ಮೈಸೂರು: ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ ಇಲ್ಲಿನ ವಿಭಾಗೀಯ ಕಚೇರಿಯ ಅವರಣದಲ್ಲಿ ರೈಲ್ವೆ ಉದ್ಯೋಗಿಗಳ ಮಕ್ಕಳಿಗಾಗಿ ‘ಡೇ ಕೇರ್ (ಕ್ರೆಚ್) ಕೇಂದ್ರ’ವನ್ನು ಆರಂಭಿಸಿದೆ.

ಕೇಂದ್ರವನ್ನು ಗುಂಟೂರು ವಿಭಾಗದ ಡಿಆರ್ಎಂ ಹಾಗೂ ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘದ ಅಧ್ಯಕ್ಷೆ ಸುಧೇಷ್ಣಾ ಸೇನ್ ಆನ್ಲೈನ್ ಮೂಲಕ ಉದ್ಘಾಟಿಸಿದರು. ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಅವರು ರಿಬ್ಬನ್ ಕತ್ತರಿಸಿ ಕೇಂದ್ರವನ್ನು ಉದ್ಘಾಟಿಸಿದರು.

‘ಮಹಿಳಾ ಉದ್ಯೋಗಿಗಳಿಗೆ ಬೆಂಬಲಕಾರಿ ಮತ್ತು ಸಮಾನತೆಯ ಕೆಲಸದ ವಾತಾವರಣ ಒದಗಿಸುವ ಜವಾಬ್ದಾರಿಯ ಭಾಗವಾಗಿ ಕೇಂದ್ರ ಸ್ಥಾಪಿಸಲಾಗಿದೆ. ಮಹಿಳಾ ದಿನಾಚರಣೆ ವೇಳೆಯೇ ಉದ್ಘಾಟನೆಗೊಂಡಿರುವುದು, ಇಲ್ಲಿ ಕೆಲಸ ಮಾಡುವ ತಾಯಂದಿರು ಹಾಗೂ ಅವರ ಕುಟುಂಬಗಳಿಗೆ ಸಂಸ್ಥೆಯು ನೀಡುತ್ತಿರುವ ಬೆಂಬಲವನ್ನು ಪ್ರತಿಬಿಂಬಿಸುತ್ತದೆ’ ಎಂದು ಹೇಳಿದರು.

ವಿಭಾಗದಲ್ಲಿ ಒಟ್ಟು 580 ಮಹಿಳಾ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಅವರಲ್ಲಿ 87 ನೌಕರರು ವಿಭಾಗೀಯ ಕಚೇರಿಯಲ್ಲೇ ಇದ್ದಾರೆ. ಅವರ ಮಕ್ಕಳಿಗೆ ಸುರಕ್ಷಿತ ಹಾಗೂ ಆರೈಕೆಪೂರ್ಣ ವಾತಾವರಣವನ್ನು ಕೇಂದ್ರದಲ್ಲಿ ಒದಗಿಸಲಾಗುವುದು ಎಂದು ತಿಳಿಸಿದರು.

ಹಿರಿಯ ವಿಭಾಗೀಯ ಕಾರ್ಯಾಚರಣಾ ವ್ಯವಸ್ಥಾಪಕಿ ಹರಿತಾ ಎಸ್. ಮಾತನಾಡಿ, ‘ಇಂತಹ ಕಲ್ಯಾಣ ಕಾರ್ಯಕ್ರಮಗಳು ಮಹಿಳಾ ಉದ್ಯೋಗಿಗಳು ಅವರ ವೃತ್ತಿ ಮತ್ತು ಕುಟುಂಬದ ಜವಾಬ್ದಾರಿಗಳನ್ನು ಸಮತೋಲನದಿಂದ ನಿರ್ವಹಿಸಲು ಸಹಾಯಕ ಆಗುತ್ತವೆ’ ಎಂದರು.

‘ಪ್ರಸೂತಿ ರಜೆ ನಂತರ ಕೆಲಸಕ್ಕೆ ಮರಳುವ ಮಹಿಳಾ ನೌಕರರು ಯಾವುದೇ ಆತಂಕವಿಲ್ಲದೆ, ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲು ಇದು ಸಹಕಾರಿಯಾಗಿದೆ. ಮಕ್ಕಳ ಅಭಿವೃದ್ಧಿ ಹಾಗೂ ತಾಯಂದಿರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ’ ಎಂದು ಹೇಳಿದರು.

ತಾಯಂದಿರಿಗಾಗಿ ವಿಶೇಷ ನರ್ಸಿಂಗ್ ಲಾಂಜ್, ಡೈಪರ್ ಬದಲಿಸುವ ಸ್ಥಳ, ವಿಶ್ರಾಂತಿ ಮತ್ತು ನಿದ್ರೆಗೆ ಸ್ಲೀಪ್ಪಾಡ್ಸ್, ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾ ನಿಗಾ, ಮಕ್ಕಳ ಸೃಜನಶೀಲತೆಗೆ ಸ್ಕ್ರಿಬಲ್ ಕಾರ್ನರ್, ಓದುವ ಅಭ್ಯಾಸ ಬೆಳೆಸಲು ರೀಡಿಂಗ್ ಕಾರ್ನರ್, ಕಲ್ಪನೆ ಮತ್ತು ಸಾಮಾಜಿಕ ಕೌಶಲಗಳನ್ನು ಉತ್ತೇಜಿಸಲು ಪ್ರಿಟೆಂಡ್ ಪ್ಲೇ ಕಾರ್ನರ್ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ದೈಹಿಕ, ಭಾವನಾತ್ಮಕ ಹಾಗೂ ಸಂವೇದನಾತ್ಮಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ನಿಗದಿತ ಶುಲ್ಕ ಪಾವತಿಸಿ ನೌಕರರು ಸೌಲಭ್ಯ ಬಳಸಿಕೊಳ್ಳಬಹುದಾಗಿದೆ ಎಂದು ವಿಭಾಗೀಯ ಹಣಕಾಸು ವ್ಯವಸ್ಥಾಪಕ ಪೃಥ್ವಿ ಎಸ್. ಹುಲ್ಲತ್ತಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.