ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಶ್ರೀರಾಮನವಮಿಯನ್ನು ಸಂಭ್ರಮ, ಭಕ್ತಿ–ಭಾವದಿಂದ ಆಚರಿಸಲಾಯಿತು.

ಅಲ್ಲಲ್ಲಿ ವಿವಿಧ ಸಂಘಟನೆಗಳವರು, ಸಂಸ್ಥೆಗಳವರು ಹಾಗೂ ಸಂಘದವರು ಸಾರ್ವಜನಿಕರಿಗೆ ಪಾನಕ, ಕೋಸಂಬರಿ, ಮಜ್ಜಿಗೆ ವಿತರಿಸಲಾಯಿತು. ಶ್ರೀರಾಮನ ಫೋಟೊಗಳಿಗೆ ಪೂಜೆ ನೆರವೇರಿಸಲಾಯಿತು. ದೇವಸ್ಥಾನಗಳಲ್ಲಿ ಪೂಜೆಗಳು ನೆರವೇರಿದವು.

ವಿದ್ಯಾರಣ್ಯಪುರಂನ ಅವನಿ ಶಂಕರ ಮಠದಲ್ಲಿ ಶ್ರೀರಾಮ ಸೇವಾ ಮಂಡಳಿ ಸೇರಿದಂತೆ ವಿವಿಧೆಡೆ ಸಂಗೀತ ಕಾರ್ಯಕ್ರಮಗಳು ನಡೆದವು. ಶ್ರೀರಾಮಾಭ್ಯುದಯ ಸಭಾ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ನಿಂದ ಶ್ರೀರಾಮಪೇಟೆಯ ಆಲಮ್ಮನವರ ಛತ್ರದಲ್ಲಿ ಸಂಗೀತೋತ್ಸವಕ್ಕೆ ಚಾಲನೆ ನೀಡಲಾಯಿತು.

ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸದ್ವಿದ್ಯಾ ಪ್ರೌಢಶಾಲೆ ಬಳಿಯ ಆಂಜನೇಯ ದೇವಸ್ಥಾನ ಬಳಿ, ಅಂಬಾವಿಲಾಸ ಅರಮನೆ ಬಳಿ ಮೈಸೂರು ಅರಮನೆ ವರ್ತಕರ ಸಂಘದವರು ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ವಿತರಿಸಿ ಭಕ್ತಿ ಮೆರೆದರು.

ಮೌಲ್ಯಗಳ ಪ್ರತಿಬಿಂಬ: ಹರೀಶ್ ಗೌಡ

‘ಶ್ರೀರಾಮನ ಜೀವನದ ಪ್ರತಿಯೊಂದು ಕ್ಷಣವೂ ನಿಯಮ, ಶಿಸ್ತು ಮತ್ತು ಧರ್ಮದ ಅನುಸರಣೆ ಎಂಬ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ’ ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದರು.

‘ಮೈಸೂರು ಯುವ ಬಳಗ’ದಿಂದ ಇಲ್ಲಿನ ದೇವರಾಜ ಅರಸು ರಸ್ತೆಯಲ್ಲಿ ಶ್ರೀರಾಮನವಮಿ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ ನೆರವೇರಿಸಿ, ಭಕ್ತರಿಗೆ ಪಾನಕ, ಮಜ್ಜಿಗೆ ವಿತರಿಸಿ ಅವರು ಮಾತನಾಡಿದರು.

‘ಶ್ರೀರಾಮ ನಾಮ ಸ್ಮರಣೆಯಿಂದ ಜೀವನ ಪಾವನವಾಗುತ್ತದೆ. ಮರ್ಯಾದಾ ಪುರುಷೋತ್ತಮನಾದ ಆತ ಎಲ್ಲರಿಗೂ ಆದರ್ಶ’ ಎಂದರು.

ಕನಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರವಿ ಚಂದ್ರ, ಮೈಸೂರು ರಕ್ಷಣಾ ವೇದಿಕೆ ಯುವ ಘಟಕದ ಅಧ್ಯಕ್ಷ ಗುರುರಾಜ್, ರಾಮರಾಜ್, ಸಂದೀಪ್, ನವೀನ್, ಸಂತೋಷ್, ಪ್ರಮೋದ್, ನಿತಿನ್, ಶ್ರೀನಿವಾಸ್, ಎಸ್.ಎನ್. ರಾಜೇಶ್, ಮಂಜುನಾಥ್, ಹರೀಶ್ ಗೌಡ, ಹೇಮಂತ್, ಹರ್ಷ ಪಾಲ್ಗೊಂಡಿದ್ದರು.

ಅಭಿಷೇಕ:

ಕೃಷ್ಣಮೂರ್ತಿಪುರಂನ ಶ್ರೀರಾಮ ಮಂದಿರದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ನೆರವೇರಿಸಲಾಯಿತು. ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ,

ಮಾಧವ್ ರಾವ್, ವಿಕ್ರಮ ಅಯ್ಯಂಗಾರ್, ಶೇಷಾದ್ರಿ, ಶ್ರೀನಿವಾಸ್, ಕೃಷ್ಣ, ಅಶ್ವತ್ಥ್ನಾರಾಯಣ್ ಹಾಜರಿದ್ದರು.

ಚಾಮುಂಡಿಪುರಂ:

ಶ್ರೀರಾಮ ಗೆಳೆಯರ ಬಳಗದಿಂದ ಚಾಮುಂಡಿಪುರಂ ವೃತ್ತದಲ್ಲಿ ‘ಶ್ರೀರಾಮನವಮಿ’ಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಫೋಟೊಗೆ ಪೂಜೆ, ಪುಷ್ಪಾರ್ಚನೆ ಸಲ್ಲಿಸಲಾಯಿತು. ಸಾರ್ವಜನಿಕರಿಗೆ ಮಜ್ಜಿಗೆ ಮತ್ತು ಪಾನಕ ವಿತರಿಸಲಾಯಿತು.

ಬಳಗದ ಅಧ್ಯಕ್ಷ ಸಿ. ಸಂದೀಪ್ ಮಾತನಾಡಿ, ‘ಮರ್ಯಾದಾ ಪುರುಷೋತ್ತಮನ ಸದ್ಗುಣಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಂಡು, ಸಮಾಜದ ಹಿತಕ್ಕಾಗಿ ಶ್ರಮಿಸೋಣ. ದೇವರ ಅನುಗ್ರಹದಿಂದ ಎಲ್ಲೆಡೆ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲಸಲಿ’ ಎಂದರು.

ಬಳಗದ ಅಧ್ಯಕ್ಷ ಸಿ. ಸಂದೀಪ್, ನಗರಪಾಲಿಕೆ ಮಾಜಿ ಸದಸ್ಯ ಜಗದೀಶ್, ದೂರ ರಾಜಣ್ಣ, ಸುರೇಶ್, ಜತ್ತಿ ಪ್ರಸಾದ್, ವಿಜಯ್ಕುಮಾರ್, ಅಂಬಳೆ ಶಿವಣ್ಣ, ರಾಮ್ ಅರಸ್, ಬಸವರಾಜು, ಪ್ರಭು ಶಂಕರ್, ಮೋಹನ್, ಶಿವಲಿಂಗ ಸ್ವಾಮಿ, ಶಿವಪ್ರಸಾದ್, ಗಿರೀಶ್ ಪಾರ್ವತಿ, ಮಧುಸೂಧನ್, ಸಂದೇಶ್, ಸತ್ಯರಾಜ್, ನರಸಿಂಹ ಉಪಸ್ಥಿತರಿದ್ದರು.

ರಾಮತಾರಕ ಹೋಮ:

ಇರ್ವಿನ್ ರಸ್ತೆಯ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀರಾಮ ತಾರಕ ಹೋಮ ನಡೆಸಲಾಯಿತು. ಪಂಚಮುಖಿ ಆಂಜನೇಯ ಸ್ವಾಮಿ ಹಾಗೂ ಶ್ರೀರಾಮನಿಗೆ ವಿಶೇಷ ಅಭಿಷೇಕ ಪ್ರಧಾನ ಅರ್ಚಕ ಎಸ್. ಕೃಷ್ಣಮೂರ್ತಿ ನೇತೃತ್ವದಲ್ಲಿ ನೆರವೇರಿತು. ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು.

ವಿದ್ಯಾರಣ್ಯಪುರಂನ ಚಿನ್ಮಯ ಮಿಷನ್ನಲ್ಲಿ ಶ್ರೀರಾಮನವಮಿ ಪ್ರಯುಕ್ತ ಕಾಶಿಕಾನಂದ ಸ್ವಾಮಿ ಅವರಿಂದ ಸತ್ಸಂಗ, ಭಜನೆ, ಅಷ್ಟೋತ್ತರ ಅರ್ಚನೆ ಹಾಗೂ ಮಹಾಮಂಗಳಾರತಿ ನೆರವೇರಿತು.

ಪಿಎಡಿಸಿ:

ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್ಸ್ನಿಂದ (ಪಿಎಡಿಸಿ) ನಡೆಸಲಾಗುತ್ತಿರುವ ‘ಇನ್ಸ್ಟಿಟ್ಯೂಟ್ ಆಫ್ ಮದರ್ ಅಂಡ್ ಡೆಫ್ ಚೈಲ್ಡ್’ ಶಾಲೆಯಲ್ಲಿ ಶ್ರೀರಾಮನವಮಿ ಆಚರಿಸಲಾಯಿತು. ಮಕ್ಕಳಿಗೆ ರಾಮಾಯಣದ ಕಿರುಪರಚಯ ನೀಡಲಾಯಿತು.

ದಶರಥನಾಗಿ ಆರುಶಿ, ಶ್ರೀರಾಮನಾಗಿ ಅನ್ಶಿಕ್, ಲಕ್ಷಣನಾಗಿ ಇಬ್ಬನಿ, ಭರತನಾಗಿ ಧೃವಿನ್ ಮತ್ತು ಶತ್ರುಘ್ನನಾಗಿ ಯಶಸ್ ವೇಷ ಧರಿಸಿ ಗಮನಸೆಳೆದರು.

ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯೆ ಜಲಜಾ ಗೋವಿಂದಪ್ಪ, ಶಿಕ್ಷಕಿಯರಾದ ವಿಜಯ ಶಿವಣ್ಣ, ಪರಿಮಳಾ ಮೂರ್ತಿ, ನೀಲುಸಿಂಗ್, ಅಶ್ವಿನಿ ಪಾಟೀಲ್, ರೀತಾ ಶೆಟ್ಟಿ, ಅಶ್ವಿನಿ ಪಾಲ್ಗೊಂಡಿದ್ದರು.

ಸಮರ್ಥನಂ:

ವಿಜಯನಗರ 2ನೇ ಹಂತದ ಸಮರ್ಥನಂ ಅಂಗವಿಕಲರ ಸಂಸ್ಥೆ ಆವರಣದಲ್ಲಿ ಶ್ರೀರಾಮನವಮಿಯನ್ನು ಭಕ್ತಿ– ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಸಿಬ್ಬಂದಿ ಹಾಗೂ ಸ್ವಯಂಸೇವಕರು ಸಾರ್ವಜನಿಕರು ಹಾಗೂ ಭಕ್ತರಿಗೆ ಪಾನಕ ಮತ್ತು ಮಜ್ಜಿಗೆ ವಿತರಿಸಿದರು.

ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗದ ಸಂಯೋಜಕ ಶಿವರಾಜು, ಶಾಲೆಯ ಮುಖ್ಯಶಿಕ್ಷಕಿ ಭ್ರಮಾರಂಭ, ಆರ್. ಸುಬ್ರಮಣಿ, ಮಹಾಂತೇಶ್, ಚೈತ್ರಕುಮಾರಿ, ಬೃಂದಾಬಾಯಿ, ಪದ್ಮಾ, ಸ್ಪರ್ಶ, ವಿದ್ಯಾವತಿ, ಎಸ್.ಲತಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.