ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC ಫಲಿತಾಂಶ | ಶ್ರವಣದೋಷವುಳ್ಳ ವಿದ್ಯಾರ್ಥಿಗಳಿಗೆ ಪ್ರಥಮ ಶೇಣಿ

Published 9 ಮೇ 2023, 3:08 IST
Last Updated 9 ಮೇ 2023, 3:08 IST
ಅಕ್ಷರ ಗಾತ್ರ

ಮೈಸೂರು: ಬನ್ನಿಮಂಟಪದ ‘ಸಾಯಿರಂಗ ವಿದ್ಯಾಸಂಸ್ಥೆ– ಕಿವುಡು ಗಂಡು ಮಕ್ಕಳ ಉಚಿತ ವಸತಿ ಶಾಲೆ’ಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಶಾಲೆಗೆ ಶೇ 100 ಫಲಿತಾಂಶ ಸಂದಿದೆ.

ಶಾಲೆಯ 16 ವಿದ್ಯಾರ್ಥಿಗಳೂ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು, ಎಂ.ಎಂ.ರವಿಕುಮಾರ್‌ (ಶೇ 84.94) ಶಾಲೆಯ ಮೊದಲಿಗರಾಗಿದ್ದಾರೆ. ಮಹದೇವ (ಶೇ 81.88), ಎಲ್‌.ಲೋಕೇಶ (ಶೇ 81.41), ವಿ.ನಿತಿನ್ (ಶೇ 80.27) ಕೀರ್ತಿ ತಂದಿದ್ದಾರೆ.

ಎಂ.ಮನೋಜ್‌, ಎಲ್‌.ನರಸೇಗೌಡ, ಎಚ್‌.ಯು.ವರುಣ್, ಟಿ.ಬಾಲರಾಜ, ಸಿ.ಮನೋಜ್‌ ಅವರು ‘ಬಿ+’ ಶ್ರೇಣಿ, ಜೆ.ಎಲ್‌.ಜೀವನ್, ಪಿ.ಶಶಾಂಕ, ಸೋಹನ್‌ ಗೌಡ, ಬಿ.ಸಿ.ಸಿದ್ದಾಪ್ಪಾಜಿ, ಆರ್‌.ಜಗದೀಶ್, ಎಸ್‌.ಎಂ.ಶ್ರೀನಿವಾಸ, ಟಿ.ಎಂ.ಆಕಾಶ ‘ವಿ’ ಶ್ರೇಣೀಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಾಲೆಯ ‍ಪ್ರಕಟಣೆ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT