ಮೈಸೂರು: ‘ವಿದ್ಯಾರ್ಥಿಗಳು ಅಧಿಕಾರ ಮತು ಶೈಕ್ಷಣಿಕ ಸುಖದ ಹಿಂದೆಯಷ್ಟೇ ಹೋಗದೆ ಪರಿಪೂರ್ಣ ಜೀವನವನ್ನು ರೂಪಿಸಿಕೊಳ್ಳುವತ್ತ ಗಮನಹರಿಸಬೇಕು’ ಎಂದು ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ ಸಲಹೆ ನೀಡಿದರು.

ಇಲ್ಲಿನ ಜಯಲಕ್ಷ್ಮೀಪುರಂನ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ 13ನೇ ಪದವಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜೀವನದಲ್ಲಿ ಸಾಧಿಸಬೇಕಾದ ನಿರ್ದಿಷ್ಟ ಗುರಿಗಳತ್ತ ಹೆಚ್ಚಿನ ಗಮನ ಕೊಡುವುದು ವಿದ್ಯಾರ್ಥಿಗಳ ಆದ್ಯತೆ ಆಗಬೇಕು. ಕಾಲೇಜುಗಳು ದೇವಾಲಯವಿದ್ದಂತೆ. ಇಲ್ಲಿನ ಹಳೆಯ ವಿದ್ಯಾರ್ಥಿಗಳು ಭೇಟಿ ನೀಡುತ್ತಿರಬೇಕು’ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಬಿಮ್ಸ್ ನಿವೃತ್ತ ಪ್ರಾಧ್ಯಾಪಕ ಡಿ.ಆನಂದ್, ‘ಪದವಿ ನಂತರ ಯುವಜನತೆ ಸಾಮಾಜಿಕ - ನಾಗರಿಕ ಜವಾಬ್ಧಾರಿಗಳನ್ನು ಸ್ವೀಕರಿಸಲು ಸಿದ್ಧರಿರಬೇಕು. ದೇಶದ ಭವಿಷ್ಯವು ಯುವಕರ ಮೇಲೆ ಅವಲಂಬಿತವಾಗಿದ್ದು, ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು’ ಎಂದು ಸಲಹೆ ನೀಡಿದರು.

ಮೈಸೂರು ಧರ್ಮಕ್ಷೇತ್ರ ಶಿಕ್ಷಣ ಸೊಸೈಟಿಯ ಕಾರ್ಯದರ್ಶಿ ಎಡ್ವರ್ಡ್ ವಿಲಿಯಂ ಸಲ್ಡಾನ್ಹಾ ಸ್ವಾಗತಿಸಿದರು. ಖಜಾಂಚಿ ನವೀನ್ಕುಮಾರ್ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಚಂದ್ರಕಲಾ ಎನ್. ವಂದಿಸಿದರು.

ಪ್ರಶಸ್ತಿ ಪ್ರದಾನ:

ಶೈಕ್ಷಣಿಕ ಉತ್ಕೃಷ್ಟತೆಗಾಗಿ ಪ್ರೊ.ಮಣಿ ಸಿ. ಮ್ಯಾಥ್ಯೂ ದತ್ತಿ ಪ್ರಶಸ್ತಿಯನ್ನು ಪಲ್ಲವಿ ಎಂ. (ಬಿಕಾಂ), ಮೋಕ್ಷಾ ವೈ.ಎಸ್. (ಬಿಬಿಎ), ಇಂಚರಾ ಕೆ.ವಿ. (ಬಿಸಿಎ), ತ್ರಿಶಾ ಜಿ. (ಬಿ.ಎಸ್ಸಿ) ಪಡೆದರು.

ಅತ್ಯುತ್ತಮ ನಿರ್ಗಮಿತ ವಿದ್ಯಾರ್ಥಿ ಪ್ರಶಸ್ತಿಯನ್ನು ಸುಮನ್, ಅನ್ಬು ಪೌಲಿನ್ ಟಿ., ಸಂಜನಾ ದಮಯಂತಿ ಹಾಗೂ ದರ್ಶನ್ ಗಳಿಸಿದರು.

ಫ್ರೈಡ್ ಆಫ್ ಜೋಸೆಫ್ಸ್ ಪ್ರಶಸ್ತಿಗೆ ಸಿಂಚನಾ ಆರ್. ರೋಷನ್ ಡೆನೆಲ್ಡಿ ಆಲ್ಮೇಡಾ, ಪೃಥ್ವಿ ಪಿ. ಶೆಟ್ಟಿ, ದುರ್ಗಾಭವಾನಿ ಎನ್.ಎಲ್. ಮತ್ತು ಹಿಶಿತಾ ಸೋಮಯ್ಯ ಭಾಜನವಾದರು.

ಎನ್ಸಿಸಿ ಪ್ರಶಸ್ತಿಯನ್ನು ಪಲ್ಲವಿ ಟಿ.ಪಿ., ವಿನಂತಿ ಟಿ.ಎಸ್., ರಕ್ಷಾ ತಂಗಮ್ಮ ಮತ್ತು ಮೋಕ್ಷ್ ಪಿ.ಎನ್. ಗಳಿಸಿದರು.

ಎನ್ಎಸ್ಎಸ್ ಪ್ರಶಸ್ತಿಗೆ ವಿನಯ್ ಎಂ. ಗೌಡ, ಡಿಂಪಲ್ ಬಿ.ಬಿ. ಪಾತ್ರವಾದರು.

ಸ್ಪಿರಿಟೆಡ್ ಜೋಸೆಫೈಟ್ ಪ್ರಶಸ್ತಿಯು ಸುನೈನಾ ನರಸಿಂಹನ್, ಸಾಧ್ವಿ ಎಲ್., ಇಂದು ಆರ್., ವಿಶ್ವಾಸ್ ಎನ್., ವರಲಕ್ಷ್ಮಿ ಎಸ್. ಮತ್ತು ಲೆನಿನ್ ಶಾಲೋಮ್, ಕುಶಾಲ್ ಎಂ. ಮತ್ತು ಇಮ್ಯಾನ್ಯುವಲ್ ಸಿ. ಕುಮಾರ್ ಅವರಿಗೆ ದೊರೆಯಿತು.

ಪ್ರಾಂಶುಪಾಲರ ಪ್ರಶಸ್ತಿಯನ್ನು ಜೋನಾಥನ್ ಎ. ಪ್ರತಾಪ್ ಅವರಿಗೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.