ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಮಟ್ಟದ ಕವನ, ಕಥಾ ಸ್ಪರ್ಧೆ

Last Updated 26 ಜನವರಿ 2023, 13:01 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಸಮತಾ ಅಧ್ಯಯನ ಕೇಂದ್ರವು ಸ್ಥಾಪಕ ಅಧ್ಯಕ್ಷೆ ಡಾ.ವಿಜಯಾ ದಬ್ಬೆ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ-2023ಯನ್ನು ಆಯೋಜಿಸಿದೆ.

ಮಹಿಳಾ ಕೇಂದ್ರಿತ ವಸ್ತು ವಿಷಯ ನಿಗದಿಪಡಿಸಲಾಗಿದೆ. ಕವನ ಸ್ಪರ್ಧೆಗೆ ಎರಡು ಕವನ, ಕಥಾ ಸ್ಪರ್ಧೆಗೆ ಒಂದು ಕಥೆ ಕಳುಹಿಸಬೇಕು. ಈ ಮೊದಲು ಎಲ್ಲೂ ಪ್ರಸಾರ ಅಥವಾ ಪ್ರಕಟವಾಗಿರಬಾರದು. ಕಥೆಗೆ ಗರಿಷ್ಠ ಪದಮಿತಿ 2,500 ಪದಗಳು. 26 ವರ್ಷ ವಯಸ್ಸಿನವರಾಗಿರಬೇಕು. ಫೆ.28ರ ಒಳಗೆ ಕಳುಹಿಸಬೇಕು.

ಮೊದಲ ಮೂರು ಬಹುಮಾನ ಪಡೆದವರಿಗೆ ಕ್ರಮವಾಗಿ ₹5ಸಾವಿರ, ₹3ಸಾವಿರ, ₹2ಸಾವಿರ ನೀಡಲಾಗುವುದು. ತೀರ್ಪುಗಾರರು ಮೆಚ್ಚಿದ ಹತ್ತು ಕಥೆಗಳಿಗೆ ತಲಾ ₹1ಸಾವಿರ ಪ್ರೋತ್ಸಾಹಕರ ಬಹುಮಾನ ಕೊಡಲಾಗುವುದು. ವಿಜೇತರು ಮತ್ತು ಪ್ರೋತ್ಸಾಹಕರ ಬಹುಮಾನ ಪಡೆದವರಿಗೆ ಮೇ ಕೊನೆಯ ವಾರದಲ್ಲಿ ಕಾವ್ಯ ಮತ್ತು ಕಥಾ ಕಮ್ಮಟ ನಡೆಸಲಾಗುವುದು. ಹೆಚ್ಚಿನ ಮಾಹಿತಿಯನ್ನು samathaadhyayanakendra2023@gmail.com ಮೂಲಕ ಪಡೆಯಬಹುದು ಎಂದು ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷೆ ಸಬಿಹಾ ಭೂಮಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT