ಮೈಸೂರು: ಲೇಖಕ ಶ್ರೀಕೃಷ್ಣ ಆಲನಹಳ್ಳಿ ಅವರ ‘ಸಮಗ್ರ ಕಥೆಗಳು’ ಕೃತಿಯನ್ನು ಸಾಹಿತಿ ದೇವನೂರ ಮಹಾದೇವ ಸೋಮವಾರ ಬಿಡುಗಡೆ ಮಾಡಿದರು.

ನಂತರ ಮಾತನಾಡಿ, ‘ನವ್ಯ ಸಾಹಿತಿಗಳೊಂದಿಗೆ ಆಪ್ತ ಒಡನಾಟ ಹೊಂದಿದ್ದ ಕೃಷ್ಣ, ಸಾಹಿತ್ಯ ರಚನೆ ಮಾಡಲು ನನಗೂ ಹುರಿದುಂಬಿಸಿದರು. ವಿದ್ಯಾರ್ಥಿ ಜೀವನದಲ್ಲೇ ಶ್ರೀಕೃಷ್ಣ ಆಲನಹಳ್ಳಿ ‘ಸಮೀಕ್ಷಕ’ ಎಂಬ ಸಾಹಿತ್ಯ ಪತ್ರಿಕೆ ಆರಂಭಿಸಿದ್ದರು. ಆ ಕಾಲದಲ್ಲಿ ಯುವ ಸಾಹಿತಿಗಳ ಚಿಂತನೆಗಳಿಗೆ ಪತ್ರಿಕೆಯು ವೇದಿಕೆಯಾಗಿತ್ತು’ ಎಂದರು.

‘ಗ್ರಾಮೀಣ ಬದುಕಿನ ಸೊಗಡು, ಮಾನವ ಸಂಬಂಧಗಳ ಸೂಕ್ಷ್ಮತೆ ಮತ್ತು ಪ್ರಕೃತಿಯ ಅಂತರಾಳವನ್ನು ಅಚ್ಚುಕಟ್ಟಾಗಿ ಹಿಡಿದಿಟ್ಟ ಸೂಕ್ಷ್ಮ ಸಂವೇದನೆಯ ಲೇಖಕ ಅವರಾಗಿದ್ದರು’ ಎಂದು ಸ್ಮರಿಸಿದರು.

‘ಅಮೂಲ್ಯ ಪುಸ್ತಕ’ ಪ್ರಕಾಶಕ ಕೃಷ್ಣ ಚೆಂಗಡಿ ಮಾತನಾಡಿ, ‘ಶ್ರೀಕೃಷ್ಣ ಅವರ ತಪ್ತ, ಫೀನಿಕ್ಸ್ ಮತ್ತು ಅಪೂರ್ಣ ಕಥೆಗಳು ಎಂಬ ಮೂರು ಕಥಾ ಸಂಕಲನಗಳು ಒಟ್ಟಾಗಿ ‘ಸಮಗ್ರ ಕಥೆಗಳು’ ಪುಸ್ತಕವಾಗಿದ್ದು, 232 ಪುಟವಿದೆ’ ಎಂದರು.

ಶ್ರೀಕೃಷ್ಣ ಪತ್ನಿ ವಿನುತಾ ಆಲನಹಳ್ಳಿ, ಪುತ್ರ ಪ್ರದ್ಯುಮ್ನ ಆಲನಹಳ್ಳಿ, ಪುತ್ರಿ ಕೃತಿಕಾ ಆಲನಹಳ್ಳಿ, ಅಳಿಯ ಕಣ್ಣನ್, ಲೇಖಕ ಶಿವಾಗ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.