ್ಗೊಂಡಿದ್ದರು.

ಎಂ.ಪಿ. ಮಂಜುನಾಥ್ ಸ್ವಾಗತಿಸಿದರು. ನಿವೃತ್ತ ಶಿಕ್ಷಕಿ ಸುಬ್ಬಲಕ್ಷ್ಮಿ ಪ್ರಾರ್ಥನಾ ಗೀತೆ ಹಾಡಿದರು. ಸಂಸ್ಥೆಯ ಸಂಸ್ಥಾಪಕಿ ಮಂಜುಳಾ ಪಾವಗಡ ಪ್ರಾಸ್ತಾವಿಕ ಭಾಷಣ ಮಾಡಿದರು. ನಂದಾದೀಪ ನಿರೂಪಿಸಿದರು.

ನಂತರ ಸಾಹಿತ್ಯ ಕ್ಷೇತ್ರಕ್ಕೆ ಮೈಸೂರು ಸಂಸ್ಥಾನದ ಕೊಡುಗೆ ಕುರಿತ ವಿಚಾರಗೋಷ್ಠಿ, ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ನಡೆಯಿತು. ಸಾಧನೆ ತೋರಿದ ಅಂಗವಿಕಲರು ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.