ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೌಶಲ ಆಧಾರಿತ ಶಿಕ್ಷಣದಿಂದ ಭವಿಷ್ಯ’

Last Updated 4 ಡಿಸೆಂಬರ್ 2022, 12:43 IST
ಅಕ್ಷರ ಗಾತ್ರ

ಮೈಸೂರು: ‘ವಿಶ್ವವಿದ್ಯಾಲಯಗಳ ಪದವಿ, ಸ್ನಾತಕೋತ್ತರ ಪದವಿಗಳಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯುವುದಿಲ್ಲ. ಕೌಶಲ ಆಧಾರಿತ ಶಿಕ್ಷಣ ಪಡೆದಾಗ ಮಾತ್ರ ಭವಿಷ್ಯ ಉಜ್ವಲವಾಗುತ್ತದೆ’ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಹೇಳಿದರು.

ಇಲ್ಲಿನ ಸರಸ್ವತಿಪುರಂನ ಯೋಗಿ ನಾರಾಯಣ ಬಲಿಜ(ಬಣಜಿಗ) ಸಂಘ ಹಾಗೂ ನೇತಾಜಿ ಕರಿಯರ್‌ ಅಕಾಡೆಮಿ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಸ್ಪರ್ಧಾತ್ಮಕ ಪರೀಕ್ಷೆಗಳು ಅಂದು: ಇಂದು’ ವಿಷಯ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

‘ನಿರಂತರವಾಗಿ ಕಲಿಕೆಗಳಲ್ಲಿ ತೊಡಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಾಮರ್ಥ್ಯ ಗಳಿಸಿದಾಗ ಮಾತ್ರ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ. ಓದುತ್ತಿರುವಾಗಲೇ ಉದ್ಯೋಗದ ಬಗ್ಗೆ ಚಿಂತಿಸಿ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನಿರುದ್ಯೋಗವು ಇಂದಿನ ಬಹು ದೊಡ್ಡ ಸಮಸ್ಯೆಯಾಗಿದೆ. ಪದವೀಧರರು ಉದ್ಯೋಗ ದಕ್ಕಿಸಿಕೊಳ್ಳುವುದನ್ನು ಸವಾಲಾಗಿ ಸ್ವೀಕರಿಸಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೈಪೋಟಿ ನಡೆಸುವುದು ಅನಿವಾರ್ಯವಾಗಿದೆ. ಗ್ರಾಮಾಂತರ ಹಾಗೂ ಬಡ ಕುಟುಂಬದಿಂದ ಬಂದ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಜ್ಞಾನವನ್ನು ಕಾರ್ಯಾಗಾರಗಳ ಮೂಲಕ ಸಂಪಾದಿಸಬೇಕು. ವಿದ್ಯಾರ್ಥಿನಿಲಯಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಶಿಬಿರಗಳನ್ನು ನಡೆಸುವುದು ವ್ಯವಸ್ಥಾಪಕರ ಕರ್ತವ್ಯವಾಗಿದೆ’ ಎಂದರು.

ನೇತಾಜಿ ಕರಿಯರ್ ಅಕಾಡೆಮಿ ಆಡಳಿತಾಧಿಕಾರಿ ಎಂ.ಎಸ್.ಪ್ರೊ.ಸುಮಿತ್ ಕುಮಾರ್, ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಪ್ರೊ.ನಾಗರಾಜು ಬಿಜಗನಹಳ್ಳಿ, ಪಿಎಸ್ಐ ಎಸ್.ಸಾಗರ್, ವಿಜ್ಞಾನಿ ಡಾ.ಮಹೇಶ್, ಉಪನ್ಯಾಸಕ ಡಾ.ಟಿ.ರಮೇಶ್ ಮಾತನಾಡಿದರು.

ಯೋಗಿನಾರೇಯಣ ಬಣಜಿ(ಬಲಿಜ)ಗ ಸಂಘದ ಅಧ್ಯಕ್ಷ ಎಂ.ನಾರಾಯಣ, ಉಪಾಧ್ಯಕ್ಷ ಜಿ.ರಮೇಶ್, ಖಜಾಂಚಿ ಕೆ.ಚಂದ್ರಶೇಖರ್, ನಿರ್ದೇಶಕರಾದ ವಿಜಯಕುಮಾರ್, ಎಚ್.ಕೆ.ಜಗನ್ನಾಥ್, ಎಚ್.ವಿ.ನಾಗರಾಜು, ಟಿಎಸ್ ರಮೇಶ್, ಎಂ.ನಾಗರಾಜ್, ನಂಜಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT