ಮೈಸೂರು: ‘ದೇವರು ಶುದ್ಧವಾದ ಭಕ್ತಿಗೆ ಮಾತ್ರವೇ ಒಲಿಯುತ್ತಾನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ವರುಣ ಹೋಬಳಿಯ ವರಕೋಡು ಗ್ರಾಮದಲ್ಲಿ ವರಕೋಡು ಗಡಿ ಗುರುಮಠದ ಆವರಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಬೀರೇಶ್ವರಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಕುಂಭಾಭಿಷೇಕ ಹಾಗೂ ಮಹಾದ್ವಾರ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ದೇವರಿದ್ದಾನೆ. ದೇವರಲ್ಲಿ ಭಕ್ತಿ ಇರಬೇಕು. ಶುದ್ಧವಾದ ಭಕ್ತಿ ಇರಬೇಕು. ಶುದ್ಧವಾದ ಭಕ್ತಿ ಇಲ್ಲದೇ ಎಷ್ಟೇ ಪೂಜೆ, ದರ್ಶನ ಮಾಡಿದರೂ ಅದು ಸಾರ್ಥಕ ಆಗುವುದಿಲ್ಲ. ಮಾನವೀಯತೆಯಿಂದ ಕೂಡಿರುವುದು, ನಿಷ್ಕಲ್ಮಶವಾದುದು, ಯಾರನ್ನೂ ದ್ವೇಷಿಸದೇ ಇರುವುದೇ ನಿಜವಾದ ಭಕ್ತಿ. ಬೇರೆಯವರಿಗೂ ಒಳಿತನ್ನೇ ಬಯಸಬೇಕು. ನಮ್ಮೊಂದಿಗೆ ಇತರರಿಗೂ ಒಳ್ಳೆಯದಾಗಲಿ ಎಂದೇ ಪ್ರಾರ್ಥಿಸಬೇಕು’ ಎಂದರು.

ಪ್ರತಿ ಕ್ಷಣವೂ ಗಮನಿಸುತ್ತಾನೆ:

‘ದೇವರು ಗುಡಿಯಲ್ಲಷ್ಟೇ ಇರುತ್ತಾನೆ ಎಂಬ ನಂಬಿಕೆ ಸರಿಯಾದುದಲ್ಲ. ದೇವರು ಎಲ್ಲ ಕಡೆಯೂ ಇದ್ದಾನೆ. ನಾವು ಮಾಡುವ ಕೆಲಸವನ್ನು ಪ್ರತಿ ಕ್ಷಣವೂ ನೋಡುತ್ತಲೇ ಇರುತ್ತಾನೆ’ ಎಂದು ಹೇಳಿದರು.

‘ಈಗಿನ ಹುಂಡಿಗಳಿಗೂ ಆಗಿನ ಹುಂಡಿಗಳಿಗೂ ಬಹಳಷ್ಟು ವ್ಯತ್ಯಾಸ ಇದೆ. ಎಲ್ಲ ಹುಂಡಿಗಳ ಜನರೂ ನನ್ನನ್ನು ಹಿಂದಿನಿಂದಲೂ ಬೆಂಬಲಿಸುತ್ತಾ ಬಂದಿದ್ದೀರಿ’ ಎಂದರು.

‘ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ. ಯಾವ ಧರ್ಮವೂ ಯಾರನ್ನೂ ದ್ವೇಷಿಸುವಂತೆ ಹೇಳಿಲ್ಲ’ ಎಂದು ತಿಳಿಸಿದರು.

ಸೌಕರ್ಯ ಒದಗಿಸಲಾಗಿದೆ:

ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ‘ಈ ದೇವಸ್ಥಾನಕ್ಕೆ ಮೂಲಸೌಕರ್ಯವನ್ನು ಸರ್ಕಾರದಿಂದ ಮಾಡಿಕೊಡಲಾಗಿದೆ. ದಾನಿಗಳು, ಭಕ್ತರು ಹಾಗೂ ಎಲ್ಲರ ಸಹಕಾರದಿಂದ ಭವ್ಯವಾದ ದೇವಸ್ಥಾನ ನಿರ್ಮಾಣವಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಕಾಗಿನೆಲೆ ಕನಕ ಗುರುಪೀಠದ ಕೆ.ಆರ್. ನಗರ ಶಾಖೆಯ ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್ಕುಮಾರ್ ಹಾಗೂ ಮುಖಂಡರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ, ಗ್ರಾಮದ ಮುಖಂಡರು ಹೆಲಿಪ್ಯಾಡ್ ಬಳಿಯಿಂದ ಸಿದ್ದರಾಮಯ್ಯ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆತಂದರು. ದೇವಸ್ಥಾನದ ಪ್ರವೇಶದ್ವಾರದ ಬಳಿ ಸೇಬುಗಳಿಂದ ಸಿದ್ಧಪಡಿಸಿದ ದೊಡ್ಡದಾದ ಹಾರವನ್ನು ಕ್ರೇನ್ನಲ್ಲಿ ಹಾಕಿ, ಪುಷ್ಪಮಳೆಗರೆದು ಅಭಿಮಾನ ವ್ಯಕ್ತಪಡಿಸಿದರು. ಗ್ರಾಮದಾದ್ಯಂತ ಸಂಭ್ರಮ ಮನೆ ಮಾಡಿತ್ತು.

ವಿವಿಧ ಜಾತಿ ಧರ್ಮ ವರ್ಗಗಳ ಬಡಜನರಿಗೆ ಅನೇಕ ಭಾಗ್ಯಗಳು ಹಾಗೂ ಗ್ಯಾರಂಟಿ ಕಾರ್ಯಕ್ರಮಗಳನ್ನು ಕೊಟ್ಟಿದ್ದೇನೆ. ಅವು ನಿರ್ದಿಷ್ಟ ಜಾತಿ ಧರ್ಮದವರಿಗೆ ಸೀಮಿತವಾಗಿಲ್ಲ.
ಸಿದ್ದರಾಮಯ್ಯ ಮುಖ್ಯಮಂತ್ರಿ

ಜನರ ಆಶೀರ್ವಾದದಿಂದ... ‘1978ರಲ್ಲಿ ಈ ಪ್ರದೇಶದಿಂದಲೇ ನನ್ನ ರಾಜಕೀಯ ಜೀವನ ಪ್ರಾರಂಭವಾಯಿತು. ಅಪಾರ ಜನಬೆಂಬಲ ಇಲ್ಲಿ ಸಿಕ್ಕಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೆನೆದರು. ‘ಚಾಮುಂಡೇಶ್ವರಿ ಮತ್ತು ವರುಣ ಕ್ಷೇತ್ರದ ಜನರು ನನ್ನನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಇಲ್ಲಿನ ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ 17 ಬಾರಿ ಬಜೆಟ್ಗಳನ್ನು ಮಂಡಿಸುವ ಅವಕಾಶ ದೊರೆತಿದೆ. ನಾನು 13 ಚುನಾವಣೆಗಳನ್ನು ಎದುರಿಸಿದ್ದು ನಾಲ್ಕು ಬಾರಿ ಸೋತ ಸಂದರ್ಭದಲ್ಲೂ ಈ ಭಾಗದ ಜನರು ನನ್ನನ್ನೇ ಬೆಂಬಲಿಸಿದ್ದಾರೆ. ನನ್ನ ರಾಜಕೀಯ ಬದುಕಿಗೆ ಇಲ್ಲಿನ ಜನರ ಕೊಡುಗೆ ಅನನ್ಯವಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.