ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರಿನತ್ತ ನವೋದ್ಯಮಗಳ ಚಿತ್ತ: ಏಕರೂಪ್‌ ಕೌರ್‌ ಅಭಿಮತ

ಬಿಗ್‌ಟೆಕ್‌ ಶೋ: ಐಟಿ, ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಏಕರೂಪ್‌ ಕೌರ್‌ ಅಭಿಮತ
Published : 20 ಸೆಪ್ಟೆಂಬರ್ 2024, 8:47 IST
Last Updated : 20 ಸೆಪ್ಟೆಂಬರ್ 2024, 8:47 IST
ಫಾಲೋ ಮಾಡಿ
Comments

ಮೈಸೂರು: ‘ಎರಡನೇ ಹಂತದ ನಗರಗಳ ಪೈಕಿ ಮೈಸೂರು ಅತ್ಯುತ್ತಮ ಮೂಲಸೌಲಭ್ಯ ಹೊಂದಿದೆ. ಈಗಾಗಲೇ 500 ನವೋದ್ಯಮಗಳಿದ್ದು, ಹೊಸದಾಗಿ 250 ಉದ್ಯಮಗಳು ಬರುತ್ತಿವೆ’ ಎಂದು ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಏಕರೂಪ್‌ ಕೌರ್‌ ಹೇಳಿದರು. 

ಇಲ್ಲಿನ ಇನ್ಫೊಸಿಸ್‌ ಕ್ಯಾಂಪಸ್‌ನಲ್ಲಿ ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌ (ಕೆಡಿಇಎಂ) ‘ಬಿಯಾಂಡ್‌ ಬೆಂಗಳೂರು’ ಅಭಿಯಾನದಡಿ ಗುರುವಾರ ಆಯೋಜಿಸಿದ್ದ ‘ದಿ ಬಿಗ್‌ ಟೆಕ್ ಶೋ’ನ ಸಮಾರೋಪದಲ್ಲಿ ಮಾತನಾಡಿದರು.

‘ನಗರಕ್ಕೆ ಈಗ ಹೊಸದಾಗಿ 8 ಕಂಪನಿಗಳು ಬಂದಿವೆ. ಕೋಚನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಸೆಮಿ ಕಂಡಕ್ಟರ್‌ ಪಾರ್ಕ್‌ ಸ್ಥಾಪಿಸಲಾಗುತ್ತಿದೆ’ ಎಂದರು.

‘ವಿನ್ಯಾಸ್‌, ಕೇನ್ಸ್‌, ಇಟಿಎಂಎಸ್‌ ಅಂಥ ಎಲೆಕ್ಟ್ರಾನಿಕ್ಸ್ ಕಂಪನಿಗಳೂ ನಗರದಲ್ಲಿ ನೆಲೆ ಕಂಡುಕೊಂಡಿವೆ. ಉದ್ಯಮಸ್ನೇಹಿ ನಗರವಾಗಲು ಸರ್ಕಾರವು ಅಗತ್ಯ ನೆರವು ನೀಡುತ್ತಿದೆ. ಮಹಿಳಾ ಉದ್ಯಮಿಗಳಿಗೂ ಬೆಂಬಲ ನೀಡುತ್ತಿದೆ’ ಎಂದು ಹೇಳಿದರು.

ಕೆಡಿಇಎಂ ಶ್ರಮ: ‘ಮೈಸೂರು, ಹುಬ್ಬಳ್ಳಿ– ಧಾರವಾಡ, ಬೆಳಗಾವಿ, ಮಂಗಳೂರು ನಗರಗಳಲ್ಲಿ ಉದ್ಯಮಗಳ ಸ್ಥಾಪಿಸುವ ವಾತಾವರಣ ನಿರ್ಮಿಸಲು ಕೆಡಿಇಎಂ ಶ್ರಮಿಸುತ್ತಿದೆ’ ಎಂದರು.

‘ಜಾಗತಿಕ ಕಂಪನಿಗಳು ದೇಶದಲ್ಲಿ ಘಟಕಗಳನ್ನು ತೆರೆಯಲು ಹಾಗೂ ಹೂಡಿಕೆಗೆ ಮುಂದಾಗಿವೆ. ರಾಜ್ಯ ಸರ್ಕಾರವು ಜಾಗತಿಕ ಸಾಮರ್ಥ್ಯ ಕೇಂದ್ರ ನೀತಿ (ಜಿಸಿಸಿ) ಕರಡು ಪ್ರತಿಯನ್ನು ಬಿಡುಗಡೆ ಮಾಡುತ್ತಿದೆ. ನೀತಿ ಜಾರಿಗೊಳಿಸಿದ ಮೊದಲ ರಾಜ್ಯ ಎನಿಸಲಿದೆ’ ಎಂದು ತಿಳಿಸಿದರು.

‘ಬೆಂಗಳೂರು ಮಾದರಿಯಲ್ಲೇ ಎಲ್ಲ ನಗರಗಳಲ್ಲಿ ಜಾಗತಿಕ ಮಟ್ಟದ ಸೌಕರ್ಯ ಒದಗಿಸಲಾಗುವುದು. ಉದ್ಯಮ, ಕೈಗಾರಿಕೆಗಳ ತಂತ್ರಜ್ಞಾನ ಪರಿಚಯಿಸಲು ‘ಟೆಕ್‌ ಯಾತ್ರಾ’ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

ಕೆಡಿಇಎಂ ಸಿಇಒ ಸಂಜೀವ್ ಗುಪ್ತಾ, ಗ್ಲೋಬಲ್‌ ಫ್ಯಾಬ್‌ ಎಂಜಿನಿಯರಿಂಗ್‌ನ ಜಿತೇಂದ್ರ ಛಡ್ಡ ಪಾಲ್ಗೊಂಡಿದ್ದರು.

‘ನಗರದಲ್ಲಿ ಎಲ್ಲ ಸೌಲಭ್ಯ’

ಇನ್ಫೊಸಿಸ್‌ ಉಪಾಧ್ಯಕ್ಷ ವಿನಾಯಕ ಹೆಗಡೆ ಮಾತನಾಡಿ ‘ಮೈಸೂರು ಪ್ರತಿಭಾವಂತ ತಂತ್ರಜ್ಞರನ್ನು ಇಲ್ಲಿನ ಕಾಲೇಜುಗಳು ರೂಪಿಸುತ್ತಿವೆ. ಇನ್ಫೊಸಿಸ್‌ ಕ್ಯಾಂಪಸ್‌ನಲ್ಲೇ 15 ಸಾವಿರ ಮಂದಿ ಇದ್ದಾರೆ. ಇಲ್ಲಿ ಕಟ್ಟಡ ನಿರ್ಮಾಣ ಮೂಲಸೌಕರ್ಯ ಸೇರಿದಂತೆ ಎಲ್ಲ ಅಭಿವೃದ್ಧಿಗೆ ನುರಿತ ತಜ್ಞರು ಮಾನವ ಸಂಪನ್ಮೂಲ ಸಿಗುತ್ತಿದೆ’ ಎಂದರು. ಪಾತ್‌ ಕಂಪನಿಯ ನಿರ್ದೇಶಕ ನೀರಜ್‌ ಜೈನ್ ‘ಕೋವಿಡ್‌ ನಂತರ ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಾಗಿದೆ’ ಎಂದು ತಿಳಿಸಿದರು. ಕೆಡೆಮ್ ಅಧ್ಯಕ್ಷ ಬಿ.ವಿ. ನಾಯ್ಡು ಮಾತನಾಡಿದರು.

ಕಂಪನಿಗಳ ಒಪ್ಪಂದ ಉತ್ಪನ್ನ ಬಿಡುಗಡೆ

‘ಪೈಫ್ಲೈ’ ಇಂಕ್ಚರ್ ಟೆಕ್ನಾಲಜಿ ಅಗಮಿನ್ ಸ್ಟಾರ್‌ಲೈಟ್‌ ಎನ್‌ವೆಂಚರ್‌ ಆರ್‌ಪ್ರೊಸೆಸ್‌ ಪ್ರೊಟೆಕ್ಟಿವ್ ಎಡ್ಜ್ ಜೋಡೆತ್ತು ಬಿಲ್ಡಿಂಗ್ ಫಾಸ್ಟರ್ ರ‍್ಯಾಂಕ್‌ಬುಕ್ ಟೌನರ್‌ ಒಐಟ್ ಮಾಮಾ ಮಿಲ್ಸ್ ಕ–ಣಾದ ಕಂಪನಿಗಳ ಉತ್ಪನ್ನ ಬಿಡುಗಡೆ ಮಾಡಲಾಯಿತು. ಘಟಕ ತೆರೆಯಲು ಕೆಡಿಇಎಂ ಜೊತೆ ಒಪ್ಪಂದ ಮಾಡಿಕೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT